ಮೇಕೆದಾಟು ಪಾದಯಾತ್ರೆ ಮುಂದುವರಿಯಲಿದೆ : ಡಿ.ಕೆ. ಸುರೇಶ್
ಕನಕಪುರ (hairamanagara.in) : ಈಗಾಗಲೇ ಘೋಷಣೆ ಮಾಡಿದಂತೆ ಗುರುವಾರ 5ನೇ ದಿನ ನಮ್ಮ ಪಾದಯಾತ್ರೆ ಮುಂದುವರಿಯಲಿದೆ. ನಮ್ಮ ಮಾಹಿತಿಯನ್ನು ವಕೀಲರ ಮೂಲಕ ನ್ಯಾಯಾಲಯಕ್ಕೆ ನೀಡುತ್ತೇವೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಡಿವೈಎಸ್ಪಿಯವರು, ಕೆಲವು ಅಧಿಕಾರಿಗಳು ರಾತ್ರಿ 12 ಗಂಟೆಗೆ ಬಂದು ಪಾದಯಾತ್ರೆ ಮುಂದುವರಿಸಬಾರದು ಎಂದು ನೊಟೀಸ್ ನೀಡಿ ಹೋಗಿದ್ದಾರೆ. ಶಿಷ್ಠಾಚಾರ ಪ್ರಕಾರ 48 ಗಂಟೆಯೊಳಗೆ ಪಾಲಿಸಬೇಕಾಗುತ್ತದೆ. ಜಿಲ್ಲಾಧಿಕಾರಿಗಳು ಸಹಿ ಮಾಡಿ ಒಂದು ನೊಟೀಸ್ ನೀಡಿದ್ದಾರೆ, ನಾವು ಆ ನೊಟೀಸ್ ನ್ನು ಮುಟ್ಟಿಲ್ಲ ಎಂದು ತಿಳಿಸಿದರು.