ರಾಮನಗರ ಜಿಲ್ಲೆಯಲ್ಲಿ 2012ಕ್ಕೆರಿದ ಕೋವಿಡ್ ಸಕ್ರಿಯ ಪ್ರಕರಣಗಳು : ಭಾನುವಾರ 461 ಮಂದಿಗೆ ಕೋವಿಡ್
ರಾಮನಗರ (hairamanagara.in) : ಜಿಲ್ಲೆಯಲ್ಲಿ ಭಾನುವಾರ 461 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆಯು 2012 ಕ್ಕೆ ಏರಿದೆ. ಚನ್ನಪಟ್ಟಣ 77, ಕನಕಪುರ 199, ಮಾಗಡಿಯಲ್ಲಿ 89 ಹಾಗೂ ರಾಮನಗರದಲ್ಲಿ 96 ಪ್ರಕರಣಗಳು ದಾಖಲಾಗಿದ್ದು ಒಟ್ಟು ರಾಮನಗರ ಜಿಲ್ಲೆಯಲ್ಲಿ 461 ಕರೋನ ಸೋಂಕು ಪ್ರಕರಣ ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 2012 ಇದ್ದು, ಇಂದು 321 ಜನ ಗುಣಮುಖರಾಗಿರುತ್ತಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 27931 ಜನರಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿದ್ದು, 25548 ಜನರು ಗುಣಮುಖರಾಗಿರುತ್ತಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.