ವಿದ್ಯುತ್ ಸ್ಪರ್ಷಿಸಿ ಯುವಕನ ಸಾವು
ರಾಮನಗರ: ಮಾವಿನ ತೋಟಕ್ಕೆ ಔಷಧಿ ಸಿಂಪಡಿಸುವ ವೇಳೆ ಯುವಕನಿಗೆ ವಿದ್ಯುತ್ ಸ್ಪರ್ಷಿಸಿ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚನ್ನಪಟ್ಟಣ ತಾಲೂಕಿನ ವಿರುಪಾಕ್ಷಿಪು ಹೋಬಳಿಯ ವಿರುಪಸಂದ್ರ ಗ್ರಾಮದಲ್ಲಿ ನಡೆದಿದೆ.
ವಿರುಪಸಂದ್ರ ಗ್ರಾಮದ ವಿನಯ್ ಕುಮಾರ್ ಮೃತ ಯುವಲ ಈತ ತಮ್ಮ ಮಾವಿನ ತೋಟದಲ್ಲಿ ಟ್ರಾಕ್ಟರ್ ನಲ್ಲಿ ಮಾವಿನ ಗಿಡಗಳಿಗೆ ಔಷಧಿ ಸಿಂಪರಣೆ ಮಾಡುತ್ತಿದ್ದಾಗ ತಮ್ಮ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಔಷಧಿ ಸಿಂಪಡಣೆಯಾಗಿದ್ದರಿಂದ ವಿದ್ಯುತ್ ಪ್ರವಹಿಸಿ ಆತ ಮೃತಪಟ್ಟಿದ್ದಾನೆ. ಈ ಬಗ್ಗೆ ದೂರು ದಾಖಲಾಗಿಲ್ಲ.