ಮೊದಲ ಬಾರಿಗೆ ಮಾಗಡಿಯಿಂದ ಬೆಂಗಳೂರು ಮಾರ್ಕೆಟ್ ವರೆಗೆ ಹವಾನಿಯಂತ್ರಣ ವಜ್ರ ಸಾರಿಗೆ ಸೇವೆ ಆರಂಭ
ಮಾಗಡಿ (hairamanagara.in) : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆವತಿಯಿಂದ ಪ್ರಥಮ ಬಾರಿಗೆ ಮಾಗಡಿಯಿಂದ ಬೆಂಗಳೂರು ಮಾರ್ಕೆಟ್‍ವರೆಗೆ ಎಂಟು ಹವಾನಿಯಂತ್ರಣ ವಜ್ರ ಸಾರಿಗೆ ಸೇವೆ ಕಲ್ಪಿಸಿದೆ.
ತಾಲೂಕಿನ ಜನರು ಬೆಂಗಳೂರಿಗೆ ತೆರಳಲು ಕೆಎಸ್ ಆರ್‍ಟಿಸಿ ಬಸ್ ಮತ್ತು ಖಾಸಗಿ ಬಸ್ ನಲ್ಲಿ ಓಡಾಡುವಂತಾಗಿದ್ದು ಇಂದಿನಿಂದ ಮಾಗಡಿ ಜನತೆ ಹೈಟೆಕ್ ಹವಾನಿಯಂತ್ರಣ ಬಸ್ ನಲ್ಲಿ ಓಡಾಡುವಂತಹ ಭಾಗ್ಯ ಲಭಿಸಿದೆ.
ಮಾಗಡಿ ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಸೋಮವಾರ ಬೆಳಗ್ಗೆ ಬಿಎಂಟಿಸಿ ಹವಾನಿಯಂತ್ರಣ ವಜ್ರ ಬಸ್ ನಿಂದ ಪ್ರಥಮವಾಗಿ ಒಂದು ಬಸ್ ನಲ್ಲಿ 20 ಮಂದಿ ಪ್ರಯಾಣಿಸಿದರೆ ಹಂತ ಹಂತವಾಗಿ ಹೆಚ್ಚು ಮಂದಿ ಹವಾನಿಯಂತ್ರಣ ಬಸ್‍ನಲ್ಲಿ ತೆರಳಿದರು.
ಇದೇ ಮೊದಲ ಭಾರಿಗೆ ಮಾಗಡಿಗೆ ಬಿಎಂಟಿಸಿ ಹವಾನಿಯಂತ್ರಣ ಬಸ್ ಬಿಟ್ಟಿರುವುದರಿಂದ ಬಹುದಿನಗಳ ಜನತೆಯ ಕನಸು ನನಸಾಗಿದೆ, ಇದರಿಂದ ಕಾಲೇಜು ವಿದ್ಯಾರ್ಥಿ,ವಿದ್ಯಾರ್ಥಿನಿಯರು, ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ,ಖಾಸಗಿ ನೌಕರರು ಸಂತಂಸ ವ್ಯಕ್ತಪಡಿಸಿದ್ದಾರೆ.
ಪ್ರತಿಕ್ರಿಯೆ : ಮಾಗಡಿಯಿಂದ ಬೆಂಗಳೂರು ಮಾರುಕಟ್ಟೆಯವರೆಗೆ ಜನರಿಗೆ ಸಾಕಷ್ಟು ಬೇಡಿಕೆ ಇದ್ದ ಕಾರಣ ನಾಡಪ್ರಭು ಕೆಂಪೇಗೌಡರ ನಾಡಿನಿಂದ ಎಂಟು ಬಿಎಂಟಿಸಿ ಹವಾನಿಯಂತ್ರಣ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ನಂತರ ಬೇಡಿಕೆ ಆಧಾರದ ಮೇಲೆ ಮತಷ್ಟು ಬಸ್ ಸೌಲಭ್ಯ ಒದಗಿಸಲಾಗುವುದು. ಈಗಾಗಲೇ ಮಾಗಡಿ ಕುದೂರು, ಡಾಬಸ್ ಪೇಟೆ, ಮಾರ್ಗವಾಗಿ ಮಾಗಡಿಗೆ ಬಿಎಂಟಿಸಿ ಬಸ್ ವ್ಯವಸ್ಥೆ ಕಲ್ಪಿಸಲು ಬೇಡಿಕೆಯಿದ್ದು ಶೀಘ್ರವೆ ಬಿಎಂಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು.
ಮಾಗಡಿ- ಬೆಂಗಳೂರು ಮಾರುಕಟ್ಟೆಗೆ ಕೆಎಸ್‍ಆರ್‍ಟಿಸಿ ಬಸ್ ಚಾರ್ಜ್ 50 ರೂ. ಗಳಷ್ಟೆ ಬಿಎಂಟಿಸಿ ಹವಾನಿಯಂತ್ರಣ ಬಸ್ ಚಾರ್ಜ್ ನಿಗಧಿಪಡಿಸಲಾಗಿದೆ, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಮನವಿ.

- ಬಿಎಂಟಿಸಿ ನಿರ್ದೆಶಕ ಕೆ.ಪಿ. ಬೃಂಗೇಶ್