ಶಿವರಾಜ್ ಕುಮಾರ್ ಅವರು ಬೆನ್ನು ನೋವಿನ ಕಾರಣದಿಂದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ : ಮಧು ಬಂಗಾರಪ್ಪ
ಕನಕಪುರ (hairamanagara.in) : ಮೇಕೆದಾಟು ಪಾದಯಾತ್ರೆಯಲ್ಲಿ ಖ್ಯಾತ ಚಿತ್ರ ನಟ ಶಿವರಾಜ್ ಕುಮಾರ್ ಅವರು ಬೆನ್ನು ನೋವಿನ ಕಾರಣದಿಂದ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಕಾಂಗ್ರೆಸ್ ಮುಖಂಡ ಮಧುಬಂಗಾರಪ್ಪ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಟ ಶಿವರಾಜ್ ಕುಮಾರ್ ಅವರು ಯಾವುದೇ ಪಕ್ಷಕ್ಕೆ ಸೀಮಿತರಲ್ಲ, ಅವರು ಪಾದಯಾತ್ರೆಗೆ ಬರಲು ಹೊರಟ್ಟಿದ್ದರು. ಆದರೆ ದಾರಿ ಮಧ್ಯೆ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದ್ದರಿಂದ ಹಿಂದಿರುಗಿದರು. ಮೇಕೆದಾಟು ಯೋಜನೆಯನ್ನು ಒತ್ತಾಯಿಸಿ ನಡೆಸುತ್ತಿರುವ ಪಾದಯಾತ್ರೆ ಪಕ್ಷಾತೀತ ಹೋರಾಟವಾಗಿದೆ. ಶಿವರಾಜ್ ಕುಮಾರ್ ಅವರಿಗೆ ಪಾದಯಾತ್ರೆಯಲ್ಲಿ ಭಾಗವಹಿಸಬಾರದು ಎಂಬ ಯಾವುದೇ ಒತ್ತಡ ಇರಲಿಲ್ಲ ಎಂದು ಮಾಹಿತಿ ನೀಡಿದರು.