ಜನರ ಆರೋಗ್ಯ ಕಾಪಾಡುವುದು ನಿಜವಾದ ಅಭಿವೃದ್ಧಿ : ಶಾಸಕ ಎ. ಮಂಜುನಾಥ್
ಮಾಗಡಿ : ಶೈಕ್ಷಣಿಕವಾಗಿ ಮತ್ತು ಜನರ ಆರೋಗ್ಯ ಕಾಪಾಡುವುದು ನಿಜವಾದ ಅಭಿವೃದ್ದಿಯಾಗಿದೆ ಎಂದು ಶಾಸಕ ಮಂಜುನಾಥ್ ಹೇಳಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಎ.ಮಂಜು ಚಾರಿಸ್ಟಬಲ್ ಟ್ರಸ್ಟ್, ಬಿಡದಿ ಹೋಬಳಿ, ಕೆಮಿಸ್ಟ್ ಮತ್ತು ಡ್ರೆಗ್ಗಿಸ್ ಫೌಂಡೇಶನ್ ವತಿಯಿಂದ ಮಾಗಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಶಾಲಾ ಮಕ್ಕಳ ಬೃಹತ್ ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವ ವಿಧಾನಸಭಾ ಕ್ಷೇತ್ರದಲ್ಲೂ ಮಕ್ಕಳ ಕಣ್ಣಿನ ತಪಾಸಣೆ ನಡೆದಿಲ್ಲ, ನಾವು ಕ್ಷೇತ್ರದ ಜನತೆ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದೇವೆ, ಇದರಿಂದ ನಮಗೆ ಲಾಭವಾಗುತ್ತಿದೆ ಎಂಬ ದೃಷ್ಠಿಯಿಂದ ಈ ಕಾರ್ಯಕ್ರಮ ನಡೆಸುತ್ತಿಲ್ಲ, ಹುಟ್ಟಿದ ಹಬ್ಬದ ದಿನದ ಅಂಗವಾಗಿ ಆರೋಗ್ಯ ಶಿಬಿರ ನಡೆಸುವವರು ನಾವಲ್ಲ, ಕಾಟಾಚಾರದ ಸಭೆ ಮಾಡಲು ನನಗೆ ಬರಲ್ಲ, ಮಕ್ಕಳ ಅಂಧಕ್ಕೆ ತಕ್ಕವಾ ಕನ್ನಡಕ ಪ್ರೇಮ್ಗಳನ್ನು ಗುಣಮಟ್ಟದಕನ್ನಡಕವನ್ನೆ ನೀಡಿದ್ದೇವೆ, 45 ಸಾವಿರ ವಿದ್ಯಾರ್ಥಿಗಳ ತಪಾಸಣೆ ಮಾಡಲಾಗಿದೆ, ಇದು ನಮ್ಮ ಬದ್ದತೆಯಾಗಿದೆ ಎಂದು ಎ.ಮಂಜುನಾಥ್ ತಿಳಿಸಿದರು.
ಕರ್ನಾಟಕ ಕ್ಯಾನ್ಸರ್ ಸಂಸ್ಥೆವತಿಯಿಂದ ಮಹಿಳೆಯರ ಆರೋಗ್ಯ ತಪಾಸಣೆ : ಎ.ಮಂಜು ಚಾರಿಸ್ಟಬಲ್ ಟ್ರಸ್ನಿಂದ ಮತ್ತೊಂದು ದೊಡ್ಡ ಕಾರ್ಯಕ್ರಮಕ್ಕೆ ಚಾಲನೆ ಕೊಡುತ್ತಿದ್ದು ಕರ್ನಾಟಕ ಕಾನ್ಸರ್ ಸಂಸ್ಥೆ ವತಿಯಿಂದ ತಾಲೂಕಿ£ ಎಲ್ಲಾ ಮಹಿಳೆಯರಿಗೂ ಸ್ತನ ಮತ್ತು ಗರ್ಭ ಕೋಶ ತಪಾಸಣ ಶಿಬಿರವನ್ನು ನಡೆಸಲಾಗುತ್ತದೆ, ಜ.26 ರಂದು 501 ಮಹಿಳೆಯರಿಗೆ ತಪಾಸಣೆ ನಡೆಸಲಾಗುವುದು ಮೊದಲ ಆಧ್ಯತೆಯನ್ನು ಅಂಗನಾಡಿ ಶಿಕ್ಷಕಿಯರು, ಸಹಾಯಕರಿಯರು ಹಾಗೂ ಆಶಾ ಕಾರ್ಯಕರ್ತರಿಗೆ ತಪಾಸಣೆ ಮಾಡಿಸಿ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದರೆ ಅದನ್ನು ಕೂಡ ಉಚಿತವಾಗಿ ಮಾಡಲಾಗುತ್ತದೆ, ಬಿಡದಿಯಲ್ಲಿ ವಿಕಲಚೇತನ ಮಕ್ಕಳಿಗೆ ವಿಶೇಷ ಇನ್ಸೂಟ್ಯೂಟ್ ಆರಂಭಿಸಿದ್ದು ಇಬ್ಬರು ಟೀಚರ್ನ್ನು ನೇಮಿಸಿ 12 ವಿಕಲಚೇತನ ಮಕ್ಕಳಿಗೆ ಭೋದನ ವ್ಯವಸ್ಥೆ ಮಾಡಲಾಗಿದೆ, ಆ ಮೂಲಕ ವಿಕಲ ಚೇತನ ಮಕ್ಕಳಿಗೂ ಕೂಡ ಶಿಕ್ಷಣ ಕೊಡಿಸುವ ಕೆಲಸವನ್ನು ಮಾಡುತ್ತಿದ್ದೇವೆಂದು ತಿಳಿಸಿದರು.
