ಮೇಕೆದಾಟು ಪಾದಯಾತ್ರೆಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಬೆಂಬಲ

ರಾಮನಗರ : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಜನೆವರಿ 9 ರಿಂದ ನಡೆಯುತ್ತಿರುವ ಮೇಕೆದಾಟು ಹೋರಾಟಕ್ಕೆ ಬೆಂಬಲ ನೀಡಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ. ಕೃಷ್ಣೇಗೌಡ, ಜಿಲ್ಲಾಧ್ಯಕ್ಷ ಶಿವುಗೌಡ ತಿಳಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕಳೆದ14 ವರ್ಷಗಳಿಂದ ನಿರಂತರವಾಗಿ ನಾಡು, ನುಡಿ, ನೆಲ, ಜಲ, ವಿಚಾರವಾಗಿ ಹೋರಾಟಗಳನ್ನು ಮಾಡುತ್ತಿದೆ. ಮೇಕೆದಾಟು ಆಣೆಕಟ್ಟು ನಿರ್ಮಿಸಲೇಬೆಕೆಂದು ಒತ್ತಾಯಿಸಿ 2014 ರಿಂದ 2021 ರವರೆಗೂ ನಿರಂತರವಾಗಿ ಹೋರಾಟಗಳನ್ನು ಮಾಡುತ್ತಿದೆ. ಬೈಕ್ ಜಾಥಾ, ಪಾದಯಾತ್ರೆ, ಬಂದ್, ಪ್ರತಿಭಟನೆ, ಈ ರೀರಿಯಲ್ಲಿ ವಿಧವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮೇಕೆದಾಟು ಅಣೆಕಟ್ಟು ಕಟ್ಟುವಂತೆ ಒತ್ತಾಯಿಸಿ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಈ ಪಾದಯಾತ್ರೆಗೆ ಪಕ್ಷಾತೀತವಾಗಿ ಹೋರಾಟಕ್ಕೆ ಬೆಂಬಲವನ್ನು ಎಲ್ಲರೂ ನೀಡಿದ್ದು, ಅದರಂತೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕೂಡ ಬೆಂಬಲ ನೀಡುತ್ತಿದೆ.
ಮೇಕೆದಾಟು ಅಣೆಕಟ್ಟು ಕಟ್ಟುವುದರಿಂದ 6 ಜಿಲ್ಲೆಯ ಜನರಿಗೆ ಕುಡಿಯುವ ನೀರು ಸಂಪೂರ್ಣವಾಗಿ ದೊರೆಯುತ್ತದೆ ಮತ್ತು ವಿದ್ಯುತ್ ಉತ್ಪಾದನೆ ಆಗುತ್ತದೆ ಹಾಗೂ ಬೆಂಗಳೂರು ನಗರಕ್ಕೆ ಸಂಪೂರ್ಣವಾಗಿ ಕುಡಿಯುವ ನೀರನ್ನು ನೀಡಬಹುದು ಎಂಬುದು ಎಲ್ಲರ ಮಹದಾಸೆಯಾಗಿದೆ ಆದ್ದರಿಂದ ಕನ್ನಡಿಗರೆಲ್ಲಾ ಒಂದಾಗಿ ಈ ಹೋರಾಟದಲ್ಲಿ ಭಾಗವಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಒತ್ತಾಯಿಸಿ ಶಿಘ್ರವಾಗಿ ಅಣೆಕಟ್ಟು ನಿರ್ಮಿಸುವಂತೆ ಈ ಮೂಲಕ ಕ ರ ವೇ ಸ್ವಾಭಿಮಾನಿ ಬಣ ಒತ್ತಾಯಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *