ಕರಿಯಪ್ಪನದೊಡ್ಡಿಯಲ್ಲಿ ಧರೆಗಿಳಿದ ವೈಕುಂಠ
ಚನ್ನಪಟ್ಟಣ (hairamangara.in) : ತಾಲ್ಲೂಕಿನ ಕರಿಯಪ್ಪನದೊಡ್ಡಿಯಲ್ಲಿ ವೈಕುಂಠವೇ ಧರೆಗೆ ಇಳಿದಿತ್ತು. ಚಿಕ್ಕ ತಿರುಪತಿ ಎಂದು ಪ್ರಸಿದ್ಧಿಯನ್ನು ಪಡೆದಿರುವ ವೆಂಕಟೇಶ್ವರನಿಗೆ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ಪೂಜೆಯನ್ನು ಸಲ್ಲಿಸಲಾಯಿತು. ಹೊರಗಿನ ಭಕ್ತರಿಗೆ ನಿರ್ಬಂಧವನ್ನು ಹೇರಿದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಗ್ರಾಮಸ್ಥರು ಮಾತ್ರ ಹೋಗಿ ಕೊರೊನಾ ನಿಯಮ ಅನುಸರಿಸಿ ಮಾಸ್ಕ್ ಧರಿಸಿ ದೇವರ ದರ್ಶನ ಪಡೆದು ಪುನೀತರಾದರು. ದೇವಸ್ಥಾನವನ್ನು ಬಗೆಬಗೆಯ ಹೂಗಳಿಂದ ಶೃಂಗಾರ ಮಾಡಲಾಗಿತ್ತು.

ಶ್ರೀಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ವಿಷೇಶ ಅಲಂಕಾರವನ್ನು ಮಾಡಲಾಗಿತ್ತು. ಈ ವರ್ಷ ಸರಳವಾಗಿ ವೈಕುಂಠ ಏಕಾದಶಿ ಆಚರಿಸಲಾಯಿತು. ಪ್ರತಿವರ್ಷವೂ ತಿಮ್ಮಪ್ಪನ ದರ್ಶನವನ್ನು ಲಕ್ಷಾಂತರ ಮಂದಿ ಮಾಡುತ್ತಿದ್ದರು. ಪರ ಊರುಗಳಿಂದ, ಜಿಲ್ಲೆಗಳಿಂದ ಬಂದು ದರುಶನ ಪಡೆದು ಪುನೀತರಾಗುತ್ತಿದ್ದರು.ಆದರೆ ಈ ಬಾರಿ ಎಲ್ಲರಿಗೂ ನಿರಾಸೆಯಾಗಿದೆ.
ವರದಿ : ಶೃತಿ ಹರೀಶ್ ಗೌಡ
ಮೊ: 9632008128