ಮಾಗಡಿ : ತಾಲ್ಲೂಕಿನಾದ್ಯಂತ ಸಂಕ್ರಾತಿ ಸಂಭ್ರಮ

ಮಾಗಡಿ (hairamanagara.in) : ಸಂಕ್ರಾಂತಿ ಹಬ್ಬವನ್ನು ತಾಲೂಕಿನಾಧ್ಯಂತ ಬಹಳ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಪಟ್ಟಣ ಕಲ್ಯಾಗೇಟ್ ವರಸಿದ್ದಿ ವಿನಾಯಕ, ಹೊಸಪೇಟೆ ರಸ್ತೆಯಲ್ಲಿರುವ ಶನೇಶ್ವರಸ್ವಾಮಿ, ಮಾದಿಗೊಂಡನಹಳ್ಳಿ ರಂಗನಾಥಸ್ವಾಮಿ, ತಿರುಮಲೆ ರಸ್ತೆಯ ಆಂಜನೇಯ ದೇವಾಲಯದಲ್ಲಿ ವಿಶೇಷ ಅಲಂಕಾರವನ್ನು ಏರ್ಪಡಿಸಲಾಗಿತ್ತು.
ಪಟ್ಟಣದ ಎಲ್ಲಾ ದೇವಸ್ಥಾನಗಳಲ್ಲಿಯೂ ಸಹ ವಿಶೇಷ ಪೂಜೆ, ಅಭಿಷೇಕ, ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ಭಕ್ತಾಧಿಗಳು ಎಲ್ಲಾ ದೇವಾಸ್ಥಾನಗಳಿಗೂ ತೆರಳಿ ದೇವರ ದರ್ಶನ ಪಡೆದರು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ರೈತರು ತಾವು ಸಾಕಿರುವ ಹಸುಗಳನ್ನು ತೊಳೆದು, ಸಿಂಗರಿಸಿ, ಗ್ರಾಮದ ಹೊರಭಾಗದಲ್ಲಿ ಬೆಂಕಿಹಚ್ಚಿ ಕಿಚಾಯಿಸಿದರು.
ವೀಕೆಂಡ್ ಕಫ್ಯೂ ಹಿನ್ನಲೆಯಲ್ಲಿ ತಾಲೂಕಿನ ಪ್ರಸಿದ್ದ ಶ್ರೀರಂಗನಾಥ ಸ್ವಾಮಿ, ಸಾವನದುರ್ಗ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯಗಳಲ್ಲಿ ಭಕ್ತರು ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಿರಲಿಲ್ಲ. ದೇವಾಲಯ ಒಳಗೆ ಪೂಜಾ ಕೈಂಕರ್ಯಗಳು ನಡೆದವು.
ಪಟ್ಟಣದ ಹೊಸಪೇಟೆ ರಸ್ತೆಯ ಶನೇಶ್ವರ ದೇವರಿಗೆ ಅಯ್ಯಪ್ಪಸ್ವಾಮಿ ಅಲಂಕಾರ ಭಕ್ತರಿಗೆ ಸಂತೋಷ ಉಂಟುಮಾಡಿತ್ತು ಈ ವೇಳೆ ಅಖಿಲ ಭಾರತ ವೀರಶೈವ ಮಹಾಸಭಾ ಸದಸ್ಯ ಡಾ.ಕೆ.ಪಿ.ಮಹದೇವ ಶಾಸ್ತ್ರಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ. ಹೊಸವರ್ಷದ ಮೊದಲನೆ ಹಬ್ಬ ಸಂಕ್ರಾತಿ ಹಬ್ಬ. ಸೂರ್ಯ ತನ್ನ ಧಿಕ್ಕು ಬದಲಾಯಿಸಿದಾಗ ದಕ್ಷಿಣಾ ಯಣ ಮುಗಿದು ಉತ್ತರಾಯಾಣ ಪ್ರಾರಂಭವಾಗುತ್ತದೆ. ಹಿಂದುಗಳಿಗೆ ಪವಿತ್ರವಾದ ಹಬ್ಬವವಾಗಿದ್ದು ರೈತರು ಇಡೀ ವರ್ಷ ಬೆವರು ಸುರಿಸಿ ಬೆಳೆದ ರಾಗಿ, ಭತ್ತವನ್ನು ಒಕ್ಕಣೆ ಮಾಡಿ ಮನೆಗೆ ತುಂಬಿಕೊಳ್ಳುವ ದಿನವಾಗಿದ್ದೆ, ನಾಡಿನ ಅನ್ನದಾತರಿಗೆ ಈ ವರ್ಷ ಸುಖ, ಶಾಂತಿ, ನೆಮ್ಮದಿ. ಸಮೃದ್ದಿ ತರಲಿ ಎಂದು ಭಗವಂತನದಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.
ಭಕ್ತೆ ವಿನುತಾ ಮಾತನಾಡಿ, ಹೊಸ ವರ್ಷದಲ್ಲಿ ಬರುವ ಹೊಸ ಹಬ್ಬವಾಗಿರುವ ಸಂಕ್ರಾಂತಿ ಹಬ್ಬವನ್ನು ನಾವೆಲ್ಲರೂ ಸಡಗರ, ಸಂಭ್ರಮದಿಂದ ಆಚರಿಸುತ್ತೇವೆ. ಈ ಹಬ್ಬದಂದು ನಾವು ವಿಶೇಷವಾಗಿ ಹುತ್ತಕ್ಕೆ ಪೂಜೆ ಸಲ್ಲಿಸಲು ಮನೆಯಿಂದ ಅವರೆಕಾಳು ಸಾರು, ಕಿಚಿಡಿ ಅನ್ನ, ತಂಬಿಟ್ಟು ತಯಾರಿಸಿಕೊಂಡು ಹೋಗಿ ಹುತ್ತಕ್ಕೆ ಹಾಲು ಎರೆದು ಪೂಜೆ ಸಲ್ಲಿಸಿ ಅಲ್ಲಿಯೇ ಊಟ ಮಾಡಿಕೊಂಡು ಬರುತ್ತೇವೆ. ಈ ಭಾರಿಯ ಸಂಕ್ರಾಂತಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಪ್ರತಿವರ್ಷಕ್ಕಿಂತ ಈ ವರ್ಷ ಹಬ್ಬದ ಸಾಮಾಗ್ರಿಗಳ ಬೆಲೆ ಗಗನಕ್ಕೆ ಏರಿದರು ಹಬ್ಬದ ವೈಭವಕ್ಕೆ ಒತ್ತು ನೀಡಲು ಅದ್ದೂರಿ ಸಂಕ್ರಾಂತಿ ಹಬ್ಬ ಆಚರಿಸುತ್ತಿರುವುದು ಖುಷಿತಂದಿದೆ.
ಪುರಸಭಾಧ್ಯಕ್ಷೆ ವಿಜಯ ರೂಪೇಶ್, ಸದಸ್ಯರಾದ ಶಿವರುದ್ರಮ್ಮ ವಿಜಯ್ ಕುಮಾರು, ಎಂ.ಆರ್.ರೇಖಾ ನವೀನ್, ತಾ. ವಿಶ್ವಕರ್ಮ ಸಮುದಾಯ ಅಧ್ಯಕ್ಷ ಎಂ.ಜಿ. ಮಂಜುನಾಥ್, ಅರ್ಚಕ ಲಕ್ಷ್ಮಿನಾರಾಯಣ್, ಟಿ.ಕೆ.ರಾಮು, ಮಧು ಇತರರು ಇದ್ದರು.

Leave a Reply

Your email address will not be published. Required fields are marked *