ಎ. ಮಂಜು ಚಾರಿಟಬಲ್ ಟ್ರಸ್ಟ್ ಮೂಲಕ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ 45 ಸಾವಿರ ಮಕ್ಕಳ ಕಣ್ಣಿನ ತಪಾಸಣೆ ನಡೆಸಲಾಗಿದೆ : ಎ. ಮಂಜುನಾಥ್

ರಾಮನಗರ (hairamanagara.in) : ಕಣ್ಣು ಮಾನವನ ದೇಹದ ಪ್ರಮುಖ ಅಂಗಗಳಲ್ಲಿ ಒಂದು, ಅದರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಶಾಸಕ ಎ. ಮಂಜುನಾಥ್ ಹೇಳಿದರು.

ಬಿಡದಿ ಪಟ್ಟಣದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಎ.ಮಂಜು ಚಾರಿಟಬಲ್ ಟ್ರಸ್ಟ್ , ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರು, ಮತ್ತು ಬಿಡದಿ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಫೌಂಡೇಷನ್ ಟ್ರಸ್ಟ್ ವತಿಯಿಂದ, ಟೈಟಾನ್ ಕಂಪನಿ ಪ್ರಾಯೋಜಕತ್ವದಲ್ಲಿ ನನ್ನ ಕಣ್ಣು ಯೋಜನೆಯಡಿ ಸರ್ಕಾರಿ ಶಾಲೆಯ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಕನ್ನಡಕ ವಿತರಣೆ ನೆರವೇರಿಸಿ ಮಾತನಾಡಿದ ಅವರು,

ರಾಜ್ಯದಲ್ಲಿ ಯೇ ಪ್ರಥಮ ಎನ್ನಬಹುದಾದ ಈ ಕೆಲಸವನ್ನು ಮಾಗಡಿ ವಿಧಾನಸಭಾ ಕ್ಷೇತ್ರದ ಎಲ್ಲಾ ಶಾಲೆಗಳಲ್ಲಿ ಈಗಾಗಲೇ ವಿದ್ಯಾರ್ಥಿಗಳ ನೇತ್ರ ತಪಾಸಣೆ ಮಾಡುವ ಜೊತೆಗೆ ಮಕ್ಕಳಿಗೆ ಕನ್ನಡಕ, ಆಪರೇಷನ್ ಸಹ ಮಾಡಿಸಲಾಗಿದೆ. ಸುಮಾರು 45,000 ಮಕ್ಕಳ ಕಣ್ಣು ತಪಾಸಣೆ ನಡೆಸಲಾಗಿದ್ದು, ಎಲ್ಲ ಹಣವನ್ನು ನನ್ನ ಟ್ರಸ್ಟ್ ಭರಿಸುತ್ತದೆ ಎಂದು ಹೇಳಿದರು.
ಎ.ಮಂಜು ಚಾರಿಟಬಲ್ ಟ್ರಸ್ಟ್ ,ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಬಿಡದಿ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಫೌಂಡೇಷನ್ ಟ್ರಸ್ಟ್, ಶಿಕ್ಷಣ ಇಲಾಖೆ ಸಹಕಾರದಿಂದ ಈ ಕಾರ್ಯ ಮಾಡಲಾಗಿದ್ದು ಇವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದರು.

ಶಾಸಕರಾಗಿ ಕೇವಲ ರಸ್ತೆ, ಚರಂಡಿ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸಗಳನ್ನು ಮಾಡಿದರೆ ಸಾಲದು, ಆರೋಗ್ಯ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಬೇಕೆಂದು ಟ್ರಸ್ಟ್ ಸಹಯೋಗದಲ್ಲಿ ಈ ಕೆಲಸ ಮಾಡಿದ್ದೇನೆ. ನನ್ನ ಕ್ಷೇತ್ರದಲ್ಲಿ ತಾಯಂದಿರು, ಸಹೋದರಿಯರು ಸ್ತನ ಕ್ಯಾನ್ಸರ್ ಮತ್ತು ಗರ್ಭ ಕೋಶದ ಕ್ಯಾನ್ಸರ್ ರೋಗದಿಂದ ಬಳಲುವುದನ್ನು ತಪ್ಪಿಸಲು ಮಹಿಳೆಯರಿಗೆ ಕರ್ನಾಟಕ ಕ್ಯಾನ್ಸರ್‌ ಸಂಸ್ಥೆ ಆಶ್ರಯದಲ್ಲಿ ಜ-26 ರಿಂದ ಕ್ಯಾನ್ಸರ್ ತಪಾಸಣಾ ಶಿಬಿರ ನಡೆಸಲಾಗುವುದು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಜಿ.ಕುಮಾರಸ್ವಾಮಿ ಮಾತನಾಡಿದರು.
ಪುರಸಭಾ ಸದಸ್ಯರಾದ ಹೆಚ್.ಎಸ್.ಲೋಹಿತ್ ಕುಮಾರ್, ರಾಕೇಶ್, ಹರಿ ಪ್ರಸಾದ್, ಎಲ್ಲಮ್ಮ, ಬಿಡದಿ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸರ್ವೇಶ್, ಕಾರ್ಯದರ್ಶಿ ಮಂಜುನಾಥ್, ನಿರ್ದೇಶಕರಾದ ವರುಣ್, ಗವಿರಾಜು, ಸಂದೀಪ್, ರಮೇಶ್ ಬಿ., ಮಾಜಿ ಪುರಸಭಾ ಸದಸ್ಯ ಟಿ.ಕುಮಾರ್, ವೈದ್ಯರಾದ ಡಾ. ಭರತ್ ಕೆಂಪಣ್ಣ, ಮಾಜಿ ಗ್ರಾಮ ಪಂಚಾಯತಿ ಸದಸ್ಯ ಯೋಗಾನಂದ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಸೂರ್ಯನಾರಾಯಣ್, ಸಿ.ಆರ್.ಪಿ.ಗಳಾದ ಸಿದ್ದರಾಜು, ರಮೇಶ್, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸುಚಿತ್ರಾ ಕುಂಬಾರ್, ಶಿಕ್ಷಣ ಸಂಯೋಜಕರಾದ ಎಸ್.ದುಂಡುಮಾರಯ್ಯ, ನಾಗರತ್ನ, ಅನ್ನಪೂರ್ಣ, ಪವಿತ್ರದೇವಿ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *