ಕೆಎಂಎಫ್ ಉತ್ಪನ್ನಗಳ ಮೇಲೆ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರವನ್ನು ಮುದ್ರಿಸಲು ಕನ್ನಡದ ರಾಜರತ್ನ ಮಧುಸೂದನ್ ಒತ್ತಾಯ

ರಾಮನಗರ : ಕೆಎಂಎಫ್ ಉತ್ಪನ್ನಗಳ ಮೇಲೆ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರವನ್ನು ಮುದ್ರಿಸಬೇಕು ಎಂದು ಕನ್ನಡದ ರಾಜರತ್ನ ಮಧುಸೂದನ್ ಸರ್ಕಾರವನ್ನು ಒತ್ತಾಯಿಸಿದರು.

ರೈತರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ದ ಉತ್ಪನ್ನಗಳಿಗೆ ಈಚೆಗೆ ನಿಧನರಾದ ಪ್ರಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರು ಸುಮಾರು 10 ವರ್ಷಗಳಿಂದ ಪ್ರಚಾರ ರಾಯಭಾರಿಯಾಗಿದ್ದರು. ಇದಕ್ಕಾಗಿ ಅವರು ಕೆಎಂಎಫ್ ನಿಂದ ಯಾವುದೇ ಸಂಭಾವನೆಯನ್ನು ಪಡೆಯುತ್ತಿರಲಿಲ್ಲ ಎಂದರು.
ಈಚೆಗೆ ನಿಧನರಾದ ಪ್ರಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ವಿಶೇಷ ಗೌರವ ಸಲ್ಲಿಸಿದೆ. ತನ್ನ ನಂದಿನಿ ಹಾಲಿನ ಪ್ಯಾಕೆಟ್ ಗಳ ಮೇಲೆ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರವನ್ನು ಕೆಂಎಂಎಫ್ ಮುದ್ರಣ ಮಾಡಿದೆ ಎಂಬ ಪೋಟೊಗಳು ಐದಾರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಎಂದರು.
ಕೆ.ಎಂ. ಎಫ್. ನವರಿಗೆ ಈ ಮೂಲಕ ಕೇಳಿಕೊಳ್ಳುವುದೇನೆಂದರೆ ಪುನೀತ್ ರಾಜ್ ಕುಮಾರ್ ರವರು ಕೆ.ಎಂ.ಎಫ್. ನಿಂದ ಬರುವ ಹಾಲಿಗೆ ಉಚಿತವಾಗಿ ಬ್ರಾಂಡ್ ಅಂಬಾಸಿಡರ್ ಆಗಿದ್ದರು ಅವರು ನಿಧನರಾಗಿರುವ ಕಾರಣ ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರವನ್ನು ಹಾಕಿ ಸರ್ಕಾರ ಗೌರವಿಸಬೇಕೆಂದು ಕನ್ನಡದ ರಾಜರತ್ನ ಮಧುಸೂದನ್ ಮನವಿ ಮಾಡಿದರು.

ಕನ್ನಡದ ರಾಜರತ್ನ ಮಧುಸೂದನ್
ಮೊ: 9972386666

Leave a Reply

Your email address will not be published. Required fields are marked *