ಮನೆಯಲ್ಲೇ ಕುಳಿತು ಡಿಎಲ್ ನವೀಕರಣ ಮಾಡಿ

ಬೆಂಗಳೂರು (hairamanagara.in) : ಚಾಲನಾ ಪರವಾನಗಿ(ಡಿಎಲ್‌), ಕಲಿಕಾ ಪರವಾನಗಿ(ಎಲ್‌ಎಲ್‌) ನವೀಕರಣಕ್ಕೆ ಇನ್ನು ಮುಂದೆ ಆರ್‌ಟಿಒ ಕಚೇರಿಗೆ ಹೋಗುವ ಅಗತ್ಯವಿಲ್ಲ. ಮನೆಯಲ್ಲೇ ಕುಳಿತು ನವೀಕರಣ ಮಾಡಬಹುದು.
ಪ್ರಾದೇಶಿ ಸಾರಿಗೆ ಇಲಾಖೆ(ಆರ್‌ಟಿಒ) ಕಚೇರಿಯಲ್ಲಿನ ಭ್ರಷ್ಟಾಚಾರ ತಡೆಯಲು ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಸಾರಥಿ ವೆಬ್ ಸೈಟ್ ಮೂಲಕ ವಿಳಾಸ ಬದಲಾವಣೆ, ಹೆಸರು ಬದಲಾವಣೆಯಂತಹ ಸೇವೆಗಳನ್ನು ಮನೆಯಲ್ಲೇ ಶುಲ್ಕ ಪಾವತಿಸಿ ಅನ್‌ಲೈನ್‌ನಲ್ಲೇ ಮಾಡಬಹುದು ಎಂದು ಆರ್‌ಇಟಿಒ ತಿಳಿಸಿದೆ.
ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್, ಫಿಸಿಕಲ್ ಟೆಸ್ಟ್, ಫಿಟ್ನೆಸ್ ಟೆಸ್ಟ್ ರಿನಿವಲ್ ಮಾಡಿಸಲು ಮಾತ್ರ ಆರ್‌ಟಿಒ ಕಚೇರಿಗೆ ಹೋಗಬೇಕು. ಉಳಿದಂತೆ ಯಾವುದೇ ಕೆಲಸಗಳಿಗೆ ಆರ್‌ಟಿಒ ಕಚೇರಿಗೆ ಹೋಗಬೇಕಿಲ್ಲ.

Leave a Reply

Your email address will not be published. Required fields are marked *