ರಾಮನಗರದಲ್ಲಿ ಐದು ವರ್ಷಗಳ ಕರ್ತವ್ಯ ನಿರ್ವಹಣೆ ತೃಪ್ತಿ ತಂದಿದೆ : ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮರಿಗೌಡ

ರಾಮನಗರ:ಬನ್ನಿಕುಪ್ಪೆಕೆಂಗಲ್‍ಆಂಜನೇಯಗ್ರಾಮಾಂತರವಿದ್ಯಾಸಂಸ್ಥೆಆವರಣದಲ್ಲಿರಾಮನಗರದಿಂದಚನ್ನಪಟ್ಟಣಕ್ಕೆ ವರ್ಗಾವಣೆಗೊಂಡ ರಾಮನಗರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮರೀಗೌಡ ಅವರಿಗೆ ಕೈಲಾಂಚ ಕ್ಲಸ್ಟರ್‍ನ ಶಾಲೆಗಳ ವತಿಯಿಂದ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿ ಸನ್ಮಾನಿಸಿ ಬೀಳ್ಕೊಟ್ಟರು.
ಕೆಂಗಲ್ ಆಂಜನೇಯ ಗ್ರಾಮಾಂತರ ವಿದ್ಯಾಸಂಸ್ಥೆಅಧ್ಯಕ್ಷ ಕೆ.ಶಿವಲಿಂಗಯ್ಯಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮರೀಗೌಡಅವರನ್ನು ಸನ್ಮಾನಿಸಿ ಮಾತನಾಡಿಸಾರ್ವಜನಿಕರೊಂದಿಗೆಉತ್ತಮ ಭಾಂಧವ್ಯ, ಪರಸ್ಪರ ಅಧಿಕಾರಿಗಳಲ್ಲಿ ಸಿಬ್ಬಂದಿಗಳಲ್ಲಿ ಸೌಹಾರ್ಧತೆಇದ್ದಾಗಸಾರ್ವಜನಿಕರಿಗೆಉತ್ತಮ ಸೇವೆ ನೀಡಬಹುದು.
ಕಳೆದ ಐದು ವರ್ಷಗಳಿಂದ ತಾಲೂಕಿನ ಶಿಕ್ಷಣಾಧಿಕಾರಿಯಾಗಿಕಾರ್ಯನಿರ್ವಹಣೆಗೆ ಬಂದಾಗಿನಿಂದಲೂ ಸಾರ್ವಜನಿಕರೊಂದಿಗೆ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಶಿಕ್ಷಣ ಇಲಾಖೆಯಲ್ಲಿಉತ್ತಮಕೆಲಸ ನಿರ್ವಹಿಸಿದ್ದಾರೆ.ಅವರಅವಧಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಾರದಂತೆಉತ್ತಮ ಸೇವೆ ತಾಲೂಕಿಗೆ ನೀಡಿದ್ದಾರೆಅವರಸೇವೆಗೆ ಶ್ರೇಯಸ್ಸು ಸಿಗಲಿ ಎಂದು ಶುಭಹಾರೈಸಿದರು.
ಕೈಲಾಂಚ ಕ್ಲಸ್ಟರ್ ಸಿಆರ್‍ಪಿ ಮೃತ್ಯುಂಜಯ ಮಾತನಾಡಿ ಬಿ.ಎನ್. ಮರೀಗೌಡಅವರು ಕಳೆದ ಐದು ವರ್ಷದಿಂದ ರಾಮನಗರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಉತ್ತಮ ಸೇವೆ ನೀಡಿದ್ದಾರೆ. ನಮಗೆ ವೃತ್ತಿಯಲ್ಲಿ ಯಾವುದೇ ರೀತಿಯ ಕಿರಿಕಿರಿ ಉಂಟು ಮಾಡದೆ ಉತ್ತಮ ಮಾರ್ಗದರ್ಶನ ನೀಡಿ ಶಿಕ್ಷಕರ ಹೃದಯಗೆದ್ದಿದ್ದಾರೆ.
