ವೃದ್ಧೆಯರೇ ಹೊರಗೆ ಬಂದಾಗ ಜೋಕೆ : ನಯವಂಚಕರಿದ್ದಾರೆ
ರಾಮನಗರ (hairamanagara.in) : ಸರ್ಕಾರಿ ಸವಲತ್ತು ಕೊಡಿಸುವುದಾಗಿ ವೃದ್ಧೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದು ಯುವಕನೋರ್ವ ಪರಾರಿಯಾದ ಘಟನೆ ಚನ್ನಪಟ್ಟಣ ನಗರದ ಜೆ.ಸಿ. ರಸ್ತೆಯಲ್ಲಿರುವ ಎಫ್.ಎಂ ಕಣ್ಣಿನ ಆಸ್ಪತ್ರೆಯ ಬಳಿ ನಡೆದಿದೆ. ದೇವರಹೊಸಹಳ್ಳಿ ಗ್ರಾಮದ ಕೆಂಪಮ್ಮ ಎಂಬುವವರು ಇಂಗು ಗುಂಡಿ ಮಾಡಿಸಿದ್ದು ಅದರ ಹಣವನ್ನು ತಗೆದುಕೊಳ್ಳಲು ಬ್ಯಾಂಕ್ಗೆ ಬಂದಿದ್ದರು.
ಈ ವೇಳೆ ಅಪರಿಚಿತನೋರ್ವ ವೃದ್ಧೆಯ ಬಳಿ ಬಂದು ಅವರ ಮನೆಯವರ ಹೆಸರನ್ನು ಹೇಳಿ ಅಜ್ಜಿಯನ್ನು ನಂಬಿಸಿ ನಂತರ ಮಾತಿಗೆ ಎಳೆದಿದ್ದಾನೆ. ಈ ವೇಳೆ ನಂಬಿಸಿ ನಂತರ ಮಾತಿಗೆ ಎಳೆದಿದ್ದಾನೆ. ಈ ವೇಳೆ ನಿಮ್ಮಪತಿ ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದು, 25 ವರ್ಷಗಳ ಹಿಂದೆ ಮೃತಪಟ್ಟಿರುವ ಹಣವನ್ನು ಕೊಡಿಸುತ್ತೇನೆ ಎಂದು ನಂಬಿಸಿದ್ದಾನೆ. ಹಣ ಪಡೆಯಲು ಶೂರಟಿ ಬೇಕು ಎಂದು ಹೇಳಿ ಕುತ್ತಿಗೆಯಲ್ಲಿದ್ದ 25 ಗ್ರಾಂ ತೂಕದ ಸರವನ್ನು ಬಿಚ್ಚಿಸಿಕೊಂಡು ವೃದ್ಧೆಯ ಕೈನಲ್ಲಿದ್ದ ಪಾಸ್ ಬುಕ್ ಪಡೆದು ಪರಾರಿಯಾಗಿದ್ದಾನೆ. ಜೆರಾಕ್ಸ್ ಮಾಡಿಸಲು ಹೋದ ವ್ಯಕ್ತಿ ಬಾರದ್ದನ್ನು ಕಂಡ ಅಜ್ಜಿಗೆ ತಾನು ಮೋಸ ಹೋಗಿದ್ದು ತಿಳಿದಿದೆ. ವಂಚಿಸಿ ಸರ ಪಡೆದು ಪರಾರಿಯಾದ ಖದೀಮನ ಚಿತ್ರಣ ಚನ್ನಪಟ್ಟಣ ಟೌನ್ ಹೂವಿನ ಮಾರ್ಕೆಟ್ ಬಳಿ ಇರುವ “ಎಫ್.ಎಂ ಕಣ್ಣಿನ ಆಸ್ಪತ್ರೆಯ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ವೃದ್ಧೆ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ವರದಿ : ಶೃತಿ ಹರೀಶ್ ಗೌಡ
ಮೊ: 9632008128