ರಸ್ತೆಯ ಮಧ್ಯದಲ್ಲಿ ನಾಲ್ಕು ಅಡಿ ಎತ್ತರದ ಯುಜಿಡಿ ಛೇಂಬರ್ ನಿರ್ಮಾಣ
ರಾಮನಗರ: (hairamanagara.in) : ರಸ್ತೆಯ ನಡುವೆ ಅವೈಜ್ಞಾನಿಕವಾಗಿ ಯುಜಿಡಿ ಚೇಂಬರ್ ನಿರ್ಮಾಣ ಮಾಡಿರುವುದರಿಂದ ವಾಹನ ಸವಾರರು ಮತ್ತು ಪಾದಾಚಾರಿಗಳಿಗೆ ತೀವ್ರವೇ ತೊಂದರೆಯಾಗುತ್ತಿದೆ ಎಂದು ನಗರಸಭಾ ಸದಸ್ಯ ನಿಜಾಮುದ್ದೀನ್ ಷರೀಫ್ ಅವರು ತಿಳಿಸಿದ್ದಾರೆ.
ಮಾದ್ಯಮದೊಂದಿಗೆ ಮಾತನಾಡಿ, ನಗರದ 14ನೇ ವಾರ್ಡ್ ವ್ಯಾಪ್ತಿಯಲ್ಲಿನ ಡಾಲ್ಫಿನ್ ಶಾಲೆಯ ಹಿಂಭಾಗದ ರಸ್ತೆಯ ಮಧ್ಯದಲ್ಲಿ ಸುಮಾರು ನಾಲ್ಕು ಅಡಿಗಳಷ್ಟು ಎತ್ತರವಾದ ಯುಜಿಡಿ ಛೇಂಬರ್ ನಿರ್ಮಾಣ ಮಾಡಿರುವುದು ಅಧಿಕಾರಿಗಳ ಬೇಜವಾಬ್ದಾರಿತನದ ವರ್ತನೆಯಾಗಿದೆ. ನಗರಸಭೆಯವರನ್ನು ಈ ಬಗ್ಗೆ ಕೇಳಿದರೆ ಕೆಆರ್‍ಐಡಿಬಿಎಲ್ ನಿರ್ಮಾಣ ಮಾಡಿದ್ದು ಅವರಿಂದಲೇ ಅದನ್ನು ಸರಿಪರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕಾಲ ಹರಣದ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕಟ್ಟಿರುವ ಈ ಛೇಂಬರ್ ಅನ್ನು ಪರಿಶೀಲಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಸ್ಥಳೀಯ ನಿವಾಸಿಗಳಲ್ಲಿ ಆಕ್ರೋಶವನ್ನುಂಟು ಮಾಡಿದ್ದು, ರಸ್ತೆಯಲ್ಲಿ ವಾಹನಗಳು ಮತ್ತು ಪಾದಾಚಾರಿಗಳು ಸಂಚರಿಸಲಾಗಿದೆ ಪರಿತಪಿಸುತ್ತಿದ್ದಾರೆ. ಆದ್ದರಿಂದ ಅದ್ಯಾವ ತಾಂತ್ರಿಕ ನಿಪುಣ ಇಂತಹ ಯುಜಿಡಿ ಛೇಂಬರ್ ಅನ್ನು ನಿರ್ಮಾಣ ಮಾಡಿದ್ದಾನೊ ಆ ವ್ಯಕ್ತಿಯನ್ನು ಸ್ಥಳಕ್ಕೆ ಕರೆಸಬೇಕು. ಸಂಬಂಧಿಸಿದ ಅಧಿಕಾರಿಗಳು ರಸ್ತೆಯ ಮಧ್ಯದಲ್ಲಿರುವ ಯುಜಿಡಿ ಛೇಂಬರ್‍ನ್ನು ರಸ್ತೆಯ ಮಟ್ಟಕ್ಕೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿಯನ್ನು ತಪ್ಪಸಬೇಕೆಂದು ಆಗ್ರಹಿಸುತ್ತೇನೆ ಎಂದು ಹೇಳಿದರು.