ರಾಮನಗರ ಜಿಲ್ಲೆ : 911ಕ್ಕೆ ಏರಿದ ಸಕ್ರಿಯ ಕೋವಿಡ್ ಪ್ರಕರಣಗಳು, ಭಾನುವಾರ 148 ಮಂದಿಗೆ ಕೋವಿಡ್

ರಾಮನಗರ: (hairamanagara.in) ರಾಮನಗರ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 148 ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆಯು 911 ಕ್ಕೆ ಏರಿದೆ. ಚನ್ನಪಟ್ಟಣ 28, ಕನಕಪುರ 62, ಮಾಗಡಿಯಲ್ಲಿ 13 ಹಾಗೂ ರಾಮನಗರದಲ್ಲಿ 45 ಪ್ರಕರಣಗಳು ದಾಖಲಾಗಿದ್ದು ಒಟ್ಟು 148 ಕರೋನ ಸೋಂಕು ಪ್ರಕರಣ ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 911 ಇದ್ದು, ಇಂದು 19 ಜನ ಗುಣಮುಖರಾಗಿರುತ್ತಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 25692 ಜನರಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿದ್ದು, 24414 ಜನರು ಗುಣಮುಖರಾಗಿರುತ್ತಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *