“ಯಾರೊ ಅವನು ಗಂಡಸು ಲೊ, ಹಕ್ಕು ಪತ್ರ ಕೊಡ್ರೊ ಲೊ” : ವಿಡಿಯೋ ಮೂಲಕ ಇರುಳಿಗ ಸಮುದಾಯದ ಮಹದೇವಯ್ಯ ಆಕ್ರೋಶ

ರಾಮನಗರ : “ಯಾರೊ ಅವನು ಗಂಡಸು ಲೊ, ಹಕ್ಕು ಪತ್ರ ಕೊಡ್ರೊ ಲೊ, 315 ದಿನದಿಂದ ಕಾಡಲ್ಲಿ ಕೂತಿದ್ದೀವಿ ಕಣ್ರಲೊ, ಮೊದ್ಲು ಹಕ್ಕು ಪತ್ರ ಕೊಡೊ ಕೆಲ್ಸ ಮಾಡ್ರೊ ಲೊ” ಹೀಗೆ ತಮ್ಮ ಅಸಮಾಧಾನವನ್ನು ವಿಡಿಯೋ ಮೂಲಕ ಹೊರ ಹಾಕಿರುವುದು ಕನಕಪುರ ತಾಲ್ಲೂಕಿನ ಬುಡಗಯ್ಯನದೊಡ್ಡಿ ಗ್ರಾಮದ ಇರುಳಿಗ ಸಮುದಾಯದ ಹಿರಿಯ ಮುಖಂಡ ಮಹದೇವಯ್ಯ.

ಜ.3ರ ಸೋಮವಾರದಂದು ರಾಮನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಅವರು ತಮ್ಮ ಭಾಷಣದಲ್ಲಿ “ಯಾರಪ್ಪ ಗಂಡು, ಕೆಲ್ಸದಲ್ಲಿ ತೋರಿಸ್ರೋಲೊ, ಕೆಲಸ್ಸದಲ್ಲಿ ತೋರಿಸ್ರೊ, ಬರಿ ಯಾರೊ ನಾಕು ಜನನ ಕಟ್ಟಕ್ ಬುಟ್ಟು ಇಲ್ಲ ಬಂದ ಸಭೆನಲ್ಲಿ ಗಲಾಟೆ ಮಾಡೊದ, ಏನ್ ಕೆಲ್ಸ ಮಾಡಿದ್ದೀವಿ ಅಂತ ತೊಡೆ ತಟ್ಟಿ ಹೇಳಿ ನೋಡೊಣ, ನಾವೇಳ್ತಿವಿ, ನಾವೇಳ್ತಿವೆ ಏನ್ ಮಾಡಿದ್ದೀವಿ ಅಂತ, ಈ ಜಿಲ್ಲೆಗೆ ವಂಚನೆ ಮಾಡಲಿಕ್ಕೆ ಬಂದಿರೊರಲ್ಲ ನಾವು, ಮತ ತಗೊಳಿಕ್ ಬಂದಿಲ್ಲ, ನಿಮ್ಮ ವಿಶ್ವಾಸ ನಿಮ್ಮ ಸೇವೆ ಗಳಿಸಕ್ಕೆ ಬಂದಿರೊಂತದ್ದು ನಮ್ಮ ಸರ್ಕಾರ ಗೊತ್ತಿರ್ಲಿ” ಎಂದು ಭಾಷಣ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ.

ರಾಮನಗರ ತಾಲ್ಲೂಕಿನ ಕೈಲಾಂಚ ಹೋಬಳಿಯ ಹಂದಿಗುಂದಿ ಅರಣ್ಯ ಪ್ರದೇಶದಲ್ಲಿ 2006ರ ಅರಣ್ಯ ಹಕ್ಕು ಕಾಯಿದೆ ಕಲಂ 3(1)ಎಂ ಪ್ರಕಾರ ಒಕ್ಕಲೆಬ್ಬಿಸಿರುವ ಅರಣ್ಯ ಭೂಮಿಗಾಗಿ ಕಳೆದ 315 ದಿನಗಳಿಂದ ನಡೆಸುತ್ತಿರುವ ಆಹೋರಾತ್ರಿ ಧರಣಿಯನ್ನು ಕುರಿತು ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಅವರ ಶೈಲಿಯಲ್ಲಿಯೆ ತಮ್ಮ ಅಸಮಾಧಾನವನ್ನು ವಿಡಿಯೋ ಮೂಲಕ ಹೊರ ಹಾಕಿದ್ದಾರೆ.

315 ನೇ ದಿನಕ್ಕೆ ಪ್ರತಿಭಟನೆ :
ಹಂದಿಗುಂದಿ ಅರಣ್ಯ ಪ್ರದೇಶದಲ್ಲಿ ಇರುಳಿಗ ಬುಡಕಟ್ಟು ಜನಾಂಗದವರು ಅಂದಿನಿಂದ ಇಂದಿನವರೆಗೂ ನಡೆಸುತ್ತಿರುವ ಅಹೋರಾತ್ರಿ ಧರಣಿ 315 ನೇ ದಿನಕ್ಕೆ ಮುಂದುವರಿದಿದೆ. 2006 ರ ಅರಣ್ಯ ಹಕ್ಕು ಕಾಯ್ದೆ ಪ್ರಕಾರ ಸುಮಾರು 8 ವರ್ಷ ಗಳಿಂದ ಅರಣ್ಯ ಭೂಮಿಯ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುತ್ತಾ ಬಂದರು ರಾಮನಗರ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದ ಮನವಿಗೆ ಸ್ಪಂದಿಸದೆ ಜಿಲ್ಲಾಡಳಿತ ಸಂಪೂರ್ಣ ವಿಪುಲವಾಗಿದೆ.

1980ರ ಅರಣ್ಯ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ರಾಷ್ಟ್ರೀಯ ಉದ್ಯಾನ ಹಾಗೂ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರನ್ನು ಬೇರೆ ಕಡೆ ಭೂಮಿ ನೀಡಿ ಸ್ಥಳಾಂತರಿಸ ಬೇಕೆಂಬ ಆದೇಶವಿತ್ತು. ಇದನ್ನೆ ಅಸ್ತ್ರವಾಗಿ ಬಳಸಿ ಕೊಂಡು ಅರಣ್ಯ ಇಲಾಖೆ ರಾಜ್ಯ ಮತ್ತು ಸಾಮಾನ್ಯ ಅರಣ್ಯ ಪ್ರದೇಶದಿಂದಲ್ಲು ಬುಡಕಟ್ಟು ಜನಾಂಗದವರನ್ನು ಒಕ್ಕಲೆಬ್ಬಿಸಲಾಗಿತ್ತು.

ನಂತರ 2008 ರಲ್ಲಿ 2006 ರ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಬಂದಿತು, ಆಗಾ ಬುಡಕಟ್ಟು ಜನಾಂಗದ ಬಾಳಲ್ಲಿ ಮಂದಹಾಸ ಮೂಡಿತ್ತು, ಅದರೆ ಅರಣ್ಯ ಇಲಾಖೆ ಇದಕ್ಕೆ ಸರಿಯಾಗಿ ಸ್ಪಂದಿಸದೆ ಬುಡಕಟ್ಟು ಜನಾಂಗಕ್ಕೆ ತುಂಬಾ ಅನ್ಯಾಯ ಮಾಡುತ್ತ ಬಂದಿದೆ.

ಅರಣ್ಯ ಹಕ್ಕು ಕಾಯ್ದೆ ಸೆಕ್ಷನ್ 3(1)ಎಂ ಪ್ರಕಾರ ಹಿಂದೆ ಅರಣ್ಯ ಪ್ರದೇಶದಿಂದ ಒಕ್ಕಲೆಬಿಸಿರುವ ಜಾಗದಲ್ಲಿಯೇ ಅರಣ್ಯ ಭೂಮಿಯನ್ನು ಒಳಗೊಂಡಂತೆ ಅಲ್ಲಿಯೇ ಪುನರ್ ವಸತಿಯನ್ನು ಕಲ್ಪಿಸಲು ಅವಕಾಶ ವಿದರು ಸಹ ಬುಡಕಟ್ಟು ಜನಾಂಗದವರಿಗೆ ಮೋಸ, ವಂಚನೆ ಮಾಡುತ್ತಾ ದಾರಿ ತಪ್ಪಿಸುತಿದೆ.

ಸರ್ವೆ ಕಾರ್ಯ ನಡೆಸಿ ವಿಶೇಷ ಗ್ರಾಮಸಭೆ ಯಲ್ಲಿ ಆಯ್ಕೆಯಾದರು ಸಹ ಅರಣ್ಯ ಇಲಾಖೆಯ ವರು ಮಾನ್ಯ ಸರ್ವೋಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ 109/2008ರ ದಿನಾಂಕ 28/02/2019ರಂದು ನೀಡಿದ ಮದ್ಯಂತರ ತೀರ್ಪನ್ನು ಸಹ ಉಲ್ಲಂಘಿಸಲಾಗಿದೆ.
ಬುಡಕಟ್ಟು ಜನಾಂಗಕ್ಕೆ ಅನ್ಯಾಯ ವಾಗಿದೆ ಅವರಿಗೆ ಅರಣ್ಯ ಭೂಮಿ ನೀಡಲು ಆದೇಶವಿದ್ದರೂ ಅದಕ್ಕೂ ಮನಣೆ ನೀಡದೆ ಅರಣ್ಯ ಹಕ್ಕು ಕಾಯ್ದೆ ಯನ್ನು ಒಪ್ಪಂದೆ ಹಿಂದೆ ಅರಣ್ಯ ಜಮೀನು ಮಾಡುತಿದ್ದ ಜಾಗದಲ್ಲಿ ಜಮೀನಿನ ಬದ್ದ, ಒರಳುಕಲ್ಲು, ಪೂಜಾ ಸ್ಥಳ 1993-94 ರಲ್ಲಿ ರಾಮನಗರ ತಹಶಿಲ್ದಾರ್ ಕಛೇರಿಯ ಹಿಂಬರಹ, ಹಾಗೂ ಸ್ಮಶಾನ ಮುಂತಾದ ಸಾಕ್ಷ್ಯಗಳಿದ್ದರೂ ರಾಮನಗರ ವಲಯ ಅರಣ್ಯಾಧಿಕಾರಿಗಳು ಇದಕ್ಕೆ ಒಪ್ಪಂದೆ ಕಾನೂನು ಬಾಹಿರ ಹಿಂಬರಹ ನೀಡಿದರು, ಇದನ್ನು ಪ್ರಶ್ನಿಸಿ ರಾಮನಗರ ಉಪವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿಗೆ ಮನವಿ ಸಲ್ಲಿಸಲಾಗಿತ್ತು.

ಅದರಂತೆ ದಿನಾಂಕ 23/02/2021 ರಂದು ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ಗ್ರಾಮ ಮಟ್ಟದ ಅರಣ್ಯ ಹಕ್ಕು ಸಮಿತಿಯ ಜೊತೆಯಲ್ಲಿ ಸ್ಥಳ ಪರಿಶೀಲಿಸಲು ತಿಳಿಸಿತ್ತು. ಹಂದಿಗುಂದಿ ಅರಣ್ಯ ಪ್ರದೇಶದಲ್ಲಿ ಸ್ಥಳ ಪರಿಶೀಲನೆ ಮಾಡಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ದಿನಾಂಕ. 23/02/2021 ರಂದು ಸ್ಥಳಕ್ಕೆ ಬಂದು ಅದರಲ್ಲಿ ಅರಣ್ಯ ಇಲಾಖೆಯವರು ಸ್ಥಳ ಪರಿಶೀಲನೆಗೆ ಸ್ಪಂದಿಸದ ಕಾರಣ ಸ್ಥಳದಲ್ಲಿಯೇ ಅಂದಿನಿಂದ ಇಂದಿನವರೆಗೂ ಇರುಳಿಗ ಬುಡಕಟ್ಟು ಜನಾಂಗ ದಿಂದ ಅಹೋರಾತ್ರಿ ಧರಣಿ ಮುಂದುವರಿದಿದೆ.

ದಿನಾಂಕ 17/ 07/2021 ರಂದು ಉಪವಿಭಾಗ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಅರಣ್ಯ ಭೂಮಿ ಮಂಜೂರು ಮಾಡಲು ತೀರ್ಮಾನಕ್ಕೆ ಬಂದರು, ಅರಣ್ಯ ಇಲಾಖೆಯ ಎಸಿಎಫ್ ರವರು ಮತ್ತೆ ಸ್ಥಳದಲ್ಲಿ ಪರಿಶೀಲಿಸಿ ಸಹಿ ಮಾಡುವುದಾಗಿ ಹೇಳಿದರು. ಅದಕ್ಕೆ ಉಪವಿಭಾಗ ಅಧಿಕಾರಿಗಳು ದಿನಾಂಕ: 31/07/2021 ರಂದು ಸಭೆಯಲ್ಲಿ ತೀರ್ಮಾನಿಸಿ ಹಕ್ಕು ಪತ್ರ ನೀಡುವ ಸಂಬಂದ ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಗೆ ಕಳುಹಿಸಲಾಗುವುದ್ದು ಎಂದು ತಿಳಿಸಿದರು. ಆದರೆ ಮತ್ತೆ ಅರಣ್ಯ ಇಲಾಖೆ ಹಳೆಯ ಚಾಳಿಯನ್ನೇ ಮುಂದುವರಿಸಿದೆ, 315 ದಿನ ಕಳೆದರು ಬುಡಕಟ್ಟು ಜನಾಂಗದ ಹಕ್ಕು ನೀಡಲು ಜಿಲ್ಲಾಡಳಿತ ವಿಫಲವಾಗಿದೆ, ಆದುದರಿಂದ ಮುಂದೆ ಧರಣಿಯನ್ನು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ನಡೆಸಲು ಹಾಗೂ ಕಾಯ್ದೆ ವಿರುದ್ಧ ಹೇಳಿಕೆ, ವರದಿ ನೀಡುವ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ವಂಚನೆ ಹಾಗೂ ಕ್ಷುಲ್ಲಕ ಸುಳ್ಳು ಮಾಹಿತಿ ನೀಡಿ ಹಕ್ಕು ತಪ್ಪಿಸಲು ಸಂಚು ರೂಪಿಸಿದ ಪ್ರಕರಣದ ಮೇರೆಗೆ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಲು ನಾವುಗಳು ತೀರ್ಮಾನಿಸಿದ್ದೇವೆ.

ಇಂತಿ
ಕೃಷ್ಣಮೂರ್ತಿ
ಗ್ರಾಮ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷರು.
ಗೊಲ್ಲರದೊಡ್ಡಿ(ವಡ್ಡರಹಳ್ಳಿ).
ಕೈಲಾಂಚ ಹೋಬಳಿ,
ರಾಮನಗರ ತಾಲ್ಲೂಕು.
ಮೊ: 9538613503

Leave a Reply

Your email address will not be published. Required fields are marked *