ದೇವಾಲಯಗಳು ಮನುಷ್ಯನಿಗೆ ನೆಮ್ಮದಿ ನೀಡುವ ತಾಣಗಳು : ಡಾ.ಕೆ.ಪಿ. ಮಹದೇವಶಾಸ್ತ್ರಿ
ಮಾಗಡಿ : ದೇವಾಲಯಗಳು ಮನುಷ್ಯನಿಗೆ ನೆಮ್ಮದಿ ನೀಡುವ ತಾಣಗಳಾಗಿವೆ ಎಂದು ವೀರಶೈವ -ಲಿಂಗಾಯಿತ ರಾಜ್ಯಮುಖಂಡ ಡಾ. ಕೆಪಿ.ಮಹದೇವಶಾಸ್ತ್ರಿ ಹೇಳಿದರು.
ತಾಲೂಕಿನ ಹೆಡೇಹಳ್ಳಿ ಗ್ರಾಮದ ಮಹದೇವಮ್ಮ ದೇವಾಲಯದ ಮಂಡಲ ಪೂಜೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮನುಷ್ಯನ ಜನ್ಮ ಸಾರ್ಥಕತೆಯಾಗಲು ಧರ್ಮದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಭಾರತೀಯ ಪರಂಪರೆಯಾದ ಅಚಾರ ವಿಚಾರಗಳು ಜೀವನದ ಭಾಗವಾಗಬೇಕು. ದೇವಾಲಯಗಳು ಜನರಲ್ಲಿ ಧರ್ಮ ಜಾಗೃತಿ ಮೂಡಿಸಲು ಮತ್ತು ಸನ್ಮಾರ್ಗದಲ್ಲಿ ನಡೆಯಲು ಮಾರ್ಗದರ್ಶಿಗಳಾಗುತ್ತಿವೆ. ಈ ಮೂಲಕ ಆರೋಗ್ಯಕರ, ಸ್ವಸ್ಥ್ಯ ಸಮಾಜವನ್ನು ನಿರ್ಮಾಣವಾಗುತ್ತದೆ.
ಬದುಕಿನಲ್ಲಿ ಕಾಯಕವನ್ನು ಮಾಡುವ ಮೂಲಕ ಮಾಡಿದ ಕೆಲಸಗಳು ಶಾಶ್ವತವಾಗಿ ಉಳಿಯುವಂತಾಗಬೇಕು ಈ ನಿಟ್ಟಿನಲ್ಲಿ ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ಗ್ರಾಮದಲ್ಲಿ ದೇವಾಲಯ ನಿರ್ಮಿಸಿ ಶಾಂತಿ, ಐಕ್ಯತೆ ಕಾಪಾಡುತ್ತಿರುವುದು ಆರೋಗ್ಯ ಸಮಾಜಕ್ಕೆ ಕೈಗನ್ನಡಿಯಾಗಿದೆ ಎಂದರು.
ವೀರಶೈವ ಮುಖಂಡ ಪೊಲೀಸ್ ವಿಜಯ್ ಕುಮಾರು ಮಾತನಾಡಿ, ಧಾರ್ಮಿಕ ಕ್ಷೇತ್ರಗಳು ಮತ್ತುಧಾರ್ಮಿಕ ಆಚರಣೆಗಳಿಂದ ಮಾತ್ರ ಮನುಷ್ಯ ನೆಮ್ಮದಿಪಡೆಯಲು ಸಾಧ್ಯ. ಮನುಷ್ಯ ತಾನುಗಳಿಸಿದ ಅಲ್ಪದಷ್ಟು ಹಣವನ್ನು ಧಾರ್ಮಿಕ ಕಾರ್ಯಗಳಿಗೆ ವಿನಿಯೋಗಿಸಿದಾಗ ಮತಷ್ಟು ಉನ್ನತಕ್ಕೇರಲು ಸಾಧ್ಯವಾಗುತ್ತದೆ, ಪ್ರತಿದಿನ ದೇವಾಲಯದಲ್ಲಿ ಪೂಜಾಕೈಂಕರ್ಯಗಳು ನಡೆಯಲಿ ಈ ದೇವಾಲಯದ ಗೋಪುರ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವೀರಶೈವ -ಲಿಂಗಾಯಿತ ರಾಜ್ಯಮುಖಂಡ ಕೆಪಿ.ಮಹದೇವಶಾಸ್ತಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.
ವಿದ್ವಾನ್ ಕೆ.ಎಂ.ಪ್ರಭು ಸ್ವಾಮಿ, ಅರ್ಚಕ ಶಂಕರಣ್ಣ, ಗ್ರಾ.ಪಂ. ಸದಸ್ಯ ಸಾವಂದಯ್ಯ, ಅಖಿಲಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ಹಿರಿಯ ಉಪಾಧ್ಯಕ್ಷ ಟಿ.ಕೆ.ರಾಮು, ಬಸ್ ಮಧು, ಹಿರಿಯ ಮುಖಂಡರಾದ ಮಲ್ಲೇಶ್, ರೇವಣ್ಣ ಸಿದ್ದಯ್ಯ, ಮಹದೇವಯ್ಯ, ಸಿದ್ದಯ್ಯ, ಕುಮಾರು ಇತರರು ಇದ್ದರು.