ಅಂಗವೈಕಲ್ಯತೆ ನನ್ನ ಸಾಧನೆಗೆ ಅಡ್ಡಿಯಾಗಿಲ್ಲ : ತಂಬೂರಿ ಕಲಾವಿದ ಡಿಕ್ಕಿ ಸಿದ್ದಯ್ಯ

ರಾಮನಗರ (hairamanagara.in) : ನಾನು ಅನಕ್ಷರಸ್ಥ, ಜೊತೆಗೆ ಹುಟ್ಟುತ್ತಲೇ ಅಂಧ. ಆದರೆ ಇದುವರೆಗೂ ನನಗೆ ಅಂಗವೈಕ್ಯಲತೆ ಇದೆ ಎಂದು ಅನಿಸಿಲ್ಲ ಎಂದು ತಂಬೂರಿ ಕಲಾವಿದ ಡಿಕ್ಕಿ ಸಿದ್ದಯ್ಯ ಹೇಳಿದರು.
ಇಲ್ಲಿನ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ನಡೆದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮೂರಿನ ಸುತ್ತಮುತ್ತ ಇರುವ ನೂರಾರು ಆಸಕ್ತರಿಗೆ ಕಲೆಯನ್ನು ಕಲಿಸುತ್ತಿದ್ದೇನೆ ಎಂದು ಅವರು ಹೇಳಿದರು. ಮಾದೇಶ್ವರ ಮಹಾಕಾವ್ಯದಲ್ಲಿ ಬರುವ ಸಂಕಮ್ಮನ ಸಾಲು, ಕೆಂಪಚಾರಿಕುಲುಮೆಯ ಪ್ರಸಂಗ, ಬೆಟ್ಟದಚಾಮುಂಡಿ ನಂಜುಂಡೇಶ್ವರರ ನಡುವಿನ ಸಂವಾದದ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅವರು, ತಮ್ಮ ಗುರುಗಳಾದ ಕೆಬ್ಬಾಪುರದ ನಿಂಗಪ್ಪ, ರಾಚಪ್ಪಅವರನ್ನು ನೆನೆದು ಕಲಿಕೆಯ ದಿನಗಳು, ತಂದೆ-ತಾಯಿಯರನ್ನು, ಸಂಗಡಿಗರನ್ನು ಸಭಿಕರಿಗೆ ಪರಿಚಯಿಸಿದರು.

ನ್ಯೂಎಕ್ಸ್‍ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಡಿ.ಆರ್.ರವಿಕುಮಾರ್ ಮಾತನಾಡಿ ನಾಡೋಜ ಎಚ್.ಎಲ್.ನಾಗೇಗೌಡರುಕಟ್ಟಿದಜಾನಪದಲೋಕದಲ್ಲಿಪ್ರತಿ ತಿಂಗಳು ಅಪರೂಪದಕಲಾವಿದರನ್ನು ಕರೆಸಿ ತಿಂಗಳ ಅತಿಥಿಯಂತಹಕಾರ್ಯಕ್ರಮ ನಡೆಯುತ್ತಿರುವುದು ಸಂತೋಷದ ವಿಷಯ. ಪರಿಷತ್ತು ‘ವಿದ್ಯಾರ್ಥಿಗಳ ನಡೆಜಾನಪದ ಲೋಕದಕಡೆ’ಎಂಬ ಶೀರ್ಷಿಕೆಯಡಿಯಲ್ಲಿ ನಮ್ಮಕಾಲೇಜು ವಿದ್ಯಾರ್ಥಿಗಳನ್ನು ಜಾನಪದ ಲೋಕಕ್ಕೆ ಕರೆಸಿಕೊಂಡು ಜಾನಪದದಅರಿವು ಮೂಡಿಸುತ್ತಿರುವುದುಜನಪದದ ಉಳಿವಿಕೆಯ ದೃಷ್ಠಿಯಿಂದ ಮಹತ್ವದ್ದಾಗಿದೆ ಎಂದರು.

