ಎರಡು ತಿಂಗಳಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯಕ್ಕೆ ಶಂಕುಸ್ಥಾಪನೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ರಾಮನಗರ : ಜಿಲ್ಲೆಯಲ್ಲಿ ಎರಡು ತಿಂಗಳಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ನಿರ್ಮಾಣಕ್ಕೆ ಇರುವ ತೊಂದರೆಯನ್ನು ಪರಿಹರಿಸಿ ನಾನೇ ಸ್ವತಃ ಬಂದು ಶಂಕುಸ್ಥಾಪನೆ ನೆರವೇರಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರಾಮನಗರ ಜಿಲ್ಲೆಗೆ ಕೊಡುಗೆ ನೀಡಲು ಇಂದು ಜಿಲ್ಲೆಗೆ ಆಗಮಿಸಿದ್ದೇನೆ. ರಾಮನಗರ ಜಿಲ್ಲೆಯಲ್ಲಿರುವ ಎಲ್ಲರೂ ನನ್ನ ಸ್ನೇಹಿತರೆ. ಸ್ನೇಹವನ್ನು ಅಭಿವೃದ್ಧಿ ಕೆಲಸಕ್ಕೆ ಬಳಸಿಕೊಳ್ಳೋಣ. ಜನಪರ ರಾಜಕಾರಣ ಮಾಡುವುದನ್ನು ಕಲಿಯೋಣ. ಜನರಿಗಾಗಿ ಕೆಲಸ ಮಾಡಿದರೆ. ಅಧಿಕಾರ ಇದ್ದರೂ ಇಲ್ಲದಿದ್ದರೂ ಜನರು ನಮ್ಮನ್ನು ಸ್ಮರಿಸುತ್ತಾರೆ ಹಾಗೂ ಗೌರವಿಸುತ್ತಾರೆ ಎಂದರು.

ನಾಯಕರ ನಾಯಕರ ಜೊತೆ ಮಾತ್ರವಲ್ಲ ನಾಯಕರಿಗೆ ಸಾರ್ವಜನಿಕರ ಜೊತೆ ಸಹ ಸಂಬಂಧ ಉತ್ತಮವಾಗಿರಬೇಕು. ಜನರು ಮುಗ್ದರು ನಾಯಕರ ನಡವಳಿಕೆಯ ಪ್ರಕಾರ ವರ್ತನೆ ಇರುತ್ತದೆ. ಜನರ ಭಾವನೆಯನ್ನು ನಾಯಕರು ಸಕಾರತ್ಮಕವಾಗಿ ಬಳಸಿಕೊಳ್ಳಬೇಕು ಎಂದರು.

ನಾನು ನೀರಾವರಿ ಸಚಿವನಾಗಿದ್ದಾಗ ಚನ್ನಪಟ್ಟಣಕ್ಕೆ ಆಗಮಿಸಿದ್ದೆ, ಆಗ ಜನರು ತೋರಿಸಿದ ಪ್ರೀತಿ, ಗೌರವ ಇಂದಿಗೂ ಮರೆಯಲು ಸಾಧ್ಯವಿಲ್ಲ. ಅಂದು ಜನರು ತೆಂಗು ಬೆಳೆಯುವ ಭೂಮಿ ಬರಡಾಗುತ್ತಿದೆ ಇದನ್ನು ಹೇಗೆ ಸರಿಪಡಿಸುವುದು ಎಂದು ಚರ್ಚೆ ನಡೆಸಿದ ಸಂದರ್ಭದಲ್ಲಿ ಟ್ರಿಬುನಲ್ ಆದೇಶ ಆಗುವವರೆಗೂ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಯಿತು. ಸುಪ್ರೀಂ ಕೋರ್ಟ್ ಹಂತಕ್ಕೂ ಸಮಸ್ಯೆ ಹೋದರು ಚಿಂತೆಯಿಲ್ಲ ನೀರಾವರಿ ಸಚಿವನಾಗಿ ಸಮಸ್ಯೆ ಪರಿಹರಿಸುತ್ತೇನೆ ಎಂದು ನಿರ್ಧಾರ ಮಾಡಿದೆ. ಚನ್ನಪಟ್ಟಣ, ಮಂಡ್ಯ, ತುಮಕೂರು ಜಿಲ್ಲೆಯಲ್ಲಿ ಇದ್ದ ನೀರಾವರಿ ಸಮಸ್ಯೆಯನ್ನು ಪರಿಹರಿಸಿ ನೀರಾವರಿ ಯೋಜನೆಗಳನ್ನು ಅನುμÁ್ಠನ ಮಾಡಿದ್ದೇವೆ ಎಂದರು.

