ಕಿತ್ತೂರುರಾಣಿ ಚೆನ್ನಮ್ಮ ವಿದ್ಯಾರ್ಥಿ ವಸತಿ ಶಾಲೆಯಿಂದ ಕೋವಿಡ್ ಕೇಂದ್ರ ತೆರವುಗೊಳಿಸಿ : ಉಮೇಶ್
ಮಾಗಡಿ (hairamanagara.in) : ಹುಲಿಕಟ್ಟೆ ಕಿತ್ತೂರುರಾಣಿ ಚೆನ್ನಮ್ಮ ವಿದ್ಯಾರ್ಥಿ ವಸತಿ ಶಾಲೆಯಿಂದ ಕೋವಿಡ್ ಕೇಂದ್ರ ತೆರವುಗೊಳಿಸುವಂತೆ ಎಸ್ಡಿಎಂಸಿ ಸಮನ್ವಯ ವೇದಿಕೆ ಅಧ್ಯಕ್ಷ ಉಮೇಶ್ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರ ಬಳಿ ಸೋಮವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರುವರ್ಷದಿಂದ ಈ ವಸತಿ ಶಾಲೆಯನ್ನು ಕೊವಿಂಡ್ ಕೇಂದ್ರವನ್ನಾಗಿಸಿಕೊಂಡಿರುವುದರಿಂದ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಈ ಬಗ್ಗೆ ಚುನಾಯಿತ ಪ್ರತಿನಿಧಿಗಳು ಯಾವುದೆ ಗಮನಹರಿಸುತ್ತಿಲ್ಲ, ಇಲ್ಲಿ ಉತ್ತಮ ಶಿಕ್ಷಣ, ನಂಭಿಕೆ, ಶಿಕ್ಷಣದಿಂದಾಗಿ ರಾಜ್ಯದ ವಿವಿದೆಡೆಗಳಿಂದ ಕೂಲಿಕಾರ್ಮಿಕರು, ಹಿಂದುಳಿದವರ, ಬಡವರ ಮಕ್ಕಳು ವಿದ್ಯಾಬ್ಯಾಸಕ್ಕೆ ಸೇರಿಸಿದ್ದು ಮಾ. ತಿಂಗಳಲ್ಲಿ ಎಸ್ಎಸ್ಎಲ್ ಪರೀಕ್ಷೆಯಿದ್ದು ಶಾಲೆಗೆ ರಜೆ ನೀಡಿ ಒಂದು ತಿಂಗಳಾಗಿದೆ ಇದರಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವುದಾದರು ಏಗೆ ಎಂದು ಪ್ರಶ್ನಿಸಿದರು.
ತಾಲೂಕಿನಲ್ಲಿ ಕೃಷಿ, ರೇಷ್ಮೆ ಇಲಾಖೆ, ಕಿತ್ತೂರು ರಾಣಿ ಚೆನ್ನಮ್ಮ ಕಟ್ಟಡಗಳು ಖಾಲಿ ಬಿದಿದ್ದು ಇವುಗಳಲ್ಲಿ ಕೊವಿಡ್ ಕೇಂದ್ರ ನಿರ್ಮಿಸದೆ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರುವ ವಸತಿ ಶಾಲೆಯನ್ನು ಕೊವಿಡ್ ಕೇಂದ್ರವನ್ನಾಗಿ ಮಾಡಿರುವ ಉದ್ದೇಶವಾದರು ಏಕೆ?. ಈ ಸಮಸ್ಯೆಗಳ ಬಗ್ಗೆ ಕಳೆದ 20 ದಿನಗಳಿಂದ ಪೋಷಕರು ಮೌಖಿಕವಾಗಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರು ಸಮಸ್ಯೆ ಬಗೆಹರಿಸಿಲ್ಲ ಮೂಲಭೂತ ಸೌಕರ್ಯ, ಹಕ್ಕುಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮಹತ್ವ ಪೂರ್ಣವಾಗಿದ್ದು ಇದರಲ್ಲಿ ವಂಚಿತರಾಗಿ ಶೋಚನೀಯ ಸ್ಥಿತಿಯಾಗಿದೆ ಎಂದು ಲೇವಡಿ ಮಾಡಿದರು.
ರಾಜ್ಯವ್ಯಾಪ್ತಿಯ ಎಲ್ಲಾ ಕಿತ್ತೂರುರಾಣಿ ಚೆನ್ನಮ್ಮ ವಿದ್ಯಾರ್ಥಿ ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಇಲ್ಲಿ ಏಕೆ ನಮ್ಮ ಮಕ್ಕಳ ಭವಿಷ್ಯಕ್ಕೆ ತೊಂದರೆ ನೀಡುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಕೋವಿಡ್ ಕೇಂದ್ರ ಸ್ಥಳಾಂತರಿಸಿ ಎಂದಿನಂತೆ ಇಲ್ಲಿ ಶಾಲೆ ಆರಂಭಿಸದೆ ಇದ್ದಲ್ಲಿ 180 ಮಂದಿ ಪೋಷಕರು, ಎಸ್ಡಿಎಂಸಿ ಸದಸ್ಯರು, ವಿವಿದ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪೋಷಕ ಶಾನುಬೋಗನಹಳ್ಳಿ ಮುರುಳಿಧರ್ ಮಾತನಾಡಿ, ನನ್ನ ಮಗಳು ಇಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದು ಇಲ್ಲಿನ ಆಡಳಿತಾಧಿಕಾರಿ ಪೊನ್ ಕರೆ ಮಾಡಿ ಜ.6 ರಂದು ಏಕಾಏಕಿ ನಿಮ್ಮ ಮಗಳನ್ನು ಕರೆದೊಕೊಂಡು ಹೋಗುವಂತೆ ಸೂಚಿಸಿದರು ಈ ವೇಳೆ ತರಾತುರಿಯಲ್ಲಿ ಕರೆದುಕೊಂಡು ಹೋಗಲಾಗಿದೆ. ಈ ಬಗ್ಗೆ ಪ್ರಶ್ನಿಸಿದ ವೇಳೆ ಸರಕಾರ, ತಹಶೀಲ್ದಾರ್ ಅದೇಶ ಎಂಬ ಉತ್ತರ ಹೇಳಿದರು. ಇದರಿಂದ ನಮ್ಮ ಮಕ್ಕಳಿ ಭವಿಷ್ಯಕ್ಕೆ ಪೆಟ್ಟುಬಿದಂತಾಗಿದೆ ನಮ್ಮ ಸಮಸ್ಯೆಗಳನ್ನು ಸರಕಾರ ಪರಿಗಣಿಸಿ ನಮಗೆ ನ್ಯಾಯದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಕಲ್ಲುದೇವನಹಳ್ಳಿ ಮಹದೇವಯ್ಯ ಮಾತನಾಡಿ, ಕೊವಿಡ್ ಕೇಂದ್ರ ಮಾಡಿಕೊಂಡರೆ ನಮ್ಮ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದಾದರು ಯಾರು ಎಂದು ಬಿಇಒ ಅವರನ್ನು ವಿಚಾರಿಸಿದಾಗ ನಮಗೆ ಕೊವಿಡ್ ಬಂದಿದೆ ನಾನು ಏನು ಮಾತನಾಡುವುದಿಲ್ಲ, ನಿಮಗೆ ಕೋವಿಡ್ ಬಂದಿದ್ದರೆ ಏನು ಮಾಡುತಿದ್ದೀರಿ ಎಂದು ದಬಾಯಿಸಿದರು. 250 ಮಕ್ಕಳು ವಿದ್ಯಾಬ್ಯಾಸ ಮಾಡುತ್ತಿದ್ದರು ಕೋವಿಡ್ ಕೇಂದ್ರದಿಂದಾಗಿ ಪೋಷಕರು ಗಾಬರಿ ಪಟ್ಟು ಟಿಸಿ ಪಡೆದು ಬೇರೆಡೆಗಳಿಗೆ ತೆರಳುತ್ತಿದ್ದಾರೆ ಎಂದು ಆರೋಪಿಸಿದರು.
ರಾಮನಗರ ತಾಲೂಕಿನ ಆನಮಾನಹಳ್ಳಿಯಲ್ಲಿ ಮುರಾರ್ಜಿ ದೇಸಾಯಿ ಶಾಲೆಯಿದ್ದು ಇಲ್ಲಿನ ವಿದ್ಯಾರ್ಥಿಗಳಿಗೆ ಕೋವಿಡ್ ದೃಢಪಟ್ಟು ಬೇರೆಡೆಗೆ ಕಳುಹಿಸಿದ್ದು ಈ ಶಾಲೆಗೆ ನಿಮ್ಮ ಮಕ್ಕಳನ್ನು ಕಳುಹಿಸಿ ಎನ್ನುತ್ತಿದ್ದಾರೆ ಇಲ್ಲಿಗೆ ನಮ್ಮ ಮಕ್ಕಳನ್ನು ಕಳುಹಿಸಿ ನಮ್ಮ ಮಕ್ಕಳ ಪ್ರಾಣ ನಾವೆ ಕಳೆಯಬೇಕೆ ಎಂದು ಬೇಸರ ವ್ಯಕ್ತಪಡಿಸಿದರು.
9 ನೇತರಗತಿ ವಿದ್ಯಾರ್ಥಿನಿ ಶಿಲ್ಪಶ್ರೀ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಕೊವಿಡ್ ಕೇಂದ್ರ ನಿರ್ಮಿಸಿರುವುದರಿಂದ ಶಾಲೆ ಆರಂಭಿಸಿಲ್ಲ, ಆನ್ಲೈನ್ ಕ್ಲಾಸ್ನಿಂದ ಶಿಕ್ಷಣ ಕಲಿಯಲು ನೆಟ್ವರ್ಕ್ ಸಮಸ್ಯೆ ಇದೆ ಎಂದ ವೇಳೆ ಆನಮಾನಹಳ್ಳಿ ಶಾಲೆಗೆ ಸೇರಿಸುವಂತೆ ತಿಳಿಸಿದರು ನಾವೂ ಸಹ ಅಲ್ಲಿಗೆ ಹೋಗಲು ತಯಾರಿದ್ದೋ ಅಲ್ಲಿನ ಮಕ್ಕಳಿಗೂ ಕರೊನಾ ಇದ್ದ ಕಾರಣ ಹೋಗಲಿಲ್ಲ ನಮಗೆ ಇಲ್ಲೆ ಶಾಲೆ ಆರಂಭಿಸಬೇಕು ಎಂದರು.
ಫೋಷಕರಾದ ನಾಗರತ್ನ, ಗವಿನಾಗಮಂಗಲ ವಸಂತ, ಕೂಟಗಲ್ಲು ರೂಪ, ಯಶೋಧಮ್ಮ, ಕಲ್ಲುದೇವನಹಳ್ಳಿ ಶಿವಮ್ಮ, ಮರಳದೇವನಪುರ ಲಕ್ಕಪ್ಪ ಸೇರಿದಂತೆ ವಿದ್ಯಾರ್ಥಿನಿಯರು ಇದ್ದರು.