ಫೆ.2ರಂದು ಸಹಕಾರಿ ಬ್ಯಾಂಕಿನ ನೂತನ ಶಾಖೆ ಉದ್ಘಾಟನೆ : ಎಚ್.ಎನ್. ಅಶೋಕ್

ಮಾಗಡಿ (hairamanagara.in) : ತಾಲೂಕಿನ ಅಗಲಕೋಟೆ ಹ್ಯಾಂಡ್ ಪೋಸ್ಟ್ ನಲ್ಲಿ ಬೆಂಗಳೂರು ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್ ನ ನೂತನ ಶಾಖೆಯಉದ್ಘಾಟನಾ ಸಮಾರಂಭ ಫೆ 2ರಂದು ಬುಧವಾರ ಬೆಳಿಗ್ಗೆ 10.30ಕ್ಕೆ ಉದ್ಘಾಟನೆಯಾಗಲಿದೆಎಂದು ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕಎಚ್. ಎನ್. ಅಶೋಕ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನಲ್ಲಿ ಕುದೂರು ಬ್ಯಾಂಕ್ ಶಾಖೆ ಆರಂಭವಾಗಿತ್ತು ಈಗ ಎರಡನೇ ಶಾಖೆಯಾಗಿಅಗಲಕೋಟೆ ಹ್ಯಾಂಡ್ ಪೋಸ್ಟ್ ನಲ್ಲಿ ಬ್ಯಾಂಕ್ ನ ಮತ್ತೊಂದು ಶಾಖೆ ಆರಂಭ ಮಾಡುತ್ತಿರುವುದರಿಂದ ಈ ಭಾಗದರೈತರಿಗೆ ಸಾಕಷ್ಟು ಅನುಕೂಲವಾಗಲಿದ್ದು ಈ ಭಾಗದರೈತರು ನಿನ್ನ ಮುಂದೆ ಮಾಗಡಿ ಬ್ಯಾಂಕ್ ಗೆ ಬರುವ ಅವಶ್ಯಕತೆ ಇರುವುದಿಲ್ಲ ಇಲ್ಲೇ ವ್ಯವಹಾರಗಳನ್ನು ರೈತರು ಮಾಡಬಹುದುಇದುಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ಬ್ಯಾಂಕ್ ಶಾಖೆಯ ಉದ್ಘಾಟನೆಯನ್ನು ಸಹಕಾರಿ ಸಚಿವರ ಸಚಿವರಾದ ಎಸ್.ಟಿ. ಸೋಮಶೇಖರ್ ಉದ್ಘಾಟಿಸಲಿದ್ದು ಬ್ಯಾಂಕ್ ನ ಕೌಂಟರ್ ಉದ್ಘಾಟನೆಯನ್ನು ಜಿಲ್ಲಾಉಸ್ತುವಾರಿ ಸಚಿವ ಡಾ. ಅಶ್ವಥ್ ನಾರಾಯಣ್ರವರು ನೆರವೇರಿಸಲಿದ್ದಾರೆ ಶಾಖಾ ವ್ಯವಸ್ಥಾಪಕರ ಕೊಠಡಿ ಉದ್ಘಾಟನೆಯನ್ನು ಸಂಸದ ಡಿ.ಕೆ. ಸುರೇಶ್ ನೆರವೇರಿಸಲಿದ್ದು, ಮೇಲ್ವಿಚಾರಕ ಕೊಠಡಿಯನ್ನು ಶಾಸಕ ಎ. ಮಂಜುನಾಥ್ ಉದ್ಘಾಟಿಸಲಿದ್ದಾರೆ ಭದ್ರತಾ ಕೊಠಡಿಯ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಎಸ್. ರವಿ ರವರು ನೆರವೇರಿಸಲಿದ್ದು ಬ್ಯಾಂಕ್ ನಗದುಕೌಂಟಿಂಗ್ ಉದ್ಘಾಟನೆಯನ್ನು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್. ಅಶೋಕ್ರವರು, ಅಧ್ಯಕ್ಷತೆಯನ್ನು ಬಿ.ಡಿ.ಸಿ.ಸಿ ಬ್ಯಾಂಕ್ ನ ಅಧ್ಯಕ್ಷರಾದ ಡಿ.ಹನುಮಂತಯ್ಯ ವಹಿಸಿದ್ದು ಈ ಸಮಾರಂಭದಲ್ಲಿ ಕೆಪಿಸಿಸಿ ಅಲ್ಪ ಬೆಳೆ ಕೆಸಿಸಿ ಡೈರಿ ಸಾಲ ಸ್ವಸಹಾಯ ಗುಂಪುಗಳ ಸಾಲ ಫ್ಯಾಕ್ಸ್ಎಂಎಸ್ ಸಿ ಸಾಲಸಾಲಗಳನ್ನು ವಿತರಣೆ ಮಾಡಲಿದ್ದುಕಾರ್ಯಕ್ರಮಕ್ಕೆ ತಾಲ್ಲೂಕಿನ ರೈತ ಬಾಂಧವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *