ಬಿಜೆಪಿ ಪಕ್ಷವನ್ನು ಸದೃಢವಾಗಿ ಕಟ್ಟುವುದೆ ನನ್ನ ಸಂಕಲ್ಪ : ಪ್ರಸಾದ್

ಮಾಗಡಿ : ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ಸದೃಢವಾಗಿ ಕಟ್ಟುವುದೆ ನನ್ನ ಸಂಕಲ್ಪವಾಗಿದೆ ಎಂದು ಬಿಜೆಪಿ ಮುಖಂಡ ಪ್ರಸಾದ್ ಹೇಳಿದರು.
ತಾಲೂಕಿನ ಗುಮ್ಮಸಂದ್ರ ರುದ್ರಮುನ್ನೇಶ್ವರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ ಡಾ.ಚಂದ್ರಶೇಖರ ಸ್ವಾಮೀಜಿ ಅವರ ಅಶೀರ್ವಾದ ಪಡೆದು ಪಕ್ಷದ ಸಂಘಟನೆಗೆ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಗಡಿ ಗ್ರಾಮ ಕಣ್ಣುಮಿಣಕಿ ಗ್ರಾಮದವನಾದ ನಾನು ಕಳೆದ 20 ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ, 3 ಭಾರಿ ಗ್ರಾ.ಪಂ. ಸದಸ್ಯನಾಗಿ, ಅಧ್ಯಕ್ಷನಾಗಿ ಕೆಲಸಮಾಡಿಕೊಂಡು ಬಂದಿದ್ದು ಕಾನೂನು ಪದವಿದರನಾಗಿ ಜನರ ಕಷ್ಟಗಳನ್ನು ಬಗೆಹರಿಸಿಕೊಂಡು ಸೇವಾಮನೋಭಾವನೆ ಬೆಳೆಸಿಕೊಂಡು ಜನರ ಸೇವೆ ಮಾಡುವ ಉದ್ದೇಶದಿಂದ ಸಚಿವ ಎಸ್.ಟಿ.ಸೋಮಶೇಖರ್, ಡಾ.ಸಿ.ಎನ್.ಆಶ್ವತ್ಥನಾರಾಯಣ ಆಶೀರ್ವಾದಿಂದ ಮಾಗಡಿ ವಿಧಾನಸಭಾಕ್ಷೇತ್ರಕ್ಕೆ ಬಂದಿದ್ದೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಜೆಡಿಎಸ್, ಕಾಂಗ್ರೆಸ್ ಪಕ್ಷ ಶಕ್ತಿಯುತವಾಗಿದೆ ಬಿಜೆಪಿ ನೆಲಕಚ್ಚಿದೆ ಎಂಬ ಮಾತುಗಳು ಕೇಳಿಬಂದಿದ್ದು ನಾನು ಈ ಗಾಗಲೇ ಕ್ಷೇತ್ರದ ವಿವಿದ ಗ್ರಾಮಗಳಿಗೆ ಬೇಟಿ ನೀಡಿದ ವೇಳೆ ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸುತ್ತಿದ್ದಾರೆ ಈ ವೇಳೆ ಕಾರ್ಯಕರ್ತರನ್ನು ನಮ್ಮನ್ನು ಕೈಬಿಟ್ಟು ಬಿಟ್ಟುಹೊಗಬೇಡಿ ಎಂದು ಮನವಿ ಮಾಡುತ್ತಿದ್ದಾರೆ ಇದರೊಂದಿಗೆ
ಕೆಲ ವಾತಾವರಣ ಬದಲಾವಣೆಮಾಡುವ ಮೂಲಕ ಪಕ್ಷವನ್ನು ಸದೃಢಗೊಳಿಸಲಾಗುವುದು ಎಂದರು.

ಮಾಗಡಿ ತಾಲೂಕಿನ ಗುಮ್ಮಸಂದ್ರ ರುದ್ರಮುನ್ನೇಶ್ವರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ ಡಾ.ಚಂದ್ರಶೇಖರ ಸ್ವಾಮೀಜಿ ಅವರ ಅಶೀರ್ವಾದ ಪಡೆದು ಮಾದ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಪ್ರಸಾದ್.

ಯಾರು ಏನೇ ಹೇಳಿದರು ಬಿಜೆಪಿ ಪಕ್ಷಕ್ಕೆ ಕೆಲಸ ಮಾಡಿ ಎಲ್ಲಾ ಜನಾಂಗ, ಮಠಾಧ್ಯಕ್ಷರನ್ನು ವಿಶ್ವಾಶಸಕ್ಕೆ ಪಡೆಯುತ್ತೇನೆ, ಜಾತಿ, ಬೇಧ, ಭಾವ, ಗೊತ್ತಿಲ್ಲ ಮನುಷ್ಯ ಜಾತಿ ಒಂದೇ ನನಗೆ ಗೊತ್ತಿರುವುದು, ಕ್ಷೇತ್ರದಲ್ಲಿ ನೀರಾವರಿ ಯೋಜನೆ, ಸಾರಿಗೆ ವ್ಯವಸ್ಥೆ ಕಲ್ಪಿಸಲು ಶಕ್ತಿ ಮೀರಿ ಶ್ರಮಿಸಿ ಜನತೆ ಮತ್ತು ಮಠಮಾನ್ಯಗಳಿಗೆ ನನ್ನಿಂದಾಗುವ ಅಳಿಯು ಸೇವೆ ಮಾಡುತ್ತೇನೆ ಎಂದರು.
ಚಕ್ರಭಾವಿ ಗ್ರಾಮದಲ್ಲಿ ನೀರಿಲ್ಲದೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತಾಗಿದೆ ಇಂಥಹ ದುಸ್ಥಿತಿಗೆ ತಾಲೂಕು ಇದೆ,
ತಾಲೂಕಿನಲ್ಲಿ ಸಂಘನಾ ಶಕ್ತಿ ಕಳೆದುಕೊಂಡಿತ್ತು ಈಗ ಎಲ್ಲಾ ಬಿಜೆಪಿ ಮುಖಂಡರನ್ನು ಒಗ್ಗೂಡಿಸಿಕೊಂಡು ಪಕ್ಷಕ್ಕೆ ಚೈತನ್ಯ ತುಂಬುತ್ತೇವೆ ಹೈಕಮಾಂಡ್ ತಿರ್ಮಾನಕ್ಕೆ ಬದ್ದನಾಗಿದ್ದೇನೆ, ನಾವು ಪ್ರಮಾಣಿಕವಾಗಿ ಸೇವೆ ಮಾಡಿದರೆ ಮುಂದಿನ ದಿನಗಳಲ್ಲಿ ಅಧಿಕಾರ ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಗುಮ್ಮಸಂದ್ರ ರುದ್ರಮುನ್ನೇಶ್ವರ ಮಠದ ಡಾ.ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ತಾಲೂಕಿನಲ್ಲಿ ಎಚ್.ಎಂ,ಕೃಷ್ಣಮೂರ್ತಿ ವಯಕ್ತಿಕವಾಗಿ ಕೋಟ್ಯಾಂತರ ಹಣ ವೆಚ್ಚಮಾಡಿ ಕೆಂಪೇಗೌಡರ ಹೆಸರಿನಲ್ಲಿ ಸಾವಿರಾರು ಮಂದಿಗೆ ಶಸ್ತ್ರಚಿಕಿತ್ಸೆ ನೀಡಿ ಆರೋಗ್ಯ ಕಾಪಾಡಿ, ಅನ್ನದಾಸೋಹ ನೀಡಿದ್ದಾರೆ ಅಂಥಹವರಿಗೆ ಜನರು ಮನ್ನಣೆ ನೀಡಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎಲ್ಲರೂ ನಮಗೆ ವಿಶ್ವಾಸಿಗರು ತಾಲೂಕಿನಲ್ಲಿ ಸಂಘಟನೆ ಮುಖ್ಯವಾಗಿದ್ದು ಬಿಜೆಪಿಗೆ ಮತದಾರರಿದ್ದು ಸಂಘಟನೆ ಕುಠಿತದಿಂದ ನಾಯಕತ್ವ ಇಲ್ಲದ ಕಾರಣ ಬೆಂಕಿ ಮುಚ್ಚಿದ ಕೆಂಡದಂತೆ ಕಾರ್ಯಕರ್ತರಿದ್ದು ಲೋಕಸಭಾ ಚುನಾವಣೆಯಲ್ಲಿ 68 ಸಾವಿರ ಮತ ನೀಡಿದ್ದಾರೆ ಅವರನ್ನು ವಿಶ್ವಾಸಕ್ಕೆ ಪಡೆದು ಯಾವುದೆ ಜಾತಿ, ಬೇದ ವಿಲ್ಲದೆ ಸಂಘಟನೆ ಮಾಡಿ ಮಠಮಾನ್ಯಕ್ಕೆ ಮಾನ್ಯತೆ ನೀಡಿ ಸಂಘಟನೆಯಲ್ಲಿ ತೊಡಗಿ ಮುಖ್ಯವಾಹಿನಿಗೆ ಬರಲು ಸಾಧ್ಯ ಈ ನಿಟ್ಟಿನಲ್ಲಿ ಇಂದಿನಿಂದಲ್ಲೆ ಕಾರ್ಯಪ್ರವೃತ್ತರಾಗುವಂತೆ ತಿಳಿಸಿದರು.
ಎನ್‍ಇಎಸ್ ಬಡಾವಣೆ ಜಯರಾಮು, ಕಾರ್ತಿಕ್, ಹೇಮಂತ್, ಗಂಗಾಧರ್ ಇತರರು ಇದ್ದರು.



Leave a Reply

Your email address will not be published. Required fields are marked *