ರಾಮನಗರ ಜಿಲ್ಲೆಯಲ್ಲಿ ಜ. 3ರಂದು 300 ಕೋಟಿ ವೆಚ್ಚದಲ್ಲಿ ವಿವಿಧ ಬಗೆಯ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಶಂಕು ಸ್ಥಾಪನೆ
ರಾಮನಗರ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಮಾಜ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ ಜಿಲ್ಲಾ ನಗರಾಭಿವೃದ್ಧಿ ಕೋಶ, ನಗರಾಭಿವೃದ್ಧಿ ಪ್ರಾಧಿಕಾರ ತಾಂತ್ರಿಕ ಶಿಕ್ಷಣ ಇಲಾಖೆ, ಆಯುಷ್ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಲೋಕೋಪಯೋಗಿ ಇಲಾಖೆ, ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು ವಿಶ್ವವಿದ್ಯಾನಿಲಯದ ಸಂಯುಕ್ತಾಶ್ರಯದಲ್ಲಿ ಜನವರಿ 03 ರಂದು ಬೆಳಿಗ್ಗೆ 10.30 ಕ್ಕೆ ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಸಂವಿಧಾನ ಶಲ್ಪಿ ಭಾರತ ರತ್ನ, ವಿಶ್ವ ಜ್ಞಾನಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಲೋಕಾರ್ಪಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನಡೆಯಲಿದೆ.
ಕರ್ನಾಟಕ ಸರ್ಕಾgದ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರು ಪ್ರತಿಮೆಗಳನ್ನು ಲೋಕಾರ್ಪಣೆ ಮಾಡಲಿದ್ದು ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ತಂತ್ರಜ್ಞಾನ, ಕೌಶಲ್ಯ ಅಭಿವೃಧ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವರು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಸಿ.ಎನ್.ಅಶ್ವತ್ಥನಾರಾಯಣ, ಕಂದಾಯ ಇಲಾಖೆ ಸಚಿವ ಆರ್ ಆಶೋಕ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ, ಕೋಟಾ ಶ್ರೀನಿವಾಸ ಪೂಜಾರಿ, ಪಶುಸಂಗೋಪನಾ ಸಚಿವ ಪ್ರಭು ಬಿ. ಚೌವ್ಹಾಣ್, ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್, ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಗಣಿ ಮತ್ತು ಭೂ ವಿಜಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯನಾಗರೀಕ ಸಬಲೀಕರಣ ಇಲಾಖೆ ಸಚಿವ ಆಚಾರ ಹಾಲಪ್ಪ ಬಸಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಈಶ್ವರಪ್ಪ .ಕೆ.ಎಸ್, ನಗರಾಭಿವೃದ್ಧಿ ಸಚಿವ ಬಿ.ಎ ಬಸವರಾಜ್ (ಬೈರತಿ) ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್, ಪೌರಾಡಳಿತ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎನ್ ನಾಗರಾಜ್ ಎಂ.ಟಿ.ಬಿ, ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ ಪಾಟೀಲ್ ಅವರುಗಳು ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿ ವಹಿಸಲಿದ್ದಾರೆ.
ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿತಾ ಕುಮಾರಸ್ವಾಮಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದಾರೆ, ಬೆಂಗಳೂರು (ಗ್ರಾ) ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ ಸುರೇಶ್, ಚಿಕ್ಕಬಳ್ಳಾಪುರ ಲೋಕಸಭಾ ಸಂಸದ ಬಿ.ಎನ್ ಬಚ್ಚೇಗೌಡ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್. ಡಿ. ಕುಮಾರಸ್ವಾಮಿ, ಕನಕಪುರ ವಿದಾನಸಭಾ ಕ್ಷೇತ್ರದ ಶಾಸಕ ಡಿ.ಕೆ ಶಿವಕುಮಾರ್, ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಎ. ಮಂಜುನಾಥ್, ನೆಲಮಂಗಲ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಕೆ. ಶ್ರೀನಿವಾಸ್ ಮೂರ್ತಿ, ವಿಧಾನ ಪರಿಷತ್ ಶಾಸಕರಾದ ಸಿ.ಎಂ ಲಿಂಗಪ್ಪ, ಪುಟ್ಟಣ್ಣ, ಸಿ,ಪಿ ಯೋಗೇಶ್ವರ್, ಎಸ್.ರವಿ, ಅ.ದೇವೇಗೌಡ, ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ರುದ್ರೇಶ್, ರಾಮನಗರ ನಗರ ಸಭೆ ಅಧ್ಯಕ್ಷೆ ಪಾರ್ವತಮ್ಮ ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಆಗುವ ಕಾಮಗಾರಿಗಳ ವಿವರ
• ಸಮಾಜ ಕಲ್ಯಾಣ ಇಲಾಖೆ ವತಿಯಿಂದ 59.60 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ಡಾ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ.
• ಜಿಲ್ಲಾ ಪಂಚಾಯತ್ ವತಿಯಿಂದ 63.82 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ ಅನಾವರಣ.
• 49.90 ಕೋಟಿ ರೂ ವೆಚ್ಚದಲ್ಲಿ ಜೀಗೆನಹಳ್ಳಿಯಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯ ರಾಮನಗರ ಸ್ನಾತಕೋತ್ತರ ಕೇಂದ್ರದ ಶಂಕು ಸ್ಥಾಪನೆ.
• ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಚನ್ನಪಟ್ಟಣ ತಾಲ್ಲೂಕಿನ ಮೊಳೆ ಗ್ರಾಮದಲ್ಲಿ 37 ಮನೆಗಳಿಗೆ, ಗೋವಿಂದಳ್ಳಿ ಗ್ರಾಮದಲ್ಲಿ 61 ಮನೆಗಳಿಗೆ, ವಾಲೆತೊಪು ಗ್ರಾಮದಲ್ಲಿ 31 ಮನೆಗಳಿಗೆ, ದಾಸೆಗೌಡನದೊಡ್ಡಿಯಲ್ಲಿ ಗ್ರಾಮದಲ್ಲಿ 88 ಮನೆಗಳಿಗೆ, ಲಾಳಘಟ್ಟ ಗ್ರಾಮದಲ್ಲಿ 113 ಮನೆಗಳಿಗೆ, ಕನಕಪುರ ತಾಲ್ಲೂಕಿನ ಕೆಂಪಾಲನಾಥ ಗ್ರಾಮದಲ್ಲಿ 64 ಮನೆಗಳಿಗೆ, ಚಿಕಬ್ಬಳ್ಳಿ ಗ್ರಾಮದಲ್ಲಿ 84 ಮನೆಗಳಿಗೆ, ಡಿ.ಕೆ ಶಿವನಗರ ಗ್ರಾಮದಲ್ಲಿ 180 ಮನೆಗಳಿಗೆ, ಹೆಗ್ಗನೂರು ಗ್ರಾಮದಲ್ಲಿ 67 ಮನೆಗಳಿಗೆ, ಜವನಮ್ಮನಡೊಡ್ಡಿ ಗ್ರಾಮದಲ್ಲಿ 118 ಮನೆಗಳಿಗೆ, ಇಂದಿರಾನಗರ ಗ್ರಾಮದಲ್ಲಿ 29 ಮನೆಗಳಿಗೆ, ಕಲ್ಲೆಗೌಡನದೊಡ್ಡಿ ಗ್ರಾಮದಲ್ಲಿ 93 ಮನೆಗಳಿಗೆ, ಅರಳಾಳಸಂದ್ರ ಗ್ರಾಮದಲ್ಲಿ 180 ಮನೆಗಳಿಗೆ ಒಟ್ಟು 1145 ಮನೆಗಳಿಗೆ 2.60 ಕೋಟಿ ರೂ ವೆಚ್ಚದಲ್ಲಿ ಕಾರ್ಯತ್ಮಕ ನಳಸಂಪರ್ಕ ಕಲ್ಪಿಸುವ ಕಾಮಗಾರಿಯ ಉದ್ಘಾಟನೆ.
• ಕನಕಪುರ ಟೌನ್‍ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣವಾಗಿರುವ 2.77 ಕೋಟಿ ರೂ ವೆಚ್ಚದ ಮಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ಉದ್ಘಾಟನೆ.
• ಅಲ್ಪಾಸಂಖ್ಯಾತ ಕಲ್ಯಾಣ ಇಲಾಖೆ ವತಿಯಿಂದ 5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಮೆಟ್ರಕ್ ನಂತರದ ಬಾಲಕಿಯರ ಹಾಗೂ ಬಾಲಕರ ವಿದ್ಯಾರ್ಥಿ ನಿಲಯದ ಕಟ್ಟಡದ ನಿರ್ಮಾಣದ ಶಂಕು ಸ್ಥಾಪನೆ.
• ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಹಾಗೂ ಮಾಕಳಿ ಗ್ರಾಮದಲ್ಲಿ 4.50 ಕೋಟಿ ರೂ ವೆಚ್ಚದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡಗಳ ಉದ್ಘಾಟನೆ.
• ಚನ್ನಪಟ್ಟಣ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 4.95 ಕೋಟಿ ರೂ ವೆಚ್ಚದಲ್ಲಿ ಹೆಚ್ಚುವರಿ ಕೊಠಡಿಗಳ ಉದ್ಘಾಟನೆ.
• ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣ ಗ್ರಾಮ, ಮಾಕಳಿ ಗ್ರಾಮ, ಚಕ್ಕಲೂರು ಗ್ರಾಮ, ಕನಕಪುರ ತಾಲ್ಲೂಕಿನ ಅಚ್ಚಲು ಗ್ರಾಮ, ಕಚುವನಹಳ್ಳಿ ಗ್ರಾಮದಲ್ಲಿ 1.75 ಕೋಟಿ ರೂ ವೆಚ್ಚದಲ್ಲಿ ಪಶು ಚಿಕಿತ್ಸೆಗಾಗಿ ಕಟ್ಟಡಗಳ ನಿರ್ಮಾಣವಾಗಿರುವ ಕಟ್ಟಡಗಳ ಉದ್ಘಾಟನೆ.
• ಜಿಲ್ಲಾ ನಗರಾಭಿವೃದ್ಧಿ ಕೋಶ ಇಲಾಖೆ ವತಿಯಿಂದ ರಾಮನಗರ ನಗರಸಭೆ ವ್ಯಾಪ್ತಿಯ ವಾರ್ಡ್ ನಂ. 7 ರಲ್ಲಿ ನಿರ್ಮಿಸಲಾಗಿರುವ ಸೇತುವೆಗೆ ಬಿ.ಎಂ. ರಸ್ತೆಯಿಂದ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಾಸ್ಥಾನದವರೆಗೆ 1.08 ಕೋಟಿ ರೂ ವೆಚ್ಚದಲ್ಲಿ ಸಂಪರ್ಕ ರಸ್ತೆ ಕಾಮಗಾರಿ ಉದ್ಘಾಟನೆ.
• ಆಯುಷ್ ಇಲಾಖೆ ವತಿಯಿಂದ 56.25 ಲಕ್ಷ ರೂ ವೆಚ್ಚದಲ್ಲಿ ರಾಮನಗರ ತಾಲ್ಲೂಕಿನಲ್ಲಿ ಸರ್ಕಾರಿ ಯೂನಾನಿ ಆಸ್ಪತ್ರೆ ನಿರ್ಮಾಣದ ಶಂಕು ಸ್ಥಾಪನೆ.
