ಕವಿ ಡಾ. ಸಿದ್ದಲಿಂಗಯ್ಯ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ಮಾಗಡಿ ತಾಲ್ಲೂಕಿಗೆ ಸಂದ ಗೌರವ : ಎಚ್.ಎಂ. ರೇವಣ್ಣ
ಮಾಗಡಿ (hairamanagara.in) : ದಲಿತ ಕವಿ ಡಾ.ಸಿದ್ದಲಿಂಗಯ್ಯ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ನನಗೆ, ತಾಲೂಕಿಗೆ ತಂದ ಗೌರವವಾದ ಜತೆಗೆ ಪ್ರಶಸ್ತಿಗೆ ಗೌರವ ಹೆಚ್ಚಿದೆ ಎಂದು ಮಾಜಿ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಹೇಳಿದರು.
ಪಟ್ಟಣದ ತಮ್ಮ ತೋಟದ ಮನೆಯ ಬಳಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾ ಪಾಲ್ಕುರಿಕೆ ಸೋಮನಾಥ, ಸಿದ್ದಗಂಗೆ ಶ್ರೀ, ಗಂಗಾಧರಪ್ಪ, ಸಾತನೂರು ಪುಂಡಲೀಕ, ಹೆಬ್ಬಳಲು ನಂಜುಂಡಯ್ಯ, ಸಾಲುಮರದ ತಿಮ್ಮಕ್ಕ, ಮೋಟಗಾನಹಳ್ಳಿ ಮಹದೇವಶಾಸ್ತ್ರಿ ಸೇರಿದಂತೆ ಸಾಕಷ್ಟು ಮಂದಿ ಸಾರಸತ್ವ ಲೋಕಕ್ಕೆ ಕೊಡುಗೆ ನೀಡಿದ್ದು, ಡಾ.ಸಿದ್ದಲಿಂಗಯ್ಯ ಅವರು, ಶೋಷಿತ ವರ್ಗವನ್ನು 1970 ರಲ್ಲಿ ಜಗತ್ತಿಗೆ ತಿಳಿಸಿ, ದಲಿತ ಕಹಳೆ ಅನೇಕ ಮಂದಿಗೆ ಅಶ್ವರ್ಯ ಉಂಟುಮಾಡಿತ್ತು, ಅವರ ಕ್ರಾಂತಿ ಗೀತೆಗಳು ಯುವಕರಿಗೆ, ಚಿಂತಕರಿಗೆ ನಾಂಧಿಯಾಗಿತ್ತು, ದಲಿತ ಸಾಹಿತ್ಯದ ಸ್ಥಾಪಕರಾಗಿ ಅನೇಕ ಕಾರ್ಯಗಳಲ್ಲಿ ಕಾರ್ಯನಿರ್ವಹಿಸಿದರು ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಡಾ. ಸಿದ್ದಲಿಂಗಯ್ಯ ನಾನು ಫ್ರೈಮರಿ ಶಾಲೆಯಲ್ಲಿ ಒಟ್ಟಾಗಿ ವಿದ್ಯಾಬ್ಯಾಸಮಾಡಿದ್ದು ಸಂತೋಷವಾಗಿದೆ, ಕನ್ನಡ ಸಾಹಿತ್ಯ ಬೂಸ ಚಳುವಳಿ ಪ್ರಾರಂಭವಾದ ವೇಳೆ ಇದರ ನೇತೃತ್ವ ನಾನು ವಹಿಸಿದ ವೇಳೆ ಕನ್ನಡ ಸಾಹಿತ್ಯದಲ್ಲಿ ಬೂಸವಿದೆ ಎಂಬ ಅಂಶದಲ್ಲಿ ನಮ್ಮ ವಿರುದ್ದ ಹೋರಾಟಮಾಡಿದ್ದರು. ನಂತರ ಕೊನೆಯ ದಿನಗಳಲ್ಲಿ ಸಿದ್ದಲಿಂಗಯ್ಯ ಅವರು ಹತ್ತಿರವಾಗಿದ್ದೊ, ನನ್ನ ಜೀವನದ ಆತ್ಮಕಥೆ ಬಿಡುಗಡೆ ವೇಳೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕೊನೆಯ ಸಾರ್ವತಿಕ ಕಾರ್ಯಕ್ರಮವೂ ಇದಾಗಿತ್ತು, ಹುಟ್ಟಿದ್ದು ಜೊತೆಯಲ್ಲಿ, ಹೋರಾಟಮಾಡಿದ್ದು ಜೊತೆಯಲ್ಲಿ ಅವರ ಕೊನೆ ಉಸಿರು ನನ್ನ ಕಾರ್ಯಕ್ರಮದ ಇದು ಕಾಕತಾಳಿಯವಾಗಿದೆ ತಾಲೂಕಿನ ಜನತೆ, ಶೋಷಿತ ಜನಾಂಗದ ಪರವಾಗಿ ಅವರ ಅಭಿಮಾನಿಗಳ ಪರವಾಗಿ ರಾಷ್ಟ್ರಪತಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಾನು ಅಧಿಕಾರದಲ್ಲಿ ಇರಲಿ ಬಿಡಲಿ ತಾಲೂಕಿನ ಅಭಿವೃದ್ದಿಗೆ ಪ್ರಯತ್ನಿಸುತ್ತಿದ್ದೇನೆ , ನಾನು ಎಂದಿಗೂ ಮಾಗಡಿ ರೇವಣ್ಣ ರಾಜ್ಯದ ರೇವಣ್ಣ ಅಲ್ಲ, ಸಾಮಾನ್ಯ ಮನುಷ್ಯನಿಗೆ ರಾಜಕೀಯ ಜೀವನ ನೀಡಿದ ತಾಲೂಕಿನ ಜನರ ಋಣ ತೀರಿಸಲು ಅನೇಕ ಕಾರ್ಯಕ್ರಮ ರೂಪಿಸಿದ್ದೇನೆ. ಮಾಗಡಿಯಿಂದ ಯಾತ್ರಾ ಸ್ಥಳಗಳಿಗೆ ತೆರಳಲು ಬಸ್ಗಳ ಸಮಸ್ಯೆಯಾಗಿದ್ದು ಮಾಗಡಿ- ಧರ್ಮಸ್ಥಳ, ಮಾಗಡಿ- ಹೊರನಾಡು, ಮಾಗಡಿ- ಮಂತ್ರಾಲಯಕ್ಕೆ ಬಸ್ ವ್ಯವಸ್ಥೆಗೆ ಸಂಬಂಧ ಪಟ್ಟವರಲ್ಲಿ ಚರ್ಚಿಸಲಾಗಿದೆ, ರಸ್ತೆ ಸಾರಿಗೆ ಸಂಸ್ಥೆ ಲಾಭದಾಯಕ ಸಂಸ್ಥೆಯಾಗಬಾರದು ಜನಸ್ನೇಹಿ ಸಂಸ್ಥೆಯಾಗಬೇಕು. ಮಾಗಡಿಯಿಂದ ಬೆಂಗಳೂರಿಗೆ ಕೆಎಸ್ಆರ್ಟಿಸಿ ಬಸ್ ದರ ಏಕಾಏಕಿ 10 ರೂ ಹೆಚ್ಚಳ, ಹಾಗೂ ತಿಂಗಳ ಪಾಸು ಹೆಚ್ಚಳ ಮಾಡಿರುವುದರಿಂದ ನಾಗರೀಕರಿಗೆ ಹೊರೆಯಾಗಲಿದೆ ಫೆ. 8ರ ಒಳಗೆ ಕಡಿಮೆಮಾಡದಿದ್ದರೆ ಹೋರಾಟ ಮಾಡಲಾಗುವುದು, ಈ ಬಗ್ಗೆ ಜನಪ್ರತಿನಿಧಿಗಳು ಏಕೆ ಮೌನವಾಗಿದ್ದಾರೆ ಗೊತ್ತಿಲ್ಲ, ತಮಿಳು ನಾಡಿನ ಜನಪ್ರತಿನಿಧಿಗಳನ್ನು ನೋಡಿ ನಮ್ಮವರು ಕಲಿಯಬೇಕು ಎಂದು ಎಚ್ಚರಿಕೆ ನೀಡಿದರು.
ಸರಕಾರ ಆರು ತಿಂಗಳ ಸಾಧನೆ ಬಗ್ಗೆ ಪ್ರಚಾರ ಪಡೆಯುತ್ತಿದೆ ಒರತು ಜನಸ್ನೇಹಿಯಾಗಿ ಯಾವ ಕಾರ್ಯಕ್ರಮ ರೂಪಿಸಿಲ್ಲ, ಇಂದಿರಾಗಾಂಧಿ ಅವರು ನಿವೇಶನ ಇಲ್ಲದವರಿಗೆ ನಿವೇಶನ ನೀಡಿದ್ದಾರೆ ಇದು ನಮ್ಮ ಕಾರ್ಯಕ್ರಮ ಎನ್ನುತ್ತಾರೆ,
ಉಪಮುಖ್ಯಮಂತ್ರಿಯಾದವರು ಸಚಿವರಾಗಿರುವರು ತಾಕತ್ತು ಪದ ಉಪಯೋಗಿಸುವರು ಅವರ ಬಳಿ ಇರುವ ಯೋಜನೆಗಳನ್ನು ಮಾಗಡಿಗೆ ತರುವಲ್ಲಿ ತಾಕತ್ತು ಪ್ರದರ್ಶಿಸಲಿ ಎಂದು ಸವಾಲು ಹಾಕಿದರು.
