ಐದು ಎಕರೆ ಮೇಲ್ಪಟ್ಟ ರೈತರನ್ನು ಪರಿಗಣಿಸುವಂತೆ ಕೃಷಿ ಸಚಿವರಿಗೆ ಮನವಿ ಮಾಡಲಾಗುವುದು : ಎ. ಮಂಜುನಾಥ್

ಮಾಗಡಿ (hairamanagara.in) : ಪಟ್ಟಣದ ಎನ್‍ಇಎಸ್ ಬಡಾವಣೆಯ ಗುಡೇಮಾರನಹಳ್ಳಿ ರಸ್ತೆಯ ಸರ್ಕಾರಿ ಅಕ್ಕಿ ಗೋದಾಮಿಗೆ ಶಾಸಕ ಎ.ಮಂಜುನಾಥ್ ಭೇಟಿ ನೀಡಿ ರಾಗಿ ಖರೀದಿಯಲ್ಲಿ ಆಗುತ್ತಿರುವ ಸಮಸ್ಯೆ ಬಗ್ಗೆ ರೈತರಿಂದ ಮತ್ತು ಅಧಿಕಾರಿಗಳಿಂ ಮಾಹಿತಿ ಪಡೆದರು.
ಶಾಸಕ ಎ.ಮಂಜುನಾಥ್ ಸುದ್ದಿಗಾರರೊಂದಿಗೆ ಮಾತನಾಡಿ, ಅತೀವೃಷ್ಠಿ ಮಳೆಯಿಂದ ತಾಲೂಕಿನಲ್ಲಿ ರಾಗಿ ಬೆಳೆ ಸಾಕಷ್ಟು ಹಾನಿಯಾಗಿದ್ದು, ಅಲ್ಪ ಸ್ವಲ್ಪ ಉಳಿದ ರಾಗಿಯನ್ನು ಸರ್ಕಾರದ ಬೆಂಬಲದ ಬೆಲೆಯಲ್ಲಿ ಮಾರಾಟ ಮಾಡಲು ಸರ್ಕಾರಕ್ಕೆ ಎನ್‍ರೋಲ್ ಮಾಡಿಕೊಳ್ಳಲು ಸರ್ಕಾರ ತಿಳಿಸಿದ್ದು ರೈತರು ಪಹಣಿ ಅವರ ಹೆಸರನ್ನು ನಮೂದಿಸಿದ ಮೇಲೆ ಟೋಕನ್ ನೀಡಲಾಗುತ್ತದೆ, ರಾಗಿ ಖರೀದಿ ವೇಳೆ ಈ ರೈತರಿಗೆ ಅವಕಾಶ ಸಿಗುತ್ತದೆ ಈ ಹಿನ್ನಲೆಯಲ್ಲಿ ನೊಂದಾಣಿ ಮಾಡಿಕೊಳ್ಳಲು ರೈತರು ಭಾಗವಹಿಸುತ್ತಿದ್ದು ಇಲ್ಲಿನ ವ್ಯವಸ್ಥೆಯನ್ನು ನೋಡಲು ಆಗಮಿಸಿರುವುದಾಗಿ ತಿಳಿಸಿದರು.
5 ಎಕರೆ ಮೇಲ್ಪಟ್ಟ ದೊಡ್ಡ ರೈತರೆಂದು ನಮುದಾಗಿ ಅವರು ರಾಗಿ ಹಾಕಲು ಅವಕಾಶ ಸಿಗುತ್ತಿಲ್ಲ ಇದು ತಾಲೂಕಿನ ಸಮಸ್ಯೆಯಲ್ಲ, ರಾಜ್ಯದ ಸಮಸ್ಯೆಯಾಗಿದ್ದು ಸರ್ಕಾರ 5 ಎಕರೆ ಒಳಗಿರುವ ರೈತರಿಂದ ಮಾತ್ರ ರಾಗಿ ಖರೀದಿಸಲು ಆಗದ ರೀತಿ ತಂತ್ರಜ್ಞಾನ ಸಿದ್ದಪಡಿಸಿರುವುದರಿಂದ 5 ಎಕರೆ 1 ಗುಂಟೆ ಜಾಗವಿದ್ದರೂ ರಾಗಿ ಹಾಕಲು ಅವಕಾಶವಿಲ್ಲ ಈ ಸಮಸ್ಯೆ ಬಗ್ಗೆ ಕಮಿಷನರ್ ಮತ್ತು ಕೃಷಿ ಸಚಿವರ ಜೊತೆ ಚರ್ಚೆ ನಡೆಸಿ 5 ಎಕರೆ ಮೇಲ್ಪಟ್ಟ ರೈತರನ್ನು ಪರಿಗಣಿಸುವಂತೆ ಮನವಿ ಮಾಡುವುದಾಗಿ ತಾಂತ್ರಿಕ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಾಗುತ್ತದೆಂದು ಶಾಶಕರು ಭರವಸೆ ನೀಡಿದರು.
ತಾಲೂಕಿನಾದ್ಯಂತರಾಗಿ ರೈತರು ರಾಗಿ ಮಾರಾಟಮಾಡಲು ಸುಮಾರು 6 ಸಾವಿರ ಮಂದಿ ನೋಂದಣಿಮಾಡಿಕೊಂಡು ಈ ಗಾಗಲೇ 3 ಸಾವಿರ ಮಂದಿಯ ಅರ್ಜಿಗಳನ್ನು ನೊಂದಾಯಿಸಿಕೊಳ್ಳಲಾಗಿದೆ. ಕರೊನಾ ಮುಜಾಗೃತಕ್ರಮವಾಗಿ ಯಾವುದೆ ರೈತರನ್ನು ಸರತಿ ಸಾಲಿನಲ್ಲಿ ನಿಲ್ಲಿಸದೆ ಬಂದ ತಕ್ಷಣ ನೊಂದಣಿಮಾಡಿ ಕಳುಹಿಸಲಾಗುತ್ತಿದೆ, ಜ.31ರ ಒಳಗೆ ರೈತರು ರಾಗಿ ಮಾರಾಟ ಮಾಡಲು ನೊಂದಾಯಿಸಿಕೊಳಲು ಅವಕಾಶ ಕಲ್ಪಿಸಲಾಗಿದೆ ಎಂದು ರಾಗಿ ಖರೀದಿ ಮ್ಯಾನೇಜರ್ ಬಿ.ವಿ. ಜಯರಾಮಯ್ಯ ತಿಳಿಸಿದರು.
ಪುರಸಭೆ ಅಧ್ಯಕ್ಷೆ ವಿಜಯ ರೂಪೇಶ್, ಉಪಾಧ್ಯಕ್ಷ ರೆಹಮತ್, ಸದಸ್ಯರಾದ ಎಂ.ಎನ್.ಮಂಜುನಾಥ್, ಅಶ್ವತ್ಥ, ಅನಿಲ್ ಕುಮಾರು, ಮ್ಯಾನೇಜರ್ ಬಿ.ವಿ.ಜಯರಾಮಯ್ಯ, ಪ್ರಶಾಂತ್ ಇತರರು ಇದ್ದರು.

Leave a Reply

Your email address will not be published. Required fields are marked *