ಮಹಾರಾಜರ ಕಾಲದಲ್ಲಿ ನಿರ್ಮಾಣವಾದ ಕಟ್ಟೆಪುರ ಹೇಮಗಿರಿ, ರಾಮಸ್ವಾಮಿ, ಮಾಧವ ಮಂತ್ರಿ ಸೇರಿದಂತೆ ಹಲವಾರು ನಾಲೆ ಹಾಗೂ ಅಣೆಕಟ್ಟುಗಳಿವೆ. ಇವು ಸ್ವಾತಂತ್ರ್ಯ ಪೂರ್ವ ನೀರಾವರಿ ಯೋಜನೆಗಳಾಗಿದ್ದು, ಅವುಗಳನ್ನು ಸಹ ಸರಿಪಡಿಸಿ ಅನುμÁ್ಠನ ಮಾಡಲಾಯಿತು ಎಂದರು.
ಕೆ.ಆರ್.ಎಸ್ ಅಣೆಕಟ್ಟಿನಲ್ಲಿ ನೀರು ಸೋರಿಕೆಯಾಗುತ್ತಿದ್ದಾಗ, ಗೋಣಿಚೀಲಗಳನ್ನು ಇಟ್ಟಿ ಸೋರಿಕೆ ನಿಲ್ಲಿಸಲು ಪ್ರಯತ್ನ ನಡೆಸಲಾಗುತ್ತಿತ್ತು. ಕೇವಲ ಒಂದುವರೆ ವರ್ಷದಲ್ಲಿ ಸಂಪೂರ್ಣ 16 ಅಟೊಮೆಟಿಕ್ ಗೇಟ್ ನಿರ್ಮಿಸಿ ಸರಿಪಡಿಸಲಾಯಿತು ಎಂದರು.
ಮಾಗಡಿಯಿಂದ ರಾಮನಗರದ ವರೆಗೂ ನೀರಿನ ಸಂಪನ್ಮೂಲ ಇಲ್ಲ ಮನೆಮನೆಗೆ ನೀರು ಕೊಡುವ ವ್ಯವಸ್ಥೆಯನ್ನು ಜಲ ಜೀವನ್ ಮಿಷನ್ ಯೋಜನೆಯ ಮೂಲಕ ಸರ್ಕಾರ ಕಲ್ಪಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ತಂತ್ರಜ್ಞಾನ, ಕೌಶಲ್ಯ ಅಭಿವೃಧ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವರು ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ, ನಗರಾಭಿವೃದ್ಧಿ ಸಚಿವ ಬಿ.ಎ ಬಸವರಾಜ (ಬೈರತಿ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ: ಸುಧಾಕರ್, ರಾಮನಗರ ಶಾಸಕರಾದ ಅನಿತಾ ಕುಮಾರ್ ಸ್ವಾಮಿ, ಮಾಗಡಿ ಶಾಸಕರಾದ ಎ.ಮಂಜುನಾಥ್, ವಿಧಾನ ಪರಿಷತ್ ಶಾಸಕರಾದ ಸಿ.ಪಿ.ಯೋಗೇಶ್ವರ್, ಎಸ್. ರವಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.