ಬಾಳಲಿಂಗೇಗೌಡನದೊಡ್ಡಿ : ಸರ್ಕಾರಿ ಶಾಲೆಯಲ್ಲಿ ದಾಸೋಹ ದಿನಾಚರಣೆ
ರಾಮನಗರ (hairamanagara.in) : ತಾಲ್ಲೂಕಿನ ಕೂಟಗಲ್ ಹೋಬಳಿಯ ಬಾಳಲಿಂಗೇಗೌಡನದೊಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಡಾ. ಶಿವಕುಮಾರಸ್ವಾಮೀಜಿ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಹಾಗೂ ಮೊದಲನೇ ವರ್ಷದ ದಾಸೋಹ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಟೈ, ಬೆಲ್ಟ್, ಐಡಿ ಕಾರ್ಡ್ ಗಳನ್ನು ವಿತರಿಸಲಾಯಿತು. ದಾಸೋಹದ ಅಂಗವಾಗಿ ಕಾಯಿ ಒಬ್ಬಟ್ಟು, ಹೆಸರು ಬೇಳೆ, ಹುರುಳಿಕಾಯಿ ಪಲ್ಯ, ಅಪ್ಪಳ, ಉಪ್ಪಿನಕಾಯಿ, ತುಪ್ಪ, ಅನ್ನ ಸಾಂಬಾರು ಮಾಡಿಸಲಾಗಿತ್ತು. ಜಯರಾಮು ಅವರು ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಾಲೆಯ ಮುಖ್ಯಶಿಕ್ಷಕರಾದ ವೀರೇಶಮೂರ್ತಿ ಅವರು ಶಿವಕುಮಾರಸ್ವಾಮೀಜಿ ಅವರ ದಿನಚರಿ, ಅವರ ಸಾಮಾಜಿಕ ಕೆಲಸಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ ವಂದನಾರ್ಪಣೆ ಮಾಡಿದರು.