ಮಾಗಡಿಯಲ್ಲಿ ಮಾರ್ಚ್‌ ತಿಂಗಳಿನಲ್ಲಿ ವಿದ್ಯುತ್ ಚಿತಾಗಾರ ಲೋಕಾರ್ಪಣೆ : ಡಿ.ಕೆ. ಸುರೇಶ್

ಮಾಗಡಿ (hairamanagara.in) : ಬಿಜೆಪಿ ಸರಕಾರ ಜನರೊಂದಿಗೆ ದೊಂಬರಾಟ ಆಡುವುದು ಬೇಡ ಎಂದು ಸಂಸದ ಡಿ.ಕೆ.ಸುರೇಶ್ ಸರಕಾರದ ವಿರುದ್ದ ಲೇವಡಿ ಮಾಡಿದರು.
ಪಟ್ಟಣದ ತಟವಾಳು ರಸ್ತೆಯ ವಿದ್ಯುತ್ ಚಿತಾಗಾರ ಕಾಮಗಾರಿ ವೀಕ್ಷಿಸಿದ ನಂತರ ಮಾತನಾಡಿದ ಅವರು, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳೆ ನನ್ನೊಂದಿಗೆ ಕಾಂಗ್ರೆಸ್‍ನ 10 ಮಂದಿ ಶಾಸಕರಿದ್ದಾರೆ ಎಂದಿದ್ದಾರೆ ಅವರೊಂದಿಗೆ 20 ಮಂದಿ ಶಾಸಕರಿರಲ್ಲಿ ಮೊದಲು ಜನರಿಗೆ ಉತ್ತಮ ಆಡಳಿತ ಕೊಡಲಿ ಅದನ್ನು ಬಿಟ್ಟು ಇಂಥಹ ಸಂಕಷ್ಟದ ಸಮಯದಲ್ಲಿ ರಾಜಕಾರಣ ಮಾಡುವುದು ಬಿಡಬೇಕು. ಸರಕಾರ ಮತ್ತು ಅಧಿಕಾರಿಗಳಿಬ್ಬರು ಜನರನ್ನು ದೊಂಬರಾಟದ ರೀತಿ ತಿಳಿದುಕೊಂಡು ಆಡಳಿತ ವ್ಯವಸ್ಥೆಯಲ್ಲಿ ಕಳೆದ ಎರಡು ವರ್ಷದಿಂದ ಧಕ್ಕೆ ತರುವ ರೀತಿ ದೊಂಬರಾಟ ನಡೆಯುತ್ತಿದೆ. ಒಬ್ಬ ಮಂತ್ರಿ ಒಂದು ಹೇಳಿದರೆ ಇನ್ನೊಬ್ಬ ಅಧಿಕಾರಿ ಇನ್ನೊಂದು ಹೇಳಿ ಇನ್ನೊಬ್ಬ ಮುಖ್ಯಮಂತ್ರಿ ಇನ್ನೊಂದು ಹೇಳುವುದರಿಂದ ಸಾರ್ವಜನಿಕರಿಗೆ ಒಳ್ಳೆಯದಾಗುವುದಿಲ್ಲ ಮೊದಲು ಆಡಳಿತ ಸುಧಾರಣೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾರ್ಚ್ ತಿಂಗಳಲ್ಲಿ ಪಟ್ಟಣದಲ್ಲಿನ ವಿದ್ಯುತ್ ಚಿತಾಗಾರ ಲೋಕಾರ್ಪಣೆಗೊಳಿಸಲಾಗುವುದು. ಕೊವಿಡ್ ನಿಂದ ಚಿತಾಗಾರ ಕಾಮಗಾರಿ ವಿಳಂಬವಾಗಿದ್ದು ಪ್ರಧಾನ ಮಂತ್ರಿಗಳು ಸಂಸದರ ಅನುದಾನ ತಡೆಹಿಡಿದ ಕಾರಣ ಬಾಕಿ ಉಳಿದ ಚಿತಾಗಾರ ಕಾಮಗಾರಿ ಪೂರ್ಣಗೊಳಿಸುವ ಕಾರಣ ತಕ್ಷಣ ಪೂರ್ಣಗೊಳಿಸಲು ಉಳಿದ ಅನುದಾನವನ್ನು ನೀಡಿ ಸಾರ್ವಜನಿಕ ಉಪಯೋಗಕ್ಕೆ ಅನುಕೂಲಕಲ್ಪಿಸಲಾಗುವುದು. ಮಾಚ್ ತಿಂಗಳಲ್ಲಿ ಪುರಸಭೆಗೆ ಚಿತಾಗಾರ ವಹಿಸಿ ಉದ್ಘಾಟಿಸಲಾಗುವುದು ಎಂದರು.
ನನ್ನ ಲೋಕಸಭಾ ಕ್ಷೇತ್ರದಲ್ಲಿ 7 ಕಡೆ ಆಧುನಿಕ ಚಿತಾಗಾರ ಕಾಮಗಾರಿ ಪ್ರಗತಿಯಲ್ಲಿದ್ದು ಈ ಗಾಗಲೇ ಕನಕಪುರದಲ್ಲಿ ಚಿತಾಗಾರ ಪೂರ್ಣಗೊಳಿಸಿ ಉದ್ಘಾಟಿಸಲಾಗಿದೆ, ರಾಮನಗರ, ಚನ್ನಪಟ್ಟಣದಲ್ಲಿ 10 ರಷ್ಟು ಕಾಮಗಾರಿ ಪೂರ್ಣಗೊಳಿಸಬೇಕಿದ್ದು ಪ್ರತಿಯೊಂದು ಚಿತಾಗಾರಗಳನ್ನು 3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ರಾಮನಗರ, ಕನಕಪುರದಲ್ಲಿ ಡಬಲ್ ಯೂನಿಟ್ ಮತ್ತು ಮಾಗಡಿ, ಚನ್ನಪಟ್ಟಣದಲ್ಲಿ ಸಿಂಗಲ್ ಯೂನಿಟ್ ನಿರ್ಮಿಸಲಾಗಿದೆ ಇದರಿಂದ ಪ್ರತಿ ದಿನ 10 ಮಂದಿಯ ಶವಸಂಸ್ಕಾರ ಮಾಡಬಹುದಾಗಿದೆ ಸಾರ್ವಜನಿಕರು ಸಮರ್ಪಕವಾಗಿ ಉಪಯತೋಗಿಸಿಕೊಳ್ಳುವಂತೆ ತಿಳಿಸಿದರು.
ಸ್ಮಶಾಣಗಳಿಗೆ ಜಾಗ ಸಿಗದ ಕಾರಣ ಇಂಥಹ ವೇಳೆ ಆಧುನಿಕ ಚಿತಾಗಾರಗಳು ಅವಶ್ಯಕತೆಯಾಗಿವೆ, ಈ ಸಂಬಂಧ ನನ್ನ ಲೋಕಸಭಾ ವ್ಯಾಪ್ತಿಯ ಪ್ರಮುಖ ತಾಲೂಕು ಕೇಂದ್ರಗಳಲ್ಲಿ ಚಿತಾಗಾರಗಳನ್ನು ನಿರ್ಮಿಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ತಟವಾಳು ರಸ್ತೆಯ ವೀರಶೈವ ಹಿಂದುರುದ್ರ ಭೂಮಿಯ ಸುತ್ತ ಕಾಂಪೊಂಡು ಮತ್ತು ಅಭಿವೃದ್ದಿಗೊಳಿಸಲು ಸಂಸದರ ಅನುದಾನ ನೀಡುವಂತೆ ಪುರಸಭಾ ಸದಸ್ಯೆ ಶಿವರುದ್ರಮ್ಮ ವಿಜಯ್ ಕುಮಾರು ಸಂಸದರಿಗೆ ಮನವಿ ಮಾಡಿದರು.
ಜಿ.ಪಂ. ಮಾಜಿ ಅಧ್ಯಕ್ಷ ಎಚ್.ಎನ್.ಆಶೋಕ್, ಬೆಂಗಳೂರು ಡೇರಿ ಅಧ್ಯಕ್ಷ ನರಸಿಂಹಮೂರ್ತಿ, ಜಿ.ಪಂ. ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ವಿಜಯ್ ಕುಮಾರು, ದಿಶಾಸಮಿತಿ ಸದಸ್ಯ ಜೆ.ಪಿ.ಚಂದ್ರೇಗೌಡ, ಪುರಸಭೆ ಅಧ್ಯಕ್ಷೆ ವಿಜಯ ರೂಪೇಶ್, ಉಪಾಧ್ಯಕ್ಷ ರೆಹಮತ್, ಸ್ಥಾಯಿಸಮಿತಿ ಅಧ್ಯಕ್ಷ ಕೆ.ಕೆ.ಕಾಂತರಾಜು, ಸದಸ್ಯರಾದ ಎಚ್.ಜೆ.ಪುರುಷೋತ್ತಮ್, ಎಂ.ಎನ್.ಮಂಜುನಾಥ್, ಶಿವರುದ್ರಮ್ಮ ವಿಜಯ್ ಕುಮಾರು, ಎಂ.ಆರ್.ರೇಖಾ ನವೀನ್, ರಿಯಾಜ್, ಹೇಮಾಲತಾ, ಜಯರಾಮು, ತಾ.ಪಂ. ಮಾಜಿ ಸದಸ್ಯೆ ರತ್ನಮ್ಮ ಶ್ರೀನಿವಾಸ್, ಸಿ.ಜಯರಾಮು, ತೇಜಕುಮಾರು, ಆಗ್ರೋ ಪುರುಷೋತ್ತಮ್ ಇತರರು ಇದ್ದರು.

Leave a Reply

Your email address will not be published. Required fields are marked *