ಪ್ರತಿ ಶಾಲೆಯಲ್ಲಿಯಾವುದೇ ಸಮಸ್ಯೆ ಬಾರದಂತೆಎಚ್ಚರ ವಹಿಸಿ ಕಾಲ ಕಾಲಕ್ಕೆ ಶಿಕ್ಷಕರ ಕೊರತೆ ನೀಗಿಸಿ ಸಾರ್ವಜನಿಕರಿಂದ ಯಾವುದೇದೂರು ಬರದಂತೆ ಉತ್ತಮ ಸೇವೆ ನೀಡಿದ್ದಾರೆ ಸಾರ್ವಜನಿಕರೊಂದಿಗೆಉತ್ತಮ ಸ್ಪಂಧನೆ ಬಾಂಧವ್ಯ ಹೊಂದಿದ್ದರಿಂದಶಿಕ್ಷಣ ಇಲಾಖೆಗೆ ಸಾರ್ವಜನಿಕರಿಂದಉತ್ತಮ ಸಹಕಾರ ಸಿಗುತ್ತಿದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಎನ್. ಮರೀಗೌಡ ರಾಮನಗರತಾಲೂಕುಕ್ಷೇತ್ರ ಶಿಕ್ಷಣಾಧಿಕಾರಿಯಾಗಿಐದುವರ್ಷದಕರ್ತವ್ಯ ತೃಪ್ತಿ ತಂದಿದೆ.ಶಿಕ್ಷಕರು, ಕಛೇರಿ ಅಧಿಕಾರಿಗಳು, ಸಿಬ್ಬಂದಿಗಳು ನನಗೆ ಅಪಾರ ಬೆಂಬಲ ಸಹಕಾರನೀಡಿದ್ದಾರೆನನ್ನಅಧಿಕಾರಅವಧಿಯಲ್ಲಿಎಲ್ಲರನ್ನೂ ಪ್ರೀತಿ ವಿಶ್ವಾಸಕ್ಕೆತೆಗೆದುಕೊಂಡುಕೆಲಸ ನಿರ್ವಹಿಸಿದ್ದೇನೆ ಎಂಬ ವಿಶ್ವಾಸ ನನಗಿದೆ.
ತಾಲೂಕಿನ ರೈತರು, ಸಾರ್ವಜನಿಕರು, ಮಾಧ್ಯಮ ಮಿತ್ರರು, ಎಲ್ಲಾ ಇಲಾಖೆಗಳ ವೃತ್ತಿ ಭಾಂಧವರು, ಉತ್ತಮ ಸಹಕಾರ ನೀಡಿದ್ದೀರಿ ಪಕ್ಕದ ತಾಲೂಕಿಗಷ್ಟೇ ನಾನು ವರ್ಗಾವಣೆಗೊಂಡಿದ್ದೇನೆ. ವರ್ಗಾವಣೆಗೊಂಡು ಆಗಮಿಸಿರುವ ಶಿಕ್ಷಣಾಧಿಕಾರಿಗಳಿಗೂ ನನಗೆ ನೀಡುತ್ತಿದ್ದ ಸಲಹೆ ಸಹಕಾರ ನೀಡಿ ಉತ್ತಮಕಾರ್ಯನಿರ್ವಹಣೆಗೆ ಸಹಕರಿಸಬೇಕುಎಂದರು.
ಕೆಂಗಲ್‍ಆಂಜನೇಯ ಪ್ರೌಢಶಾಲೆ ಮುಖ್ಯಶಿಕ್ಷಕ ರಮೇಶ್‍ಗೌಡ, ಸಂಸ್ಥೆ ಉಪಾಧ್ಯಕ್ಷಚನ್ನಂಕೇಗೌಡ, ವಿಭೂತಿಕೆರೆಕ್ಲಸ್ಟರ್ ಸಿಆರ್‍ಪಿ ಶಿವರುದ್ರಯ್ಯ, ಸರ್ಕಾರಿ ಪ್ರೌಢಶಾಲೆಮುಖ್ಯಶಿಕ್ಷಕರಾದ ಲಕ್ಕೋಜನಹಳ್ಳಿ ಪ್ರೇಮಲತ, ಕೈಲಾಂಚ ಗಾಯಿತ್ರಿದೇವಿ, ಶಿಕ್ಷಕರಾದ ಶ್ರೀನಿವಾಸ್, ಎಚ್.ಕೆ. ಶೈಲಾ,ರೇಣುಕಯ್ಯ, ಕವಿತಾಇನಾಂದಾರ್, ಶೇಖರ್, ರೇಖಾ, ಸತೀಶ್, ಪರಶಿವಮೂರ್ತಿ, ಶಿವಕುಮಾರ್, ಪಾಪಣ್ಣ, ಗಿರಿಯಪ್ಪ, ವಿಜಯಕುಮಾರ್ ಮುಂತಾದವರಿದ್ದರು.

Leave a Reply

Your email address will not be published. Required fields are marked *