ರಾಮನಗರ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ಮಾತನಾಡಿ ಕುವೆಂಪು ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಎನ್.ಎಸ್.ಎಸ್ ಶಿಬಿರದಲ್ಲಿ ಪಾಲ್ಗೊಂಡು ಶ್ರಮದಾನ ಮಾಡಿದ ದಿನಗಳನ್ನು ನೆನೆದರು. ಆಗಿನ್ನುಜಾನಪದ ಲೋಕಕ್ಕೆ ಅಡಿಪಾಯ ಹಾಕಲಾಗಿತ್ತು. ಇಂದು ಜಾನಪದ ಲೋಕ ವಿಶ್ವವಿದ್ಯಾಲಯದರೂಪದಲ್ಲಿ ಬೆಳೆದು ಗ್ರಾಮೀಣ ಬದುಕಿನ ನೈಜ್ಯತೆಯನ್ನು ನಮ್ಮ ಮುಂದೆ ನಾಗೇಗೌಡರು ನಿಲ್ಲಿಸಿದ್ದಾರೆ. ನಮ್ಮೂರಿನ ಸುತ್ತಮುತ್ತಇದ್ದಕೊಂಡಮಾಮ ಕುರುಕುರುಮಾಮ ಎಂದು ಹಾಡುತ್ತಿದ್ದ ಬುಡಬುಡಕೆಯವರು ಹುಡುಕಿದರೂ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜಾನಪದ ಕಲೆ, ಕಲಾವಿದರು ಯುವಕರಿಗೆ ಪ್ರೇರಣಯಾಗಲಿ ಎಂದರು.
ಕಾರ್ಯಕ್ರಮದಲ್ಲಿವಿಭೂತಿಕೆರೆಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಬಿ.ಕೆ.ಗೋಮತಿ, ಕ್ಯೂರೇಟರ್ ಡಾ. ಯು.ಎಂ. ರವಿ ಸ್ವಾಗತ ಕೋರಿ ಸಂವಾದಕಾರ್ಯಕ್ರಮವನ್ನು ನಡೆಸಿಕೊಟ್ಟರು. ರಂಗ ಸಹಾಯಕರಾದ ಪ್ರದೀಪ್.ಎಸ್ ನಿರೂಪಿಸಿದರು. ರಾಮನಗರ ದನ್ಯೂಎಕ್ಸ್‍ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯಉಪನ್ಯಾಸಕರು, ವಿದ್ಯಾರ್ಥಿಗಳು, ಕಲಾಸಕ್ತರು, ಕಲಾವಿದರು ಲೋಕದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಡಿಕ್ಕಿ ಸಿದ್ದಯ್ಯ ಅವರ ಪರಿಚಯ : ಕರ್ನಾಟಕದ ಪ್ರಮುಖ ವೃತ್ತಿಗಾಯಕ ಪರಂಪರೆಗಳಲ್ಲಿ ಒಂದಾದ ನಿಲಗಾರರು ಮಂಟೇಸ್ವಾಮಿ, ಮಾದೇಶ್ವರನಗುಡ್ಡರು. ನಾಡತಂಬೂರಿಯನ್ನು ಮೀಟುತ್ತಾಢಕ್ಕೆ, ಗಗ್ಗರಗಳನ್ನು ನುಡಿಸುತ್ತಾ ನೀಲಗಾರರುತಮ್ಮ ಇಷ್ಟ ದೈವವಾದ ಮಂಟೇಸ್ವಾಮಿಯನ್ನು ಕುರಿತು ಹಾಡಲಾರಂಭಿಸಿದರೆ ಎಂತಹ ಅರಸಿಕರೂ ತಲೆದೂಗುತ್ತಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕು, ಬೊಮ್ಮಲಾಪುರ ಅಂಚೆ, ಅಂಕÀಹಳ್ಳಿಯ ಶ್ರೀ ಸಿದ್ಧಯ್ಯ ಹುಟ್ಟುತ್ತಲೇ ಅಂಧರು. ತಂದೆ ಪುಟ್ಟಲಿಂಗಯ್ಯ, ತಾಯಿ ಸಿದ್ಧಮ್ಮ ಪುತ್ರರಾಗಿ ಜೂನ್ 1949ರಲ್ಲಿ ಜನಿಸಿದರು. ಊರಿನ ಸುತ್ತಮುತ್ತ ನಡೆಯುವ ಹಬ್ಬ ಹರಿದಿನಗಳು, ಜಾತ್ರೆ, ಸಭೆ-ಸಮಾರಂಭಗಳು, ಶಿವರಾತ್ರಿ ಜಾಗರಣೆ, ತಿಥಿ ಕಾರ್ಯಗಳಲ್ಲಿ ಡಿಕ್ಕಿ ಸಿದ್ಧಯ್ಯನವರ ಗಾಯನ ಇದ್ದೇಇರುತ್ತದೆ.
ಕಣ್ಣು ಇಲ್ಲದಿದ್ದರೂ ಕೇಳುಗರಿಗೆ ಕಿವಿಯಾಗಿಕಲೆ ಇವರ ಬದುಕನ್ನು ಅರಳಿಸಿದೆ. ಪ್ರತಿಭೆಗೂ, ಸಾಧನೆಗೂಅಂಗವೈಕಲ್ಯಅಡ್ಡಿಯಾಗದುಎಂಬುದನ್ನು ಸಾಧಿಸಿ ತೋರಿದಕಲಾವಿದ. ಕೈಯಲ್ಲಿಡಿಕ್ಕಿ(ದಂಬಡಿ)ಹಿಡಿದು ಬಸವರಾಜು, ನಿಂಗರಾಜು, ರಾಚಪ್ಪ, ಅಂಕಪ್ಪಅವರೊಂದಿಗೆ ಹಾಡಲು ಕುಳಿತರೆ ಬೆಳಕರಿಯುತ್ತದೆ. ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಹಾಡಲು ಆರಂಬಿಸಿದ ಇವರುಕೆಬ್ಬಾಪುರದ ನಿಂಗಪ್ಪ, ರಾಚಪ್ಪರ ಬಳಿ ಹಾಡುಗಳನ್ನು ಕಲಿತುಹಾಡುವುದನ್ನು ಕರಗತ ಮಾಡಿಕೊಂಡರು. ತಂಬೂರಿ ಶೈಲಿಯಲ್ಲಿ ಸಿದ್ದಪ್ಪಾಜಿ, ಮಂಟೇಸ್ವಾಮಿ, ಧರೆಗೆದೊಡ್ಡೋರು, ಮಾದೇಶ್ವರನಕಥನ ಸಾಲುಗಳು, ನಂಜುಂಡೇಶ್ವರ, ಮೈದಾಳರಾಮ ಕುರಿತಕಥನ ಕಾವ್ಯಗಳನ್ನು, ತತ್ವಪದ, ಬಿಡಿಗೀತೆಗಳನ್ನು ಹಾಡುತ್ತಾರೆ. ಇದೀಗ ಅವರಿಗೆ ಕರ್ನಾಟಕ ಜಾನಪದ ಪರಿಷತ್ತು ಜಾನಪದ ಲೋಕಕ್ಕೆ ಆಹ್ವಾನಿಸಿ ನಾಡೋಜಎಚ್.ಎಲ್.ನಾಗೇಗೌಡರ ನೆನಪಿನಾರ್ಥ ನೀಡುವಲೋಕಸಿರಿ ತಿಂಗಳ ಅತಿಥಿ 70ನೇ ಗೌರವಪ್ರಶಸ್ತಿಯನ್ನು ನೀಡಿಗೌರವಿಸಿತು.

Leave a Reply

Your email address will not be published. Required fields are marked *