ಬೈಚಾಪುರ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು 1 ಕೋಟಿ ಅನುದಾನ : ಎ. ಮಂಜುನಾಥ್‌

ಮಾಗಡಿ : ಗ್ರಾಮವಿಕಾಸ ಯೋಜನೆಯಡಿ ಬೈಚಾಪುರ ಗ್ರಾಮಕ್ಕೆ 1 ಕೋಟಿ ಅನುದಾನದಡಿ ಮೂಲಭೂತ ಸೌಲಭ್ಯ ಒದಗಿಸಲಾಗಿದೆ ಎಂದು ಶಾಸಕ ಎ.ಮಂಜುನಾಥ್ ಹೇಳಿದರು.
ತಾಲೂಕಿನ ಕರಗದಹಳ್ಳಿ ಕಾಳಗಟ್ಟಮ್ಮ ದೇವಾಲಯದ ಮುಂಭಾಗ ಲಕ್ಷ್ಮಿ ದೇವಾಲಯ ಪುನರ್ ಜೀರ್ಣೋದ್ದಾರ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ತಗ್ಗಿಕುಪ್ಪೆ ರಸ್ತೆಯಿಂದ ಕರಗದ ಹಳ್ಳಿ ಕಾಲೋನಿಯವರೆಗೆ 20 ಲಕ್ಷರೂ ವೆಚ್ಚದಲ್ಲಿ ಚರಂಡಿ, ಕಾಂಕ್ರೆಟ್ ರಸ್ತೆ ನಿರ್ಮಿಸಲು ಹಣ ಬಿಡುಗಡೆಮಾಡಿಸಲಾಗಿದೆ ಶೀಘ್ರವೇ ಗುದ್ದಲಿಪೂಜೆ ನೆರವೇರಿಸಲಾಗುವುದು. ಸಾಲು ಪಾಳ್ಯದಲ್ಲಿ ಶುದ್ದಕುಡಿಯುವ ನೀರಿನ ಘಟಕ, ಕಕ್ಕೆಪನಪಾಳ್ಯದ ರಸ್ತೆ, ಬೈಚಾಪುರ ಅಂಗನವಾಡಿಯ ಮೇಲೆ ಸುಸರ್ಜಿತ ಜಿಮ್ ನಿರ್ಮಿಸಲಾಗುವುದು ಎಂದರು.
ಕನಕಪುರ ಕಬ್ಬಾಳು ಉತ್ಸವದಂತೆ ಕರಗದಹಳ್ಳಿ ಕಾಳಗಟ್ಟ ದೇವಿ ಉತ್ಸವ ನಡೆಯುತ್ತಿದ್ದು 32 ಗ್ರಾಮದ ಮಂದಿ ಅಲ್ಲದೆ ದಿನೆ,ದಿನೇ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು ಭಕ್ತರ ಅನುಕೂಲಕ್ಕಾಗಿ ಶಾಸಕರ ಅನುದಾನ ಅಲ್ಲದೆ ವಿಧಾನಪರಿಷತ್ ಸದಸ್ಯರ ಅನುದಾನದಡಿ ಸುಸರ್ಜಿತ ಸಮುದಾಯ ಭವನ ನಿರ್ಮಿಸಲು ಚಿಂತಿಸಲಾಗಿದೆ ಎಂದರು.
ಲಕ್ಷ್ಮಿ ದೇವಾಲಯ ಶಿಥಿಲವಾಗಿದ್ದು ಪುನರ್ ಜಿರ್ಣೋದ್ದಾರಗೊಳಿಸಲು 6 ಲಕ್ಷರೂ ಮೀಸಲಿಡಲಾಗಿದ್ದು ಈ ಹಣ ಸಾಲುವುದಿಲ್ಲ ಎಂದು ಗ್ರಾಮಸ್ಥರು ಮನವಿ ಮಾಡಿದ ಮೇರೆಗೆ 6 ಲಕ್ಷರೂ ನೀಡಲು ತಿರ್ಮಾನಿಸಲಾಗುವುದು ಮತಷ್ಟು ಹಣ ಬೇಕಾದರೆ ನೀಡಲಾಗುವುದು ಎಂಬ ಭರವಸೆ ನೀಡಿದರು.
