ಮೂರು ದಿನಗಳ ಕಾಲ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ
ರಾಮನಗರ (hairamanagara.in) : ರಾಮನಗರ ಮತ್ತು ಚನ್ನಪಟ್ಟಣ ನಗರಗಳಿಗೆ ತೊರೆಕಾಡನಹಳ್ಳಿಯಿಂದ ಕಾವೇರಿ ನೀರು ಕುಡಿಯುವುದಕ್ಕಾಗಿ ಸರಬರಾಜಾಗುತ್ತಿದೆ. ವಿರೂಪಾಕ್ಷಿಪುರ ಹತ್ತಿರ ಇರುವ ಏರುಕೊಳವೆ ಮಾರ್ಗದಲ್ಲಿ ಅಧಿಕವಾಗಿ ನೀರಿನ ಸೋರಿಕೆಯಾಗುತ್ತಿದ್ದು, ಇದನ್ನು ತಡೆಗಟ್ಟುವ ಸಲುವಾಗಿ ದುರಸ್ಥಿ ಮಾಡಲು ತುರ್ತು ಕಾಮಗಾರಿಯನ್ನು ಜ. 12 ರಂದು ಕೈಗೆತ್ತಿಕೊಳ್ಳಲಾಗಿದೆ. ರಾಮನಗರ ನಗರಕ್ಕೆ ಜನವರಿ 12 ರಿಂದ 15 ರವರೆಗೆ ಮೂರು ದಿನಗಳು ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ನಗರ ಸಭೆ ಮತ್ತು ಜಲಮಂಡಳಿರವರೊಂದಿಗೆ ಸಹಕರಿಸಬೇಕೆಂದು ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.