ಬನ್ನಿಕುಪ್ಪೆ : ಯೂನಿಯನ್ ಬ್ಯಾಂಕ್ ವತಿಯಿಂದ ಸಾಲ ವಿತರಣೆ
ರಾಮನಗರ: ರೈತರ ಕೆಲಸ ಶ್ರೇಷ್ಠ ಕೆಲಸವಾಗಿದ್ದುಅನ್ನ ನೀಡುವರೈತ ಸುಖಿಯಾಗಿದ್ದರೆ ದೇಶಸುಭಿಕ್ಷವಾಗಿರುತ್ತದೆ ಎಂದು ಬನ್ನಿಕುಪ್ಪೆಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ಇಳಂಗೋವನ್ ತಿಳಿಸಿದರು.
ತಾಲ್ಲೂಕಿನ ಕೈಲಾಂಚ ಹೋಬಳಿಯ ಕುರುಬಹಳ್ಳಿದೊಡ್ಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಉತ್ಪಾದಕರಿಗೆ ಬನ್ನಿಕುಪ್ಪೆ ಯೂನಿಯನ್ ಬ್ಯಾಂಕ್ ವತಿಯಿಂದ ಸಾಲ ವಿತರಣೆ ಮಾಡಿ ಮಾತನಾಡಿದರು.
ಕೊರೊನೋತ್ತರ ಕಾಲದಲ್ಲಿ ಆರ್ಥಿಕತೆಗೆ ಬಲ ತುಂಬುವ ದೃಷ್ಟಿಯಿಂದಾಗಿ ಗ್ರಾಮೀಣ ರೈತರ ಬೆನ್ನೆಲುಬಾಗಿರುವ ಹೈನುಗಾರಿಕೆಗೆ ಉತ್ತೇಜನ ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಬನ್ನಿಕುಪ್ಪೆ ಶಾಖೆಯ ಯೂನಿಯನ್ ಬ್ಯಾಂಕು ತನ್ನ ಗ್ರಾಹಕರಿಗೆ ಅದರಲ್ಲೂ ವಿಶೇಷವಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳ ರೈತರಿಗೆ ನೇರವಾಗಿಸಾಲ ಸಂಪರ್ಕಕಾರ್ಯಕ್ರಮದ ಮೂಲಕ ಹಣಕಾಸು ಸೌಲಭ್ಯ ವಿತರಣೆ ಮಾಡಲಾಗುತ್ತಿದೆ.
ಬ್ಯಾಂಕಿನಈ ಕಾರ್ಯದಿಂದಾಗಿರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಪಶುಸಂಗೋಪನೆಯಲ್ಲಿ ಇವುಗಳನ್ನು ಬಳಕೆ ಮಾಡಿಕೊಂಡುಆರ್ಥೀಕತೆ ಹೆಚ್ಚಿಸಿಕೊಳ್ಳಬಹುದಾಗಿದೆ ಪಡೆದ ಸಾಲವನ್ನುರೈತರು ಸರಿಯಾದ ಸಮಯಕ್ಕೆ ಪಾವತಿ ಮಾಡಿದರೆ ಮುಂದೆ ಇನ್ನೂ ಹೆಚ್ಚಿನ ಸಾಲ ನೀಡಲಾಗುತ್ತದೆ. ಇದರಿಂದ ರೈತರು ಖಾಸಗಿ ಲೇವಾದೇವಿಗಾರರಿಂದ ಹೆಚ್ಚಿನ ಬಡ್ಡಿಗೆ ಹಣ ಪಡೆಯುವುದು ನಿಲ್ಲುತ್ತದೆ ಬ್ಯಾಂಕಿನ ಸಹಾಯ ಪಡೆದುರೈತರು ಸಾಲಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದುತಿಳಿಸಿದರು.
ಡೈರಿ ಕಾರ್ಯದರ್ಶಿ ಕೆ. ಪ್ರಕಾಶ್ ಮಾತನಾಡಿಗ್ರಾಮದ ಹಾಲು ಉತ್ಪಾದಕರೈತರಿಗೆ ಬನ್ನಿಕುಪ್ಪೆಯೂನಿಯನ್ ಬ್ಯಾಂಕುರೈತಸ್ನೇಯಿಯಾಗಿ ಕೆಲಸ ನಿರ್ವಹಿಸುತ್ತಿದೆ.ನಮ್ಮ ಸಂಘದ ಸುಮಾರು 60ಕ್ಕೂ ಹೆಚ್ಚಿನರೈತರಿಗೆ ಸುಮಾರು 50 ಲಕ್ಷಕ್ಕೂ ಹೆಚ್ಚಿನ ಸಾಲ ಸೌಲಭ್ಯ ನೀಡಿದೆ.ಇದರಿಂದಗ್ರಾಮದಲ್ಲಿ ಹಾಲು ಉತ್ಪಾದನೆ ಹೆಚ್ಚಿದ್ದುರೈತಾಪಿ ವರ್ಗಕ್ಕೆ ಬ್ಯಾಂಕಿನ ಹಣಕಾಸು ನೆರವು ವರದಾನವಾಗಿದೆ ಬ್ಯಾಂಕಿನ ವ್ಯವಸ್ಥಾಪಕ ಇಳಂಗೋವನ್ ಅವರುರೈತರ ಒಳಿತಿಗಾಗಿ ಯೋಜನೆ ಲಾಭ ಸಂಘದ ಹಾಲು ಉತ್ಪಾದಕರೈತರಿಗೆ ನೀಡಿಆರ್ಥಿಕವಾಗಿ ಸಬಲರಾಗುವಂತೆ ಮಾಡುವಲ್ಲಿ ಮುತುವರ್ಜಿ ವಹಿಸಿದ್ದಾರೆ ಎಂದರು.
ಇದೇ ಸಂಧರ್ಭದಲ್ಲಿ ಸಂಘದ ವತಿಯಿಂದಯೂನಿಯನ್ ಬ್ಯಾಂಕ್ ವ್ಯವಸ್ಥಾಪಕ ಇಳಂಗೋವನ್ ಅವರನ್ನು ಸನ್ಮಾನಿಸಲಾಯಿತು.
ಡೈರಿಅಧ್ಯಕ್ಷರಾಮಕೃಷ್ಣಶೆಟ್ಟಿ, ಗ್ರಾಪಂ ಸದಸ್ಯ ಲಿಂಗರಾಜು, ಮಾಜಿ ಸದಸ್ಯರಾದ ಮುತ್ತುರಾಜುನಾಯ್ಕ, ರಾಮಣ್ಣನಾಯ್ಕ ಸಂಘದ ನಿರ್ದೇಶಕರಾದರವಿ, ಲಕ್ಷ್ಮಣ್‍ನಾಯ್ಕ, ರವಿಕುಮಾರ್, ನಾಗೇಶ್‍ನಾಯ್ಕ, ಮುನಿರಾಜು, ರಾಮೀಬಾಯಿ, ಜಯಾಬಾಯಿ, ಚಲುವರಾಜು, ಪರಮೇಶ್, ಶ್ರೀವಾಸನಾಯ್ಕ ಬನ್ನಿಕುಪ್ಪೆ ಮಾಸ್ಟರ್‍ಚೂಡಯ್ಯ, ಕವಣಾಪುರಡೈರಿ ಕಾರ್ಯದರ್ಶಿ ನಾಗೇಶ್‍ಇದ್ದರು.