ಶ್ರೀರಂಗಪಟ್ಟಣದ ವ್ಯಕ್ತಿ ಚನ್ನಪಟ್ಟಣದಲ್ಲಿ ಆತ್ಮಹತ್ಯೆ : ಕಾರಣವೇನು : ಸಿ.ಪಿ.ಯೋಗೇಶ್ವರ್ ಭೇಟಿ ಸಂತ್ವಾನ
ಚನ್ನಪಟ್ಟಣ (hairamanagara.in) : ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಹೋಬಳಿಯ ಕುಂಬಾರಕುಂಟೆ ಗ್ರಾಮದ ವ್ಯಕ್ತಿವೋರ್ವ ಚನ್ನಪಟ್ಟಣದ ವಂದಾಗುಪ್ಪೆಯ ಬಳಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ರಾಮಕೃಷ್ಣೇಗೌಡ ಎಂಬುವನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಅವರ ಪುತ್ರ ರಾಘವೇಂದ್ರ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ನಮ್ಮ ತಂದೆ ಪದೇ ಪದೇ ನಿಮ್ಮನ್ನು ಸಾಕಲು ಆಗೋದಿಲ್ಲ, ನಾನು ಸೆಕ್ಯೂರಿಟಿ ಕೆಲಸವನ್ನು ಮಾಡಿಕೊಂಡು ನಿಮ್ಮನ್ನು ದಡ ಸೇರಿಸಲು ಆಗಲ್ಲ ನಾನು ಸಾಯುತ್ತೇನೆ ಎಂದು ಹೇಳುತ್ತಿದ್ದರು.ಆಗಾಗಿ ಇಲ್ಲಿ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗ್ರಾಮಾಂತರ ಠಾಣೆಯ ಪಿಎಸ್ಐ ಅವರು ದೂರು ದಾಖಲಿಸಿಕೊಂಡು. ಶವವನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರಿಗೆ ಒಪ್ಪಿಸಿದ್ದಾರೆ.

ಮೃತ ಆಟೋ ಡ್ರೈವರ್ ಮನೆಗೆ ಸಿ.ಪಿ.ಯೋಗೇಶ್ವರ್ ಭೇಟಿ ಸಂತ್ವಾನ
ಚನ್ನಪಟ್ಟಣ ಕನಕ ನಗರದ ಮೃತ ಆಟೋ ದೊಳ್ಳು ಗೌಡ (ಕಾರ್ತಿಕ್) ಅವರ ಮನೆಗೆ ವಿಧಾನಪರಿಷತ್ ಸದಸ್ಯ ಸಿ. ಪಿ.ಯೋಗೇಶ್ವರ್ ರವರು ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಮೃತರ ಸಣ್ಣ ಮಕ್ಕಳ ವಿದ್ಯಾಭ್ಯಾಸಕ್ಕೆ ತಲಾ ಒಂದೊಂದು ಲಕ್ಷ ರೂಪಾಯಿ ನೀಡುವ ಭರವಸೆ ನೀಡಿದರು. ಮೃತರ ಪತ್ನಿಗೆ ಜೀವನ ನಿರ್ವಹಣೆಗೆ ಕೆಲಸ ನೀಡುವ ಭರವಸೆಯನ್ನು ಕೊಟ್ಟರು.
ವರದಿ : ಶೃತಿ ಹರೀಶ್ ಗೌಡ
ಮೊ: 9632008128