ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ಜಯ : ಕೆ.ಆರ್. ಪ್ರಸಾದ್ ಗೌಡ

ಮಾಗಡಿ (hairamanagara.in) : ಈ ಬಾರಿಯ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ವಿಜಯಪತಾಕೆ ಹಾರಿಸಲಾಗುವುದು ಎಂದು ಬಿಜೆಪಿ ಮುಖಂಡ ಕೆ.ಆರ್. ಪ್ರಸಾದ್ ಗೌಡ ಹೇಳಿದರು.
ತಾಲೂಕಿನ ಶ್ರೀಪತಿಹಳ್ಳಿ ಲಕ್ಷ್ಮಿನರಸಿಂಹಸ್ವಾಮೀ ದೇವಾಲಯದಲ್ಲಿ ವಿಶೇಷಪೂಜೆ ಸಲ್ಲಿಸಿದ ನಂತರ ರೈತರ ಕಣಕ್ಕೆ ಬೇಟಿ ನೀಡಿ ರೈತರೊಂದಿಗೆ ಚರ್ಚಿಸಿದÀ ವೇಳೆ ಮಾತನಾಡಿದ ಅವರು, ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಪಡೆ ಸದೃಢವಾಗಿದೆ. ಬೂದಿಮುಚ್ಚಿದ ಕೆಂಡದಂತಿದ್ದ ಸಂಘಟನೆ ಈಗ ಎಲ್ಲರೂ ಒಗ್ಗೂಡಿ ಹೊರ ಬಂದು ಪಕ್ಷದ ಸಂಘಟನೆಗೆ ಒತ್ತು ನೀಡುತ್ತಿದ್ದಾರೆ, ಕ್ಷೇತ್ರವ್ಯಾಪ್ತಿಯ ಸ್ತ್ರಿ ಶಕ್ತಿ, ಮಹಿಳಾ ಸಂಘಟನೆಗಳು ಸಹಕಾರ ನೀಡುತ್ತಿದ್ದಾರೆ ಇನಷ್ಟು ಬೇರು ಮಟ್ಟದಲ್ಲಿ ಪಕ್ಷ ಸಂಘಟಿಸಲು ಶ್ರಮಿಸಲಾಗುತ್ತಿದೆ, ಹಳೆಯ ಬಿಜೆಪಿ ಪಕ್ಷದ ಕಾರ್ಯಕತರು, ಮುಖಂಡರುಗಳನ್ನು ಒಗ್ಗೂಡಿಸಿಕೊಳ್ಳಲಾಗಿದ್ದು ಈಗಾಗಲೇ ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಲೂಕು ಅಧ್ಯಕ್ಷ ಧನಂಜಯ, ಕೋರ್ ಕಮಿಟಿ ಅಧ್ಯಕ್ಷ ರಾಜೇಶ್ ಅವರುಗಳ ಬೆಂಬಲ ಪಡೆಯಲಾಗಿದ್ದು ನಾಳೆಯಿಂದ ನಮ್ಮೊಂದಿಗೆ ಪ್ರತಿ ಗ್ರಾಮಕ್ಕೂ ತೆರಳಿ ಪಕ್ಷ ಸಂಘಟನೆಗೆ ಶ್ರಮಿಸಲಿದ್ದಾರೆ ಎಂದರು.

2023ರ ವಿಧಾನಸಭಾ ಚುನಾವಣೆಗೆ ಸ್ಪಂರ್ಧಿಸಲು ನಮ್ಮ ನಾಯಕರು ಸೂಚಿಸಿದ್ದು ಈ ಹಿನ್ನಲೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಪ್ರತಿ ಗ್ರಾಮಗಳಿಗೆ ತೆರಳಿ ಅವರ ಕುಂದು,ಕೊರತೆಗಳನ್ನು ಆಲಿಸಿ ಸಮಸ್ಯೆ ಇದ್ದವರಿಗೆ ನಮ್ಮ ನಾಯಕರ ಸಹಕಾರದಿಂದ ಸಮಸ್ಯೆ ಬಗೆಹರಿಸಲಾಗುತ್ತಿದೆ. ಚಕ್ರಭಾವಿ ಗ್ರಾಮದಲ್ಲಿ ಕಳೆದ ಮೂರುವರ್ಷಗಳಿಂದ ಕುಡಿಯುವ ನೀರಿಗಾಗಿ ಪರಿತಪ್ಪಿಸುತ್ತಿದ್ದು ಈ ವೇಳೆ ಇಲ್ಲಿನ ಜನತೆ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ತಂದ ತಕ್ಷಣ ಬೋರ್ ವೆಲ್ ಕೊರೆಸಿ ಅನುಕೂಲ ಕಲ್ಪಿಸಲಾಗಿದೆ ಎಂದರು.
ನಾನು ವಕೀಲನಾಗಿ ತಳಮಟ್ಟದಿಂದ ಜನತೆಯ ಕೆಲಸ ಮಾಡಿಕೊಂಡು ಬಂದಿದ್ದೇನೆ ಚುನಾವಣೆ ಬಂದಾಗ ಬಂದು ನಂತರ ಹೋಗುವ ವ್ಯಕ್ತಿ ನಾನಲ್ಲ, ಜನರ ನಡುವೆ ಸದಾ ಕಾಲ ಇದ್ದು ಅವರ ಸೇವಕನಾಗಿ ಕೆಲಸ ಮಾಡುವುದೆ ನನ್ನ ಮಾನದಂಡವಾಗಿದೆ ಎಂದರು.
ಕಾಳಾರಿ ಕ್ರಾಸ್ ಬಳಿ ಸಿದ್ದಗಂಗಾ ಶ್ರೀಗಳ ಮುಂದಿನ ಜನ್ಮ ದಿನಾಚರಣೆ ಒಳಗೆ ಅವರ ಪುತ್ತಳಿ ನಿರ್ಮಿಸಿ ಅನಾವರಣ ಮಾಡಲು ಈಗಾಗಲೇ ಸಕಲಸಿದ್ದತೆ ಕೈಗೊಳ್ಳಲಾಗಿದೆ. ತಾಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆ ಪ್ರಾರಂಭಿಸಲು ಸಚಿವ ಎಸ್.ಟಿ.ಸೋಮಶೇಖರ್ ಗಮನಕ್ಕೆ ತರಲಾಗಿದ್ದು ಇದಕ್ಕೆ ಸಚಿವರು ಸ್ಪಂದಿಸಿದ್ದು ಇದರ ಆರಂಭಕ್ಕೆ ಪ್ರಮಾಣಿಕವಾಗಿ ಸ್ಪಂದಿಸುತ್ತೇನೆ ಇದರಿಂದ ತಾಲೂಕಿನ ಸಾವಿರಾರು ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಬಿಎಂಆರ್ಡಿ ಮಾಜಿ ಅಧ್ಯಕ್ಷ ನಾರಾಯಣಸ್ವಾಮೀ, ಬಿಜೆಪಿ ಮುಖಂಡ ವೀರಭದ್ರ, ಶ್ರೀಪತಿಹಳ್ಳಿ ಬೋರೇಗೌಡ, ರಮೇಶ್ ಗೌಡ, ಬೈರಪ್ಪ, ಕಾಂತರಾಜು, ಬಜ್ಜ ಜಯರಾಮು, ಕರಲಮಂಗಲ ನಾರಾಯಣ್ ಇತರರು ಇದ್ದರು.

Leave a Reply

Your email address will not be published. Required fields are marked *