ಶಿಕ್ಷಕಿ ಅಶ್ವಿನಿಗೆ ಬೀಳ್ಕೊಡುಗೆ
ಚನ್ನಪಟ್ಟಣ (hairamanagara.in) : ತಾಲ್ಲೂಕಿನ ಗಡಿಗ್ರಾಮ ಚಿಕ್ಕಬೋರೇಗೌಡನದೊಡ್ಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕಿ ಅಶ್ವಿನಿ ಅವರು ನೆರೆಯ ಮದ್ದೂರು ತಾಲ್ಲೂಕು ಆಲಭುಜನಹಳ್ಳಿ ಶಾಲೆಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಶಾಲಾ ಮಕ್ಕಳು ಆತ್ಮೀಯವಾಗಿ ಬೀಳ್ಕೊಟ್ಟರು.
ಗ್ರಾಮದ ಯುವ ಮುಖಂಡರಾದ ಎಸ್.ಎಸ್. ಬೆವರೇಜಸ್ ಮಾಲೀಕ ಸಿ.ಪಿ. ಸಂತೋಷ್ ಕುಮಾರ್, ಸಿ.ಪಿ.ಯೋಗೇಶ್, ಸಿ.ಟಿ.ಕೃಷ್ಣ, ಸ್ಥಳೀಯ ಮುಖಂಡರಾದ ನಾಗರಾಜು, ಸಿದ್ದರಾಜು, ವೆಂಕಟೇಶ್, ತಿಮ್ಮೇಗೌಡ, ಕುಮಾರ್, ಎಸ್ ಡಿ ಎಂಸಿ ಸದಸ್ಯರು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.