• ಪ್ರವಾಸೋದ್ಯಮ ಇಲಾಖೆ ವತಿಯಿಂದ 2 ಕೋಟಿ ರೂ ವೆಚ್ಚದಲ್ಲಿ ಚನ್ನಪಟ್ಟಣ ತಾಲ್ಲೂಕಿನ ಇಗ್ಗಲೂರು ಡ್ಯಾಂ ಬಳಿ ಪ್ರಾವಸಿ ಸೌಲಭ್ಯ ಕಾಮಗಾರಿಗಳ ಶಂಕುಸ್ಥಾಪನೆ.
• ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅರಳಿಮರದದೊಡ್ಡಿ, ಕನಕಪುರ ತಾಲ್ಲೂಕಿನ ಮುನಿನಗರ, ಚನ್ನಪಟ್ಟಣ ತಾಲ್ಲೂಕಿನ ಲಂಬಾಣಿ ತಾಂಡ್ಯ, ಇರುಳಿಗರ ದೊಡ್ಡಿ, ಗರಕಹಳ್ಳಿಯಲ್ಲಿ 76 ಲಕ್ಷ ರೂ ವೆಚ್ಚದಲ್ಲಿ 5 ಅಂಗನವಾಡಿ ಕೇಂದ್ರ ಕಟ್ಟಡ ಉದ್ಘಾಟನೆ.
• ಆರೋಗ್ಯ ಇಲಾಖೆ ವತಿಯಿಂದ ರಾಮನಗರ ಕಂದಾಯ ಭವನದಲ್ಲಿರುವ ಕೋವಿಡ್ ರೆಫೆರಲ್ ಆಸ್ಪತ್ರೆ ಹಾಗೂ ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ 1.88 ಕೋಟಿ ರೂ ವೆಚ್ಚದಲ್ಲಿ ಪಿ.ಎಸ್.ಎ ಆಕ್ಸಿಜನ್ ಪ್ಲಾಂಟ್ ಉದ್ಘಾಟನೆ.
• ಚನ್ನಪಟ್ಟಣ ತಾಲ್ಲೂಕಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 2 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಗ್ರಂಥಾಲಯ ಕಟ್ಟಡದ ಉದ್ಘಾಟನೆ.
• ಕಂದಾಯ ಇಲಾಖೆ ವತಿಯಿಂದ 18.84 ಲಕ್ಷ ರೂ ವೆಚ್ಚದಲ್ಲಿ ರಾಮನಗರ ತಾಲ್ಲೂಕಿನÀ ಕೈಲಾಂಚದಲ್ಲಿ ನಾಡ ಕಛೇರಿ ಶಂಕು ಸ್ಥಾಪನೆ.
• ರಾಮನಗರ ನಗಾರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಕೆಂಗಲ್ ಹನುಮಂತಯ್ಯ ಅಭಿವೃದ್ಧಿ ಭವನದಲ್ಲಿ 11.50 ಲಕ್ಷ ರೂ ವೆಚ್ಚದಲ್ಲಿ ಡಿಜಿಟಲ್ ಆರ್.ಓ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟನೆ.
• ರಾಮನಗರ ನಗರಾಭಿವೃದ್ದಿ ಪ್ರಾಧಿಕಾರ ವತಿಯಿಂದ 17.05 ಲಕ್ಷ ರೂ ವೆಚ್ಚದಲ್ಲಿ ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಕಟ್ಟಡದ ಮೇಲ್ಛಾವಣಿಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಕೆ ಉದ್ಘಾಟನೆ.
• ತಾಂತ್ರಿಕ ಶಿಕ್ಷಣ ಕಲ್ಯಾಣ ಇಲಾಖೆ ವತಿಯಿಂದ 7.45 ಕೋಟಿ ರೂ ವೆಚ್ಚದಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ರಾಮನಗರ ಪಟ್ಟಣದಲ್ಲಿರುವ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಟ್ಟಡದ ಎರಡನೇ ಮತ್ತು ಮೂರನೇ ಮಹಡಿ ಕಟ್ಟಡ ಹಾಗೂ ಸರ್ಕಾರಿ ಪಾಲಿಟೆಕ್ನಿಕ್‍ನ ಎರಡನೇ ಮಹಡಿಯ ಕಟ್ಟಡ ಉದ್ಘಾಟನೆ.
• ತಾಂತ್ರಿಕ ಶಿಕ್ಷಣ ಕಲ್ಯಾಣ ಇಲಾಖೆ ವತಿಯಿಂದ 2.50 ಕೋಟಿ ರೂ ವೆಚ್ಚದಲ್ಲಿ ಅರ್ಚಕರಹಳ್ಳಿಯಲ್ಲಿ ಸರ್ಕಾರಿ ಪಾಲಿಟೆಕ್ನಿಕಿ ಬಾಲಕಿಯರ ವಸತಿನಿಲಯದ ಉದ್ಘಾಟನೆ.
• ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ 38.50 ಲಕ್ಷ ರೂ ವೆಚ್ಚದ ಸ್ಕಿಲ್-ಹಬ್ ಕಾರ್ಯಕ್ರಮದ ಉದ್ಘಾಟನೆ.
ಜನವರಿ 03 ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಜನವರಿ 03 ರಂದು ಮಧ್ಯಾಹ್ನ 1 ಗಂಟೆಗೆ ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯಾ ಗ್ರಾಮದಲ್ಲಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಸಂಕೀರ್ಣದ ಶಂಕು ಸ್ಥಾಪನಾ ಸಮಾರಂಭ ಹಾಗೂ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನಡೆಯಲಿದೆ.
ಕರ್ನಾಟಕ ಸರ್ಕಾgದÀ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಂಕುಸ್ಥಾಪನೆ ನೆರೆವೇರಿಸಲಿದ್ದು ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ತಂತ್ರಜ್ಞಾನ, ಕೌಶಲ್ಯ ಅಭಿವೃಧ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವರಾದ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು ಘನ ಉಪಸ್ಥಿತಿ ವಹಿಸಲಿದ್ದಾರೆ
ಮಾಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಮಂಜುನಾಥ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದಾರೆ, ಬೆಂಗಳೂರು (ಗ್ರಾ) ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ ಸುರೇಶ್, ಚಿಕ್ಕಬಳ್ಳಾಪುರ ಲೋಕಸಭಾ ಸಂಸದ ಬಿ.ಎನ್ ಬಚ್ಚೇಗೌಡ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್. ಡಿ. ಕುಮಾರಸ್ವಾಮಿ, ಕನಕಪುರ ವಿದಾನಸಭಾ ಕ್ಷೇತ್ರದ ಶಾಸಕ ಡಿ.ಕೆ ಶಿವಕುಮಾರ್, ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿತಾ ಕುಮಾರಸ್ವಾಮಿ, ನೆಲಮಂಗಲ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಕೆ. ಶ್ರೀನಿವಾಸ್ ಮೂರ್ತಿ, ವಿಧಾನ ಪರಿಷತ್ ಶಾಸಕರಾದ ಸಿ.ಎಂ ಲಿಂಗಪ್ಪ, ಪುಟ್ಟಣ್ಣ, ಸಿ,ಪಿ ಯೋಗೇಶ್ವರ್, ಎಸ್.ರವಿ, ಅ.ದೇವೇಗೌಡ, ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ರುದ್ರೇಶ್, ಮಾಗಡಿ ಪುರಸಭೆÉ ಅಧ್ಯಕ್ಷೆ ವಿಜಯಾ ರೂಪೇಶ್ ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಉದ್ಘಾಟನೆಯಾಗುವ ಅಥವಾ ಶಂಕುಸ್ಥಾಪನೆ ಕಾಮಗಾರಿಗಳ ವಿವಿರ
• ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಇವರ ವತಿಯಿಂದ 25.0 ಕೋಟಿ ರೂ ವೆಚ್ಚದಲ್ಲಿ ಸಂಸ್ಕøತ ವಿಶ್ವವಿದ್ಯಾನಿಲಯದ ಅಧ್ಯಯನ ಕೇಂದ್ರದ ಶಂಕು ಸ್ಥಾಪನೆ.
• ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ 54.36 ಕೋಟಿ ರೂ ವೆಚ್ಚದಲ್ಲಿ ಮಾಗಡಿ ತಾಲ್ಲೂಕು ಚಿಕ್ಕಕಲ್ಯಾ ಗ್ರಾಮದಲ್ಲಿ ಜಿ.ಟಿ.ಟಿ.ಸಿ ಕಟ್ಟಡ, ವಿದ್ಯಾರ್ಥಿನಿಲಯ, ಸಿಬ್ಬಂದಿ ಗೃಹಕಟ್ಟಡಗಳ (ತರಬೇತಿ ಸಂಕೀರ್ಣ) ಶಂಕುಸ್ಥಾಪನೆ
• ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ ವತಿಯಿಂದ 98.20 ಕೋಟಿ ರೂ ವೆಚ್ಚದಲ್ಲಿ ಬಿಡದಿ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಚಾಲನೆ
• ಗ್ರಂಥಾಲಯ ಇಲಾಖೆ ವತಿಯಿಂದ 52 ಲಕ್ಷ ರೂ ವೆಚ್ಚದಲ್ಲಿ ಮಾಗಡಿ ಶಾಖಾ ಗ್ರಂಥಾಲಯದ ನೂತನ ಕಟ್ಟಡ ಉದ್ಘಾಟನೆ.
• ಆರೋಗ್ಯ ಇಲಾಖೆ ವತಿಯಿಂದ 2.50 ಕೋಟಿ ರೂ ವೆಚ್ಚದಲ್ಲಿ ಮೊಟಗಾನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಮತ್ತು ಸಿಬ್ಬಂದಿ ವಸತಿ ಗೃಹ ಕಟ್ಟಡಗಳ ಉದ್ಘಾಟನೆ.
• ಆಯುಷ್ ಇಲಾಖೆ ವತಿಯಿಂದ 37.50 ಲಕ್ಷ ರೂ ವೆಚ್ಚದಲ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಕಟ್ಟಡ ನಿರ್ಮಾಣ ಕಾಮಗಾರಿ ಚಾಲನೆ.
• ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಜಾಲಮಂಗಲದ ಅಂಗನವಾಡಿ ಕೇಂದ್ರ, ತಿಗಳರದೊಡ್ಡಿ ಅಂಗನವಾಡಿ ಕೇಂದ್ರ, ಅಂಗರಪಾಳ್ಯ ಅಂಗನವಾಡಿ ಕೇಂದ್ರ, ಮಂಚನಬೆಲೆ ಅಂಗನವಾಡಿ ಕೇಂದ್ರ, ಹಂಚಿಕುಪ್ಪೆ ಅಂಗನವಾಡಿ ಕೇಂz,À್ರ ಕೋಡಿಹಳ್ಳಿ ಕಾಲೋನಿ ಅಂಗನವಾಡಿ ಕೇಂದ್ರ, ನಿಶಬ್ದನಗರ ಅಂಗನವಾಡಿ ಕೇಂದ್ರ, ಎನ್. ಹೊಸಪಾಳ್ಯ ಅಂಗನವಾಡಿ ಕೇಂದ್ರ, ಅಂಡಲಿಂಗಯ್ಯನಪಾಳ್ಯ ಕಲೋನಿ ಅಂಗನವಾಡಿಗಳಿಗೆ ಒಟ್ಟು 1.22 ಕೋಟಿ ರೂ ವೆಚ್ಚದಲ್ಲಿ ಅಂಗನವಾಡಿ ಕೇಂದ್ರಗಳ ಕಟ್ಟಡ ಉದ್ಘಾಟನೆ.
• ಲೋಕೋಪಯೋಗಿ ಇಲಾಖೆ ವತಿಯಿಂದ 2.50 ಕೋಟಿ ರೂ ವೆಚ್ಚದಲ್ಲಿ ಎನ್.ಎಚ್ 75 ಮುಖ್ಯ ರಸ್ತೆಯಿಂದ ಚಿಕ್ಕಕಲ್ಯಾ ಮಾರ್ಗವಾಗಿ ಸಂಕೀಘಟ್ಟ, ನಾರಯಣಪುರ, ಅಡಲಿಂಗಯ್ಯನಪಾಳ್ಯ, ಮುಳ್ಳಕಟಮ್ಮನಪಾಳ್ಯ, ಸಣ್ಣೇನಹಳ್ಳಿ ತಾವರೆಕೆರೆಯವರೆಗೆ ಸುಮಾರು 10 ಕಿ.ಮೀ ರಸ್ತೆ ಅಭಿವೃದ್ಧಿ ಕಾರ್ಯಕ್ರಮದ ಉದ್ಘಾಟನೆ.
• ಸಮಾಜ ಕಲ್ಯಾಣ ಇಲಾಖೆ ವತಿಯಿಂದ 3.84 ಕೋಟಿ ರೂ ವೆಚ್ಚದಲ್ಲಿ ಕುದೂರು ಗ್ರಾಮದಲ್ಲಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯ ಶಂಕು ಸ್ಥಾಪನೆ.
• ಬೆಸ್ಕಾಂ (ಮಾಗಡಿ) ವತಿಯಿಂದ 1.60 ಕೋಟಿ ರೂ ವೆಚ್ಚದ ಬೈಚಾಪುರ ರಸ್ತೆಯಲ್ಲಿನ ಬೆಸ್ಕಾಂ ವಿಭಾಗ ಕಛೇರಿ ಕಟ್ಟಡ ಉದ್ಘಾಟನೆ.
• ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2.0 ಕೋಟಿ ರೂ ವೆಚ್ಚದಲ್ಲಿ ಅಜ್ಜನಹಳ್ಳಿಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿನಿಲಯಕ್ಕೆ ಚಾಲನೆ.
• ಅಲ್ಪಾಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2.0 ಕೋಟಿ ರೂ ವೆಚ್ಚದಲ್ಲಿ ಮಾಗಡಿ ಟೌನ್ ನ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದ ಉದ್ಘಾಟನೆ.
• ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಮಾಗಡಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅರಳಿಮರದೊಡ್ಡಿ ಗ್ರಾಮದಲ್ಲಿ 72 ಮನೆಗಳಿಗೆ, ಗುಂಗಾರಹಳ್ಳಿ ಗ್ರಾಮದಲ್ಲಿ 167 ಮನೆಗಳಗೆ, ಅನುಮನಹಳ್ಳಿ ಗ್ರಾಮದಲ್ಲಿ 113 ಮನೆಗಳಿಗೆ, ಕರಿಯನಪಾಳ್ಯ ಗ್ರಾಮದಲ್ಲಿ 24 ಮನೆಗಳಿಗೆ, ಉಕ್ಕಡ ಗ್ರಾಮದಲ್ಲಿ 76 ಸೇರಿದಂತೆ ಒಟ್ಟು 452 ಮನೆಗಳಿಗೆ 1.29 ಕೋಟಿ ರೂ ವೆಚ್ಚದಲ್ಲಿ ಕಾರ್ಯತ್ಮಕ ನಳಸಂಪರ್ಕ ಕಲ್ಪಿಸುವ ಕಾಮಗಾರಿಯನ್ನು ಉದ್ಘಾಟಿಸಲಾಗುವುದು.