ಲಕ್ಕೋಜನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ
ರಾಮನಗರ (hairamanagara.in) : ವಿದ್ಯಾರ್ಥಿಗಳು ಕಾಲಕ್ಕೆ ತಕ್ಕಂತೆ ಬದಲಾಗುವ ಶಿಕ್ಷಣ ವ್ಯವಸ್ಥೆಗೆ ಹೊಂದಿಕೊಂಡು ಉತ್ತಮ ಶಿಕ್ಷಣ ಪಡೆದು ತಮ್ಮಗಳ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಕೈಲಾಂಚ ಕ್ಲಸ್ಟರ್ ಸಿಆರ್‌ಪಿ ಮೃತ್ಯುಂಜಯ ತಿಳಿಸಿದರು.
ತಾಲ್ಲೂಕಿನ ಕೈಲಾಂಚ ಹೋಬಳಿಯ ಲಕ್ಕೋಜನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ಶಾಲೆಗೆ ನೀಡಲಾದ ಪ್ರಾಜೆಕ್ಟರ್ ಮತ್ತು ಸ್ಮಾರ್ಟ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದು ಉತ್ತಮ ಶಿಕ್ಷಣ ನೀಡುತ್ತಿದೆ. ಸರ್ಕಾರಿ ಶಾಲೆಗಳ ಬಲವರ್ಧನೆಗೆ ಶಿಕ್ಷಣ ಇಲಾಖೆ ಮುಂದಾಗಿದೆ. ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಬಟ್ಟೆ, ಮಧ್ಯಾಹ್ನದ ಬಿಸಿಯೂಟ, ಮೂಲಭೂತ ಸೌಕರ್ಯಗಳನ್ನು ನೀಡಿ ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದೆ. ಜೊತೆಗೆ ಸಂಘ ಸಂಸ್ಥೆಗಳು ಸರ್ಕಾರಿಶಾಲೆಗಳ ಬಗ್ಗೆ ಕಾಳಜಿ ವಹಿಸಿ ಹಲವಾರು ಕೊಡುಗೆಗಳನ್ನು ನೀಡುತ್ತಾ ಬರುತ್ತಿವೆ.

ಯುವ ಬೆಂಗಳೂರು ಟ್ರಸ್ಟ್ 1 ರಿಂದ 10 ನೇ ತರಗತಿ ಮಕ್ಕಳ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ, ಕಲಿಕೆಗೆ ನೆರವಾಗುವಂತೆ ದೃಶ್ಯ ಮತ್ತು ಧ್ವನಿ ರೂಪದ ಪಠ್ಯ ಭೋದನೆಗೆ ಅನುಗುಣವಾಗಿ ಮಕ್ಕಳು ಸುಲಭವಾಗಿ ಗ್ರಹಿಕೆಯಾಗುವ ಸ್ಮಾರ್ಟ್ ಕ್ಲಾಸ್ ಕೊಡುಗೆ ನೀಡಿದೆ. ಇದರಿಂದ ಮಕ್ಕಳು ಬಹುಬೇಗ ವಿಷಯ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮಕ್ಕಳು ಸ್ಮಾರ್ಟ್‍ಕ್ಲಾಸ್ ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಗ್ರಾಮಕ್ಕೆ ಶಾಲೆಗೆ ಕೀರ್ತಿ ತರಬೇಕೆಂದು ತಿಳಿಸಿದರು.
ಯುವ ಬೆಂಗಳೂರು ಟ್ರಸ್ಟ್ ಅಧ್ಯಕ್ಷ ಕಿರಣ್ ಮಾತನಾಡಿ ಸ್ಮಾರ್ಟ್ ಕ್ಲಾಸ್‍ನಲ್ಲಿ ದೃಶ್ಯ ಮತ್ತು ಧ್ವನಿ ಮೂಲಕ ಪಾಠ ಭೋದನೆ ಮಾಡಬಹುದಾಗಿದೆ ಇದರಿಂದ ಮಕ್ಕಳಿಗೆ ಸುಲಭವಾಗಿ ಪಠ್ಯಗಳು ಅರ್ಥವಾಗಲು ಸಾಧ್ಯ ಸ್ಮಾರ್ಟ್ ಕ್ಲಾಸ್‍ನಲ್ಲಿ ಶಿಕ್ಷಕರು ಮಕ್ಕಳ ಜೊತೆ ಇದ್ದು ದೃಶ್ಯ ರೂಪದಲ್ಲಿ ವಿವರಣೆ ಕೊಟ್ಟಾಗ ಮಕ್ಕಳ ಮನಸ್ಸಿನಲ್ಲಿ ಕಲಿಯುಉವ ಹುಮ್ಮಸ್ಸು ಮೂಡಿ ಬಹುಬೇಗನೆ ವಿಷಯ ಅರ್ಥವಾಗುತ್ತದೆ.
ಮಕ್ಕಳ ಕಲಿಕೆಗೆ ಸ್ಮಾರ್ಟ್ ಕ್ಲಾಸ್ ಸಾಧನಗಳು ಪೂರಕವಾಗಿವೆ ಸರ್ಕಾರಿ ಶಾಲೆ ಮಕ್ಕಳ ಪ್ರಗತಿಗೆ ಮುಂದಾಗುವ ದೃಷ್ಟಿಯಿಂದ ಟ್ರಸ್ಟ್ ವತಿಯಿಂದ ಆಯ್ದ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್‍ಪರಿಕರಗಳನ್ನು ನೀಡಲಾಗುತ್ತಿದೆ ಎಂದರು.
ಮುಖ್ಯಶಿಕ್ಷಕಿ ಡಿ. ರೇಖಾ ಮಾತನಾಡಿ ನಮ್ಮ ಶಾಲೆಗೆ ಗ್ರಾಮಸ್ಥರು ದಾನಿಗಳು ಶಾಲಾ ಮಕ್ಕಳಿಗೆ ಪ್ರತೀವರ್ಷ ನೋಟ್‍ಪುಸ್ತಕ, ಲೇಖನಸಾಮಗ್ರಿ, ಶಾಲಾ ಪರಿಕರಗಳನ್ನು ನೀಡುತ್ತಾ ಬಂದಿದ್ದು ಉತ್ತಮ ಸಹಕಾರ ನೀಡುತ್ತಿದ್ದಾರೆ. ಪ್ರಸ್ತುತ ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ಸ್ಮಾರ್ಟ್ ಕ್ಲಾಸ್ ಪರಿಕರ ನೀಡಿದ್ದಾರೆ ಇದರಿಂದ ಮಕ್ಕಳ ಕಲಿಕೆಗೆ ಇನ್ನಷ್ಟು ಪ್ರೊತ್ಸಾಹ ಸಿಕ್ಕಂತಾಗಿದೆ ಎಂದು ತಿಳಿಸಿದರು.
ಎಸ್‍ಡಿಎಂಸಿ ಅಧ್ಯಕ್ಷ ಮಂಜು, ಜಾಲಮಂಗಲ ಶಿಕ್ಷಕ ಚಂದ್ರಶೇಖರ್, ಟ್ಟಸ್ಟ್‍ನ ಸುನಿಲ್, ಕಾರ್ಯದರ್ಶಿ ಶ್ವೇತ, ಮುಖಂಡರಾದ ಎಲ್.ಎಂ.. ಸಂತೋಷ್, ವಿಜಯಕುಮಾರ್‍ಶಿಕ್ಷಕರಾದ ಎಂ.ಎನ್. ಪಾಪಣ್ಣ, ಮಾಧವಿ ಕವರಿ ಇತರರು ಉಪಸ್ಥಿತರಿದ್ದರು.