ಚನ್ನಪಟ್ಟಣ : ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮರಿಗೌಡ ಅವರಿಗೆ ಸ್ವಾಗತ ಕೋರಿದ ಶಿಕ್ಷಕ ವೃಂದ

ಚನ್ನಪಟ್ಟಣ : ತಾಲ್ಲೂಕಿಗೆ ನೂತನವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾದ ಬಿ.ಎನ್. ಮರಿಗೌಡ ರವರಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಎರಡು ವರ್ಷಗಳ ಕಾಲ ಉತ್ತಮ ಕಾರ್ಯನಿರ್ವಹಣೆ ಮಾಡಿ ವರ್ಗಾವಣೆಗೊಂಡಿದ್ದ ನಾಗರಾಜುರವರಿಗೆ ತಾಲ್ಲೂಕಿನ ಶಿಕ್ಷಕರ ಸಂಘಟನೆ ಪದಾಧಿಕಾರಿಗಳು ಹಾಗೂ ಬಿಇಒ ಕಚೇರಿ ಸಿಬ್ಬಂದಿ ಅಭಿನಂದನೆ ಸಲ್ಲಿಸಿದರು.

ರಾಮನಗರದಲ್ಲಿ ಬಿಇಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮರಿಗೌಡ ರವರು ಪ್ರಸ್ತುತ ಚನ್ನಪಟ್ಟಣ ತಾಲ್ಲೂಕಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದು , ಸದರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಾಜುರವರು ರಾಮನಗರ ಜಿಲ್ಲೆಯ ವಯಸ್ಕರ ಶಿಕ್ಷಣಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದಾರೆ .
ಬಿಇಒ ಕಚೇರಿಯ ಶಿಕ್ಷಣ ಸಂಯೋಜಕರಾದ ಯೋಗೇಶ್ ಚಕ್ಕೆರೆ, ಗಂಗಾಧರಮೂರ್ತಿ, ರಾಜಲಕ್ಷ್ಮಮ್ಮ,ಜಿನ್ನಾ , ತಮ್ಮಣ್ಣ, ಟಿಪಿಇಒ ವೀರಾಜು ,ಅಧೀಕ್ಷಕರಾದ ಸರೋಜಮ್ಮ , ನಳಿನಿ ,ಕಚೇರಿ ವಿಷಯ ನಿರ್ವಾಹಕರಾದ ಆರಾಧ್ಯ, ಚಂದ್ರೇಗೌಡ, ರಾಮಣ್ಣ, ಮಂಜು, ಮಧು , ವಿಜಯಲಕ್ಷ್ಮಿ ಮೊದಲಾದ ಬಿಇಒ ಕಚೇರಿ ಸಿಬ್ಬಂದಿಗಳು ನೂತನವಾಗಿ ಆಗಮಿಸಿದ ಮತ್ತು ನಿರ್ಗಮಿಸಿದ ಬಿಇಒ ಗಳಿಗೆ ಬೀಳ್ಕೊಡುಗೆ ನೀಡಿದರು .

 ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯ ಅಧ್ಯಕ್ಷರಾದ ಎಸ್ .ಎಂ .ನಾಗೇಶ್ , ಜಿಲ್ಲಾ ಉಪಾಧ್ಯಕ್ಷ ರಾದ ಮಲ್ಲೇಶ್ , ಕಾರ್ಯದರ್ಶಿ  ಕೃಷ್ಣಕುಮಾರ್, ಪದಾಧಿಕಾರಿಗಳಾದ ಶಾರದಾ ನಾಗೇಶ್ , ಬಸವರಾಜು ,ಬೋರೆಗೌಡ ,,ಲಿಂಗರಾಜು.ಹೆಚ್ ,ಮಹದೇವ ,ರಾಮಕೃಷ್ಣೇಗೌಡ ,ಶಿವಕುಮಾರ್ . ವಿಷಕಂಠಯ್ಯ ಪಿ . ಸಾಕಮ್ಮ.ಎಂ, ಶಾಂತಮ್ಮ .ಜೆ,  ಶಾರದಮ್ಮ , ಸುಧಾಮಣಿ, 

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ , ಉಪಾಧ್ಯಕ್ಷ ಶಿವಕುಮಾರ್ , ನಿರ್ದೇಶಕರಾದ ಬೆಟ್ಟಯ್ಯ, ಕವಿತಾ , ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ್, ತಾಲ್ಲೂಕು ಕಾರ್ಯದರ್ಶಿ ಸ್ವಾಮಿ,ಸಾರ್ವಜನಿಕ ವಿದ್ಯಾಸಂಸ್ಥೆ ಅಧ್ಯಕ್ಷರಾದ ಟಿ. ಕೆ. ಯೋಗೀಶ್ ( ಪಾಪು),, ಕಾರ್ಯದರ್ಶಿ ಚನ್ನಪ್ಪ (ಸಿಸಿ), ನಿರ್ದೇಶಕರಾದ ನಾರಾಯಣ ಗೌಡ, ಉಪ ಪ್ರಾಂಶುಪಾಲ ಸಿ. ಬಿ.ಕುಮಾರ್ ಸೇರಿದಂತೆ ತಾಲ್ಲೂಕಿನ ವಿವಿಧ ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳು , ಶಿಕ್ಷಕ ವೃಂದ, ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳು ಬಿಇಒ ರವರುಗಳಿಗೆ ಅಭಿನಂದಿಸಿದರು .

Leave a Reply

Your email address will not be published. Required fields are marked *