“ಶೋಷಿತರ ಭಾವನೆಗೆ ದಕ್ಕೆ”

ಆತ್ಮೀಯರೇ,

ರಾಮನಗರ ಜಿಲ್ಲೆ ರಾಮನಗರ ಕೇಂದ್ರ ಸ್ಥಾನದಲ್ಲಿ ತುಂಬಾ ದಿನಗಳಿಂದ ಜಿಲ್ಲಾಧಿಕಾರಿ ಗಳ ಕಚೇರಿಯ ಆವರಣದಲ್ಲಿ ಈ ಪ್ರಪಂಚ ಕಂಡ ಮಹಾಜ್ಞಾನಿ ವಿಶ್ವ ರತ್ನ ಬಾಬಾ ಸಾಹೇಬ್ “ಅಂಬೇಡ್ಕರ್” ಅವರ ಪ್ರತಿಮೆ ಹಾಗೂ ಈ ನಾಡು ಕಂಡ ಶ್ರೇಷ್ಠ ದೊರೆ ನಾಡ ಪ್ರಭು “ಕೆಂಪೇಗೌಡರ” ಪ್ರತಿಮೆ ಮಾಡಿ ತುಂಬಾ ವರ್ಷಗಳಿಂದ “ಅನಾವರಣ” ಮಾಡದೆ ನೆನೆಗುದಿಗೆ ಬಿದ್ದಿತ್ತು. ಇದು ಈ ಜಿಲ್ಲೆಯ ಶೋಷಿತರ (ಎಲ್ಲಾ ಜಾತಿಯ) ಆಸೆ ಮತ್ತು ಭಾವನಾತ್ಮಕ ವಿಚಾರ, ಅದರಲ್ಲೂ ವಿಶೇಷವಾಗಿ” ದಲಿತರು” ಮತ್ತು ಒಕ್ಕಲಿಗರು.
ಈ ಹಿನ್ನಲೆಯಲ್ಲಿ, ಪುತ್ಥಳಿಗಳ ಸ್ಥಾಪನೆ ಆಗಬೇಕು ಅನ್ನುವ ವಿಚಾರದ ಹಿಂದೆ ತುಂಬಾ ಜನರ ಪರಿಶ್ರಮ ಹಾಗೂ ಬೆವರು ಇದೆ. ಅದರೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವೈಫಲ್ಯ ದಿಂದ ತುಂಬಾ ವರ್ಷಗಳಿಂದ ಕನಸು ಕಂಡಿದ್ದ ಈ ಕಾರ್ಯಕ್ರಮ ಇಡೀ ರಾಜ್ಯವೇ ನಾಚಿಸುವಂತೆ ಆಗಿ ಹೋಯಿತು.

ಇದರ ಅಂದರೆ ನಿನ್ನೆ ನಡೆದ ಗಲಭೆಯ ಹಿನ್ನಲೆ ಈ ಪ್ರತಿಮೆ ಸಮಿತಿ ಯಲ್ಲಿ ಇದ್ದವರನ್ನು ಅದರಲ್ಲಿ ವಿಶೇಷವಾಗಿ ಅಂದಿನ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರು ಆಗಿದ್ದ ಡಿ. ಕೆ ಸುರೇಶ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಡಿ.. ಕೆ ಶಿವಕುಮಾರ್ ಅವರನ್ನು ಕರೆದು ಮತ್ತು ಇತರ ಮುಖಂಡರನ್ನು ಗುರುತಿಸಿ ಅವರಿಗೆ ಒಂದು ಗೌರವ ಕೊಡುವುದು, ಈ ಜಿಲ್ಲೆಯ ಹಿರಿಯ ಕಿರಿಯ ಹೋರಾಟಗಾರರನ್ನು ಕರೆದು ಒಂದು ಸಭೆ ಮಾಡುವುದು, ಒಟ್ಟಾರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದಕೊಂಡು ಈ ಕಾರ್ಯಕ್ರಮ ಮಾಡಬೇಕು ಎಂದು ಒತ್ತಾಯಿಸಿ ದಲಿತ ಮುಖಂಡರು ತಮ್ಮ ನೋವನ್ನು “ಪ್ರೆಸ್ಸ್ ಮೀಟ್”ಮಾಡಿದರು, ಮತ್ತು ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅದಾದರೂ, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಎಲ್ಲಿ ಕಾರ್ಯಕ್ರದಲ್ಲಿ ವ್ಯತ್ಯಾಸ ಆಗಿಬಿಡುತ್ತದೆ ಎಂದು ರಾತ್ರಿ ಅವರನ್ನೂ ಭೇಟಿ ಮಾಡಿ ಜಿಲ್ಲಾಡಳಿತದ ಕೊರತೆಯನ್ನು ತಿಳಿಸಿದಾಗ, ಅವರಿಂದ ಅಷ್ಟೊಂದು ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಆದರೂ ಬೆಳಿಗ್ಗೆ ಕಾರ್ಯಕ್ರಮಕ್ಕೆ ಭಾಗವಹಿಸಿದ ಸಂಧರ್ಭದಲ್ಲಿ, ನಮಗಾದ ನೋವು ಮರುಕಳಿಸಿ ಒಂದು ಸಣ್ಣ “ಸ್ಫೋಟ” ಉಂಟಾಗಿ ಕೊನೆಯಲ್ಲಿ ಅದು ವೇದಿಕೆಯಲ್ಲಿದ್ದ ಸನ್ಮಾನ್ಯ ಹಾಲಿ ಸಚಿವರಾದ ಅಶ್ವಥ ನಾರಾಯಣ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರು ಅದ ಶ್ರೀಯುತ ಡಿ ಕೆ ಸುರೇಶ್ ಅವರ ಜಗಳ ನೋಡಿ ಇಡೀ ರಾಜ್ಯವೇ ತಲೆ ತಗ್ಗಿಸುವಂತಾಯಿತು.
ಇಲ್ಲಿ ಮೂಲ ದಲಿತರ ಮನವಿ ಮತ್ತು ಭಾವನೆ ಮೂಲೆ ಸೇರಿ, ಇದರ ವಿರುದ್ಧ ಹೋರಾಟ ಮಾಡಿದವರನ್ನು ಜೈಲಿಗೆ ಹಟ್ಟಿ, ದಬ್ಬಾಳಿಕೆ ಮಾಡಿದರು, ಆದರೆ ಇವರು ಎಲ್ಲಿಯೂ ಬೆಳಕಿಗೆ ಬರಲಿಲ್ಲ! ಒಂದು ದಿನ ಜೈಲಿನಲ್ಲಿ ವಾಸವಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಉದ್ಧಾಟನೆಗೆ ಬರದಂತೆ ಶಿಕ್ಷೆ ಕೊಟ್ಟೇ ಬಿಟ್ಟರು! ಬಂದಿರುವ ಕಾರ್ಯಕ್ರಮಕ್ಕೆ ಬಂದಿದ್ದ ಸಚಿವರಾಗಲಿ, ಸಂಸದರಾಗಲಿ ಯಾರೊಬ್ಬರೂ ಬಾಬಾ ಸಾಹೇಬರ ವಿಚಾರಗಳನ್ನು ಮಾತಾಡದೆ ಕೇವಲ ಅವರವರ ಒಣ ಪ್ರತಿಷ್ಠೆ ಗಳನ್ನು ತೋರಿಸುತ್ತಾ ತೋಳನ್ನು ಮೇಲೇರೆಸಿಕೊಂಡು ಸುಂದರ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಕಾರ್ಯಕ್ರಮವನ್ನು ನಾಶ ಮಾಡಿದರು.
ಇದರಿಂದ ಸಮಾಜಕ್ಕೆ ಹೋದ ಸಂದೇಶ ಏನೆಂದರೆ, ನಮ್ಮ ನಮ್ಮಲ್ಲಿ ಒಗ್ಗಟ್ಟು ಮತ್ತಷ್ಟು ಬಲಗೊಳ್ಳಬೇಕು.. ರೂಪುಗೊಳ್ಳಬೇಕು ಆಗ ಮಾತ್ರ ನಮ್ಮ ಮಾತನ್ನು ಯಾರು ಬೇಕಾದರೂ ಕೇಳುತ್ತಾರೆ, ಇಲ್ಲದಿದ್ದರೆ ಇಂತಹ ಘಟನೆಗಳು ಮರುಕಳಿ ಸುತ್ತಲೇ ಇರುತ್ತದೆ. ಬಲಾಢ್ಯರ ಮುಂದೆ ನಾವುಗಳು ಸೋಲುತ್ತಲೇ ಇರುತ್ತೇವೆ.
‘ನರಿ ಕೂಗು ಗಿರಿ ಮುಟ್ಟೀತೆ…….’ ಅನ್ನುವ ರೀತಿ ನಮ್ಮ ಹೋರಾಟಗಳು ಆಗಿ ಹೋಗುತ್ತವೆ.

ಲೇಖನ :
ಹರೀಶ್
ಬಿ.ವಿ.ಎಸ್
ಜಿಲ್ಲಾ ಪೋಷಕರು
ರಾಮನಗರ ಜಿಲ್ಲೆ.
ಮೊ : 8197135282

Leave a Reply

Your email address will not be published. Required fields are marked *