ಕೇಂದ್ರ ಬಜೆಟ್​ 2022 : ಯಾವುದು ಅಗ್ಗ, ಯಾವುದು ದುಬಾರಿ?

ನವದೆಹಲಿ (hairamanagara.in) : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಕೇಂದ್ರ ಬಜೆಟ್​​ನಲ್ಲಿ ಕಸ್ಟಮ್ಸ್ ಸುಂಕದಲ್ಲಿ ಹಲವಾರು ಬದಲಾವಣೆಗಳನ್ನು ಘೋಷಿಸಿದ್ದಾರೆ. ಇದು ಕೆಲವು ಅಗತ್ಯ ವಸ್ತುಗಳ ಬೆಲೆಗಳನ್ನು ಪರಿಣಾಮಕಾರಿಯಾಗಿ ಏರಿಸುತ್ತದೆ ಹಾಗೂ ಕೆಲವು ವಸ್ತುಗಳ ಬೆಲೆಯನ್ನು ಇಳಿಸುತ್ತದೆ.

ಯಾವುದು ಅಗ್ಗ?
ಚಿನ್ನ – ವಜ್ರಾಭರಣ : ಕತ್ತರಿಸಿದ ಮತ್ತು ಪಾಲಿಶ್ ಮಾಡಿದ ವಜ್ರಗಳು, ರತ್ನಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 5ಕ್ಕೆ ಕಡಿಮೆ ಮಾಡಲಾಗಿದೆ. ಹೀಗಾಗಿ, ಚಿನ್ನ ಮತ್ತು ವಜ್ರಾಭರಣದ ಬೆಲೆ ಕಡಿಮೆ ಆಗುವ ಸಾಧ್ಯತೆ ಹೆಚ್ಚಿದೆ.ಎಲೆಕ್ಟ್ರಾನಿಕ್ ವಸ್ತುಗಳು : ಮೊಬೈಲ್​ ಬಿಡಿಭಾಗಗಳ ಮೇಲಿನ ಬೆಲೆ ಕಡಿಮೆ ಮಾಡಲಾಗಿದ್ದು, ಫೋನ್ ಚಾರ್ಚರ್, ಟ್ರಾನ್ಸ್​​ಫಾರ್ಮರ್​ಗಳ ಮೇಲೆ ಅಬಕಾರಿ ಸುಂಕ ರಿಯಾಯಿತಿ ನೀಡಲಾಗಿದೆ. ಹೀಗಾಗಿ, ಎಲೆಕ್ಟ್ರಾನಿಕ್ ವಸ್ತುಗಳ ಮೇಲಿನ ದರ ಇಳಿಕೆಯಾಗುವ ಸಾಧ್ಯತೆಯಿದೆ.ರಾಸಾಯನಿಕಗಳು – ಮೆಥಾನಲ್ ಮೇಲಿನ ಅಬಕಾರಿ ಸುಂಕ ಇಳಿಕೆಬಟ್ಟೆ, ಚಪ್ಪಲಿ, ಚರ್ಮದ ಉತ್ಪನ್ನಗಳುಕೃಷಿ ಉಪಕರಗಳುವಿದೇಶಿ ಉತ್ಪನ್ನಗಳು

ಯಾವುದು ದುಬಾರಿ?
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಮೇಲಿನ ಸುಂಕವನ್ನು ಶೇಕಡಾ 20ರಷ್ಟು ಹೆಚ್ಚಿಸಲಾಗಿದೆ. ಹೀಗಾಗಿ, ಅದರಡಿ ಉತ್ಪಾದನೆಯಾಗುವ ವಸ್ತುಗಳ ಬೆಲೆ ಹೆಚ್ಚಾಗಲಿದೆ.ವರ್ಚುವಲ್ ಡಿಜಿಟಲ್ ಸಂಪತ್ತಿನ ಮೇಲೆ ಶೇ.30 ಕಸ್ಟಮ್ಸ್​ ಸುಂಕ

Leave a Reply

Your email address will not be published. Required fields are marked *