ಮೇದರದೊಡ್ಡಿ ಹನುಮಂತ ಅವರ ಕವನ ‘ಬೆಂಕಿಯ ಮೊರೆ ಹೋದ ಪಯಣಿಗ’
️
ಮಾಘಿಯ ಮಾಹೆಯಲ್ಲಿ
ಚಳಿಯದ್ದೇ ದರಬಾರು
ಬಿಸಿರಕ್ತವನ್ನೂ ಹೆಪ್ಪುಗಟ್ಟಿಸುವ ತಾಕತ್ತು ಅದಕೆ.
ಸಿಕ್ಸ್ ಪ್ಯಾಕುಗಳೂ ನಡುಗುತ್ತವೆ.
ತಾಳಲಾರದ ಚಳಿಗೆ
ಚಡಿ ಏಟಿಗೆ
ಕಂಪಿಸಿದ ಫಕೀರನೋರ್ವ,
ಬೆಂಕಿಯ ಮೊರೆ ಹೋಗಿ
ಕಾವೇರುತ್ತಿದ್ದಾನೆ.
ಹಿಂದೆ ಕಾಯಿಸಿದರೆ ಉದರಕ್ಕೆ ಚಳಿ,
ಮುಂದೆ ಕಾಯಿಸಿದರೆ
ಮೈನಡುಕ
ಬೆಂಕಿ ಉರಿವಷ್ಟು ಕಾಲ
ಅಲ್ಪ ವಿರಾಮ
ಮತ್ತದೇ ಯಥಾಸ್ಥಿತಿ,
ಸಂದಿಗ್ಧ ಪರಿಸ್ಥಿಯಲ್ಲಿ
ಫಕೀರ ಪಾಡು.
ನೀನು ಜೊತೆ ಇರುವಷ್ಟು ಕಾಲವಷ್ಟೇ ಒಸಿ, ಹಸಿಬಿಸಿ
ಮತ್ತದೇ ಕೊರಗು,
ದೇಹ ಚಳಿಯ ಪಾಲು.
ರಚನೆ : ️ಮೇದರದೊಡ್ಡಿ ಹನುಮಂತ
ಕಾವ್ಯ ಜಂಗಮ
ಕನಕಪುರ ತಾಲ್ಲೂಕು,
ರಾಮನಗರ ಜಿಲ್ಲೆ.
ಮೊ : 9740260158