ಬಿಡದಿ ಹೋಬಳಿ, ಕೆಮಿಸ್ಟ್ ಮತ್ತು ಡ್ರೆಗ್ಗಿಸ್ ಫೌಂಡೇಶನ್ ಅಧ್ಯಕ್ಷ ಮಂಜುನಾಥ್ ಮಾತನಾಡಿ, 2018 ರಲ್ಲಿ ಪ್ರಾರಂಭವಾಗಿದ್ದು ಪ್ರತಿ ತಿಂಗಳು 4ನೇ ಮಂಗಳವಾರ ಶಿಬಿರ ನಡೆಯುತ್ತದೆ, 23 ಕ್ಯಾಂಪ್ಗಳಾಗಿದ್ದು 2400 ಮಂದಿಗೆ ತಪಾಸಣೆ ಆಗಿ 750 ಮಂದಿಗೆ ಕನ್ನಡಕ ವಿತರಣೆ, 670 ಮಂದಿಗೆ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ, ಕೋವಿಡ್ನಿಂದ ಆನ್ಲೈನ್ ಕ್ಲಾಸ್ ಆರಂಭವಾದ ಮೇಲೆ ಮಕ್ಕಳಲ್ಲಿ ಕಣ್ಣಿನ ದೋಷ ಕಾಣಿಸಿಕೊಂಡಿದ್ದು ಮಾಗಡಿ ವಿಧಾನ ಸಭಾ ಕ್ಷೇತ್ರದ ಎಲ್ಲಾಶಾಲಾ ಮಕ್ಕಳಿಗೂ ತಪಾಸಣೆ ಮಾಡಿದ್ದು 45 ಸಾವಿರದ 899 ವಿದ್ಯಾರ್ಥಿಗಳ ತಪಾಸಣೆ ಮಾಡಿದ್ದು 217 ವಿದ್ಯಾರ್ಥಿಗಳಲ್ಲಿ ದೋಷ ಕಂಡು ಬಂದಿದ್ದು 768 ವಿದ್ಯಾರ್ಥಿಗಳಿಗೆ ಕನ್ನಡವಿತರಣೆ, 68 ವಿದ್ಯಾರ್ಥಿಗಳಿಗೆ ಶಸ್ತ್ರ ಚಿಕಿತ್ಸೆ 3 ಮಕ್ಕಳಿಗೆ ಯುಡಿಐಡಿ ಕಾರ್ಡ್ ಕೊಡಿಸುವ ಮೂಲಕ ಶಿಬಿರ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಬಿಇಒ ಯತೀಕುಮಾರು ಮಾತನಾಡಿದರು, ಶಾಲಾ ಮಕ್ಕಳಿಗೆ ಕನ್ನಡ ವಿತರಣೆ ಮಾಡಲಾಯಿತು.
ತಾ.ಪಂ. ಮಾಜಿ ಅಧ್ಯಕ್ಷೆ ಲಕ್ಷ್ಮೀ ಎ.ಮಂಜುನಾಥ್, ಪುರಸಭಾ ಅಧ್ಯಕ್ಷೆ ವಿಜಯ ರೂಪೇಶ್, ಉಪಾಧ್ಯಕ್ಷ ರಹಮತ್, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜು, ಸದಸ್ಯರಾದ ಎಂ.ಎನ್.ಮಂಜು, ಅನಿಲ್ ಕುಮಾರು , ಅಶ್ವಥ್, ರೂಪೇಶ್, ಗೀತಾ ಮಂಜುನಾಥ್, ಜುಟ್ಟನಹಳ್ಳಿ ಜಯರಾಂ, ಕಾಳಾರಿ ಕಾವಲ್ ಗ್ರಾ.ಪಂ.ಅಧ್ಯಕ್ಷ ಸುರೇಶ್, ಧವಳಗಿರಿ ಚಂದ್ರು ಸೇರಿದಂತೆ ಇತರರು ಭಾಗವಹಿಸಿದ್ದರು.