ನಾಡಪ್ರಭು ಕೆಂಪೇಗೌಡರು ನಿರ್ಮಿಸಿರುವ ಪುರಾತನ ವರದರಾಜ ದೇವಾಲಯ ಶಿಥಿಲವಾಗಿದ್ದು ಬೆಟ್ಟಹಳ್ಳಿ ಗ್ರಾಮದ ದೇವಾಲಯದಂತೆ ಈ ದೇವಾಲಯ ಪುನರ್ ಜೀಣ್ಣೋದ್ದಾರಗೊಳಿಸಲು ಧರ್ಮಸ್ಥಳ ಸಂಸ್ಥೆಯವರಿಗೆ ಮನವಿ ಮಾಡಲಾಗಿದೆ, ಈ ದೇವಾಲಯ ಮುಜುರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಕಾರಣ ಪುರಾತತ್ವ ಇಲಾಖೆ ಯಿಂದ ವರದಿ ನೀಡುವಂತೆ ಕೇಳಿದ್ದು ವರದಿ ಸಿದ್ದಪಡಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಪಟ್ಟಣದಲ್ಲಿ ಕಳ್ಳತನ ನಡೆದಿದ್ದು ಕೂಡಲೇ ಕಳ್ಳರನ್ನು ಸೆರೆಹಿಡಿಯುವಂತೆ ಪೊಲೀಸರಿಗೆ ತಾಕಿತು ಮಾಡಲಾಗಿದೆ, ಪಟ್ಟಣದ ಪ್ರಮುಕ ವೃತ್ತಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು ಈ ನೆಟ್‍ವರ್ಕ್‍ಗಳನ್ನು ಪೊಲೀಸ್ ಠಾಣೆಗೆ ನೀಡಲು 30 ಲಕ್ಷರೂಗಳ ಅನುದಾನ ಅವಶ್ಯಕತೆಯಿದ್ದು ಈ ಹಣವನ್ನು ಕೂಡಲೇ ಬಿಡುಗಡೆಗೊಳಿಸುವ ಭರವಸೆ ನೀಡಿದರು.
ಬಾಕ್ಸ್ : ಪಟ್ಟಣದಲ್ಲಿ ಎಷ್ಟು ಮಂದಿ ತರಕಾರಿ ಮಾರಾಟಮಾಡುತ್ತಿದ್ದಾರೆಂದು ಅಂಕಿ, ಅಂಶ ನಮ್ಮ ಬಳಿ ಇದ್ದು ನಿಜವಾದ ತರಕಾರಿ ಮಾರಾಟಗಾರಿಗೆ ಪ್ರಥಮ ಹಂತದಲ್ಲಿ ನೂತನ ಮಾರುಕಟ್ಟೆಯಲ್ಲಿ ಅವಕಾಶ ಕಲ್ಪಿಸಲಾಗುವುದು ಉಳಿದವರಿಗೆ ಎರಡನೇ ಹಂತದಲ್ಲಿ ನೀಡಲು ತಿರ್ಮಾನಿಸಲಾಗಿದೆ ಎಂದರು.
ಜೆಡಿಎಸ್ ಮುಖಂಡ ದವಳಗಿರಿ ಚಂದ್ರಣ್ಣ, ನೇತೇನಹಳ್ಳಿ ಗ್ರಾ.ಪಂ. ಅಧ್ಯಕ್ಷ ಪುರುಷೋತ್ತಮ್, ಗ್ರಾ.ಪಂ. ಸದಸ್ಯರಾದ ಭರತ್ ಕುಮಾರು, ಶಿವಕುಮಾರು,
ಪುರಸಭೆ ಮಾಜಿ ಅಧ್ಯಕ್ಷ ನರಸೇಗೌಡ, ಮಾಜಿ ಅಧ್ಯಕ್ಷ ಬೆಂಕಿ ಮಂಜಣ್ಣ, ಮಾಜಿ ಉಪಾಧ್ಯಕ್ಷ ರಂಗಣ್ಣಿ, ಮಾಜಿ ಸದಸ್ಯ ಪಂಚೇ ರಾಮಣ್ಣ, ತಾ.ಪಂ. ಮಾಜಿ ಅಧ್ಯಕ್ಷೆ ಅರುಂಧತಿ ಚಿಕ್ಕಣ್ಣ, ಎಪಿಎಂಸಿ ಮಾಜಿ ನಿರ್ದೆಶಕ ಜಯಕುಮಾರು,ಹೊಂಬಾಳಮ್ಮನ ಪೇಟೆ ನಾಗರಾಜು, ತಿರುಮಲೆ ಲಕ್ಷ್ಮಣ ಇತರರು ಇದ್ದರು.

Leave a Reply

Your email address will not be published. Required fields are marked *