ಮೇಕೆದಾಟು ಯೋಜನೆ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಎಂ.ಬಿ.ಪಾಟೀಲ್ ನೀರಾವರಿ ಸಚಿವರಾದ ವೇಳೆ ಡಿಪಿಆರ್ ಮಾಡಿ ಮಂಜೂರಾತಿನೀಡಿ ಡಿ.ಕೆ.ಸುರೇಶ್ ನೀರಾವರಿ ಸಚಿವರಾದ ವೇಳೆ 560 ಕೋಟಿಯಿಂದ 960 ಕೋಟಿಗೆ ಹೆಚ್ಚಿಸಿ ಕಾರ್ಯರೂಪ ನೀಡಿದ್ದು ನಮ್ಮ ಸರಕಾರದಲ್ಲಿ ಈ ಯೋಜನೆ ಮುಂದುವರೆಸಲು ಡಬ್ಬಲು ಡಕ್ಕರು ಸರಕಾರ ಮುಂದಾಗದೆ ಭಾಷಣ ಹೊಡೆಯುವುದು ಸರಿಯಲ್ಲ ಎಂದು ಚೇಡಿಸಿದರು.
ನಾನು ಶಾಸಕನಾದ ವೇಳೆ ನೀಡಿರುವ ನಿವೇಶನ ಬಿಟ್ಟು ಇಲ್ಲಿಯವರೆಗೂ ಯಾರು ನೀಡಿಲ್ಲ, ಬಗರು ಹುಕ್ಕುಂ ಸಾಗುವಳಿ ಚೀಟಿ ನೀಡಲು ಜನರಿಂದ ಹಣ ಕಟ್ಟಿಸಿಕೊಂಡಿದ್ದು ಇಲ್ಲಿಯವರೆಗೂ ಖಾತೆಮಾಡಿಕೊಟ್ಟಿಲ್ಲ ಎಂದು ಕಿಡಿಕಾರಿದರು.
ಆತಿಥಿ ಶಿಕ್ಷಕರಿಗೆ ಬೇರೆ ರಾಜ್ಯಗಳ ರೀತಿ ಸೇವಾ ಭದ್ರತೆ ನೀಡದೆ ನಿರ್ಲಕ್ಷಿಸಿದೆ ಸರಕಾರ ಸುಳ್ಳು ಪ್ರಚಾರ, ಭಾವಾನತ್ಮಕ ವಿಷಯ, ಧರ್ಮದ ಹೆಸರಿನಲ್ಲಿ ರಾಜಕೀಯ, ಹಿಂದು ,ಮುಸ್ಲಿಂಮರ ಹೆಸರಿನಲ್ಲಿ ಜನರನ್ನು ಒಡೆಯುವುದಾಗಲಿ,ನಮ್ಮ ಯೋಜನೆಗಳಿಗೆ ಹೆಸರು ಬದಲಾವಣೆ ಮಾಡುವುದು ಸರಿಯಲ್ಲ ಅವರು ಯೋಜನೆಗಳನ್ನು ಜಾರಿಗೊಳಿಸಿ ಬಿಜೆಪಿಯವರ ಸಾಕ್ಷಿ ಗುಡ್ಡೆ ಪ್ರದರ್ಶಿಸಲಿ,
ಕೇಂದ್ರ, ರಾಜ್ಯ ಸರಕಾರಗಳು ದಲಿತ, ರೈತ, ಮಹಿಳಾ, ಯುವಕರ ವಿರೋಧಿ ಎಂಬುದು ಸಾಬೀತಾಗಿದೆ, ರೈತರ ಬಗ್ಗೆ ಕಾಳಜಿ ಇದಿದ್ದರೆ ಎಪಿಎಂಸಿ ಕಾಯ್ದೆ ತರುತ್ತಿರಲಿಲ್ಲ, ಇಂಥಹ ಕಾನೂನನನ್ನು ತಂದು ಇಡೀ ಇತಿಹಾಸದಲ್ಲೆ ವಾಪಸ್ಸು ಪಡೆದ ಮುಟ್ಟಾಳರು ಇವರು ಎಂದು ಸರಕಾರದ ನಡೆ ವಿರುದ್ದ ಆರೋಪಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಬಿ.ಪಿ.ಮಂಜುನಾಥ್, ಪುರಸಭಾ ಸದಸ್ಯ ಶಿವಕುಮಾರು, ಮಾಜಿ ಸದಸ್ಯ ರಘು, ಕಾಂಗ್ರೆಸ್ ಮುಖಂಡರಾದ ತೇಜ, ತೋ.ವಿ.ಗಿರೀಶ್, ತಿರುಮಲೆ ರಂಗನಾಥ, ಕಾರ್ಮಿಕ ಸಂಘಟನೆಯ ಬಸವರಾಜು, ಹೊಸಪೇಟೆ ಗುರು, ಬಿಎಂಆರ್ಡಿಎ ಮಾಜಿ ಅಧ್ಯಕ್ಷ ಚಂದ್ರಣ್ಣ, ಗ್ರಾ.ಪಂ. ಸದಸ್ಯ ರಾಮಣ್ಣ, ಸಾವನದುರ್ಗ ಲಕ್ಷ್ಮಿನರಸಿಂಹ ದೇವಾಲಯ ಅಧ್ಯಕ್ಷ ನಾಗರಾಜು ಇತರರು ಇದ್ದರು.