ಮಾಗಡಿ ಪುರಸಭೆಗೆ ನಾಮಿನಿ ಸದಸ್ಯರ ನೇಮಕ

ಮಾಗಡಿ (hairamanagara.in) : ಮಾಗಡಿ ಪುರಸಭೆಗೆ ನೂತನ ಐದು ಮಂದಿ ನಾಮಿನಿ ಸದಸ್ಯರನ್ನಾಗಿ ಸರಕಾರದ ನಗರಾಭಿವೃದ್ದಿ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಎಲ್.ಪ್ರಸಾದ್ ಅವರು ನೇಮಿಸಿದ್ದಾರೆ.
ತಾಲೂಕಿನಲ್ಲಿ ಬಿಜೆಪಿ ಪಕ್ಷವನ್ನು ತಳ ಮಟ್ಟದಿಂದ ಸಾಮಾನ್ಯ ಕಾರ್ಯಕರ್ತರಾಗಿ ಸದೃಢವಾಗಿ ಕಟ್ಟಲು ಸಾಕಷ್ಟು ಶ್ರಮಿಸುತ್ತಿದ್ದವರ ಸಾಲಿನಲ್ಲಿದ್ದ ಎಂ.ಆರ್. ರಾಘವೇಂದ್ರ, ಬಿ.ಎಸ್.ದೀಪಾ, ಎಂ.ಟಿ.ಶಿವಣ್ಣ, ಮಂಜುನಾಥ್, ಸಿದ್ದಪ್ಪ ಅವರು ಗಳನ್ನು ಬಿಜೆಪಿ ಪಕ್ಷ ಗುರುತಿಸಿ ಸರಕಾರಕ್ಕೆ ಶಿಪಾರಸ್ಸು ಮಾಡಿ ಪುರಸಭೆಗೆ ನಾಮಿನಿ ಸದಸ್ಯರನ್ನಾಗಿ ನೇಮಕ ಮಾಡಿದೆ.
ನೂತನವಾಗಿ ಎರಡನೇ ಭಾರಿಗೆ ಪುರಸಭೆ ನಾಮಿನಿ ಸದಸ್ಯರಾಗಿ ನೇಮಕವಾದ ಎಂ.ಆರ್.ರಾಘವೇಂದ್ರ ಮಾತನಾಡಿ, ಬಿಜೆಪಿ ಪಕ್ಷದ ಸಂಘಟನೆಯನ್ನು ಗುರುತಿಸಿ ನನಗೆ ಎರಡನೇ ಭಾರಿಗೆ ಪುರಸಭೆಗೆ ನಾಮಿನಿ ಸದಸ್ಯನಾಗಿ ಆಯ್ಕೆಮಾಡಿದೆ, ಪುರಸಭೆ ವ್ಯಾಪ್ತಿಯ ಪ್ರತಿ ವಾರ್ಡ್‍ಗಳನ್ನು ವೀಕ್ಷಿಸಿ ಅಲ್ಲಿನ ಕುಂದು ಕೊರತೆಗಳ ಬಗ್ಗೆ ಪರಿಶೀಲನೆ ನಡೆಸಿ ಸಭೆಯ ಗಮನ ಸೆಳೆದು ಸಮಸ್ಯೆ ಬಗೆಹರಿಸುತ್ತೇನೆ, ಪಟ್ಟಣದ ಸರ್ವತೋಮುಖ ಅಭಿವೃದ್ದಿಗೆ ಸರಕಾರದಿಂದ ನಮ್ಮ ನಾಯಕರ ಸಹಕಾರದಿಂದ ವಿಶೇಷ ಅನುದಾನ ತಂದು ಅಭಿವೃದ್ದಿಗೆ ಒತ್ತುನೀಡುತ್ತೇನೆ. ನನ್ನ ನೇಮಕ ಮಾಡಲು ಸಹಕಾರ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಆಶ್ವತ್ಥನಾರಾಯಣ್, ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಡಾ.ಎ.ಎಚ್.ಬಸವರಾಜು, ಬಿಎಂಆರ್‍ಡಿಎ ಅಧ್ಯಕ್ಷ ಡಾ.ರಂಗಧಾಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ, ತಾಲೂಕು ಅಧ್ಯಕ್ಷ ಹಾಗೂ ಮುಖಂಡರಿಗೆ ಅಭಿನಂದಿಸುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *