ದೇಶಕ್ಕೆ ಸಂಸ್ಕೃತ ವಿಶ್ವವಿದ್ಯಾಲಯ ಅವಶ್ಯಕವಾಗಿದೆ : ಶಾಸಕ ಎ. ಮಂಜುನಾಥ್
ರಾಮನಗರ (hairamanagara.in) : ಸಂಸ್ಕೃತ ವಿಶ್ವವಿದ್ಯಾಲಯ ಮಾಗಡಿಗೆ ಅಲ್ಲ, ದೇಶಕ್ಕೆ ಅವಶ್ಯಕ. ಮಾಗಡಿಯಲ್ಲಿ ಜಾಗವಿತ್ತು ಹೀಗಾಗಿ ಅಲ್ಲಿ ಸ್ಥಾಪನೆಗೆ ಮುಂದಾಗಿದ್ದಾರೆ ಎಂದು ಶಾಸಕ ಎ. ಮಂಜುನಾಥ್ ತಿಳಿಸಿದರು.
ಬಿಡದಿಯ ವೃಷಭಾವತಿ ಜಲಾಶಯದ ಎಡದಂಡೆ-ಬಲದಂಡೆ ಆಧುನೀಕರಣ 106 ಕೋಟಿ ರೂ. ವೆಚ್ಚದ ಕಾಮಗಾರಿ ಕರ್ನಾಟಕ ಸರ್ಕಾರ ಸಣ್ಣ ನೀರಾವರಿ ಇಲಾಖೆ ವತಿಯಿಂದ ಪ್ರಗತಿಯಲ್ಲಿದೆ. ಬಲದಂಡೆ ನಾಲೆಯ ಕಾಮಗಾರಿ ಪೂರ್ಣಗೊಂಡಿದ್ದು, ಬೈರಮಂಗಲ ಜಲಾಶಯದಿಂದ ಬಲದಂಡೆ ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾಗಡಿಯಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ತೀರ್ಮಾನ ಮಾಡಿರುವುದು ಸರ್ಕಾರದ ಉತ್ತಮ ತೀರ್ಮಾನ. ಸರ್ಕಾರದ ತೀರ್ಮಾನಕ್ಕೆ ನಾನು ಒಪ್ಪಿದ್ದೇನೆ ಎಂದು ಅವರು ಹೇಳಿದರು.
2023ಕ್ಕೆ ಕುಮಾರಸ್ವಾಮಿ ಸರ್ಕಾರ ಬರೋದು ಖಚಿತ. ಜಿಲ್ಲೆಯಲ್ಲಿ ಜೆಡಿಎಸ್ ಬಲವಾಗಿದೆ. ಜಿಲ್ಲೆಯ ಜನ ಎಂದಿಗೂ ಜೆಡಿಎಸ್ ಪರವಿದ್ದಾರೆ. ಎಂದಿಗೂ ಜನರು ಜೆಡಿಎಸ್ ಬಿಟ್ಟುಕೊಡುವುದಿಲ್ಲ ಹಿಂದೆಯೂ ಕೈ ಬಿಟ್ಟಿಲ್ಲ ಮುಂದೆಯೂ ಕೈ ಬಿಡುವುದಿಲ್ಲ ಎಂದು ತಿಳಿಸಿದರು.
ಜೆಡಿಎಸ್ ಶಾಸಕರು ಕಾಂಗ್ರೆಸ್‌ಗೆ ಸೇರುವ ವಿಚಾರ ನಾನು ಕುಮಾರಸ್ವಾಮಿ ಲಿಸ್ಟ್‌ನಲ್ಲಿ ಇದ್ದೇನೆ. ಕಾಂಗ್ರೆಸ್‌ನಲ್ಲೆ ಅಧಿಕಾರಕ್ಕಾಗಿ ಕಿತ್ತಾಟ ಮಾಡುತ್ತಿದ್ದಾರೆ. ಈಗಲೇ ಅವರು ಹಗಲುಗನಸು ಕಾಣುತ್ತಿದ್ದಾರೆ. ಮ್ಯೂಸಿಕಲ್ ಚೇರ್ ರೀತಿಯಲ್ಲಿ ಕಿತ್ತಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಪುರಸಭೆ ಸದಸ್ಯೆ ಯಲ್ಲಮ್ಮ, ಕೆ.ಎನ್. ರಮೇಶ್, ಸಿ.ಆರ್ ಮನು, ನಾಗರಾಜು, ಮಂಜುಳಾ, ಮುಖ್ಯಾಧಿಕಾರಿ ರಮೇಶ್, ಜೆಡಿಎಸ್ ಮುಖಂಡರಾದ ಸಿದ್ದರಾಜು, ಸೋಮೇಗೌಡ, ಇಟ್ಟಮಡು ಸೋಮಣ್ಣ, ಗೋಪಾಲ್, ನರಸಿಂಹಮೂರ್ತಿ, ರಾಜಣ್ಣ, ಕೆಂಪಣ್ಣ, ಲೋಕೇಶ್, ಬಸವರಾಜ್, ಧನಂಜಯ್ಯ ಇದ್ದರು.