ಕೇಂದ್ರ ಬಜೆಟ್‌-2022-23ರ ಹೈಲೈಟ್ಸ್‌ : ಪ್ರಮುಖ ಅಂಶಗಳು ಹೀಗಿವೆ

ನವದೆಹಲಿ (hairamanagara.in) : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ತಮ್ಮ 4ನೇ ಬಜೆಟ್‌ ಅನ್ನು ಇಂದು ಮಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 10ನೇ ಬಜೆಟ್‌ ಇದಾಗಿದೆ. ಜೊತೆಗೆ ಕೋವಿಡ್‌ನಿಂದಾಗಿ ಕಾಗದ ರಹಿತ ಎರಡನೇ ಬಜೆಟ್‌ ಇದಾಗಿದೆ.
2022-23ನೇ ಆರ್ಥಿಕ ವರ್ಷದಲ್ಲಿ ದೇಶದ ಬೆಳವಣೆಗೆ ದರ ಶೇ.9.2ರಷ್ಟು ನಿರೀಕ್ಷೆ, ಕೋವಿಡ್‌ ಸವಾಲನ್ನು ಎದುರಿಸಿ ವ್ಯಾಕ್ಸಿನೇಷನ್‌ ಕಾರ್ಯಕ್ರಮ ಜಾರಿ ಸೇರಿದಂತೆ ಇಂದು ಸೀತಾರಾಮನ್‌ ಮಂಡಿಸಿದ ಬಜೆಟ್‌ನ ಪ್ರಮುಖ ಅಂಶಗಳು ಇಲ್ಲಿವೆ.

2022-23ನೇ ಸಾಲಿನ ಬಜೆಟ್‌ ಭಾಷಣದ ಹೈಲೈಟ್ಸ್‌ಜೀವ ವಿಮಾ ನಿಗಮದ(LIC) ಐಪಿಒ ತರಲಾಗುವುದುಮುಂದಿನ 25 ವರ್ಷದ ಬಳಿಕ ಭಾರತದ ಸ್ವಾತಂತ್ರ್ಯಕ್ಕೆ 100ನೇ ವರ್ಷ ಪೂರೈಸುವ ಹಿನ್ನೆಲೆ ಆರ್ಥಿಕ ಗುರಿಯ ಅಡಿಪಾಯಕ್ಕೆ ನೀಲನಕ್ಷೆಉತ್ಪಾದಕತೆ, ಹವಾಮಾನ ಕ್ರಮ, ಹಣಕಾಸು ಹೂಡಿಕೆ ಹಾಗೂ ಪಿಎಂ ಗತಿ ಶಕ್ತಿ ಯೋಜನೆ ಈ 4 ಸ್ತಂಭಗಳತ್ತ ಗಮನಮುಂದಿನ 3 ವರ್ಷಗಳಲ್ಲಿ ಹೊಸ ತಲೆಮಾರಿನ 400 ವಂದೇ ಭಾರತ್‌ ರೈಲು ಸೇವೆ ಮತ್ತು100 ಪಿಎಂ ಗತಿ ಶಕ್ತಿ ಕಾರ್ಗೋ ಟರ್ಮಿನಲ್‌ಗಳ ನಿರ್ಮಾಣECLGS 2023ರ ಮಾರ್ಚ್‌ವರೆಗೆ ವಿಸ್ತರಣೆ. ಎಂಎಸ್‌ಎಂಇ ವಲಯ ಆರ್ಥಿಕ ನೆರವಿಗೆ 5 ಕೋಟಿ ರೂ., ಖಾತ್ರಿ ಹಣದ ಮಿತಿ 50 ಸಾವಿರ ಕೋಟಿಗೆ ಹೆಚ್ಚಳ5 ನದಿಗಳ ಜೋಡಣೆಗೆ DPR : ಕಾವೇರಿ-ಪೆನ್ನಾರ್, ಕೃಷ್ಣ-ಪೆನ್ನಾರ್‌, ಗೋದಾವರಿ-ಪೆನ್ನಾರ್‌, ಪಾರ್‌-ನರ್ಮದಾ, ದಮನ್‌ಗಂಗಾ-ಪಿಂಜಾನ್‌ ನದಿಗಳ ಜೋಡಣೆ5ಜಿ ಸೇವೆಗಾಗಿ 2022ರಲ್ಲಿ 5ಜಿ ಸ್ಪೆಕ್ಟ್ರಮ್ ಹರಾಜುದೇಶೀಯ ಉತ್ಪಾದನೆಗೆ ಒತ್ತು ನೀಡಿ 2030ರ ವೇಳೆಗೆ 280 ಗಿ.ವ್ಯಾ ಸಾಮರ್ಥ್ಯದ ಸೌರ ಶಕ್ತಿ ಉತ್ಪಾದನೆ. ಸೌರಶಕ್ತಿಯ ಪಿವಿ ದಕ್ಷತೆಯ ಮಾಡ್ಯೂಲ್‌ಗಳ ಉತ್ಪಾದನಾ ಘಟಕಗಳಿಗೆ ಹೆಚ್ಚುವರಿಯಾಗಿ 19,500 ಕೋಟಿ ರೂ. ಹಂಚಿಕೆಬ್ಲಾಕ್‌ಚೈನ್ ಮತ್ತು ಇತರ ತಂತ್ರಜ್ಞಾನಗಳನ್ನು ಬಳಸಿ 2022-23ರಲ್ಲಿ ಡಿಜಿಟಲ್ ರೂಪಾಯಿ ಪರಿಚಯಸಹಕಾರಿ ಸಂಘಗಳಿಗೆ ಶೇ.12 ರಿಂದ ಶೇ.7ಕ್ಕೆ ಆದಾಯ ತೆರಿಗೆ ರಿಯಾಯ್ತಿವರ್ಚುವಲ್/ಡಿಜಿಟಲ್ ಆಸ್ತಿಗಳ ಆದಾಯಕ್ಕೆ ಶೇ.30ರಷ್ಟು ತೆರಿಗೆಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ತೆರಿಗೆ ಕಡಿತ ಮಿತಿ ಶೇ.10 ರಿಂದ 14ಕ್ಕೆ ಏರಿಕೆ.

Leave a Reply

Your email address will not be published. Required fields are marked *