ಕರೋನ ಸೋಂಕು : ಗುರುವಾರ 265 ಪ್ರಕರಣ ದಾಖಲು

ರಾಮನಗರ (hairamanagara.in) : ಜಿಲ್ಲೆಯಲ್ಲಿ ಗುರುವಾರ ಚನ್ನಪಟ್ಟಣ 21, ಕನಕಪುರ 102, ಮಾಗಡಿಯಲ್ಲಿ 62 ಹಾಗೂ ರಾಮನಗರದಲ್ಲಿ 80 ಪ್ರಕರಣಗಳು ದಾಖಲಾಗಿದ್ದು ಒಟ್ಟು 265 ಕರೋನ ಸೋಂಕು ಪ್ರಕರಣ ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1557 ಇದ್ದು, ಇಂದು 464 ಜನ ಗುಣಮುಖರಾಗಿರುತ್ತಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 28822 ಜನರಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿದ್ದು, 26889 ಜನರು ಗುಣಮುಖರಾಗಿರುತ್ತಾರೆ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಗುರುವಾರ ಶೇ. 18.8 ರಷ್ಟಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *