ಸಾವನದುರ್ಗ ಶ್ರೀಲಕ್ಷ್ಮೀನರಸಿಂಹ ದೇವಾಲಯದಲ್ಲಿ ವಿಶೇಷ ಪೂಜೆ

ಮಾಗಡಿ (hairamanagara.in) : ತಾಲೂಕಿನ ಪ್ರಸಿದ್ದ ಸಾವನದುರ್ಗ ಶ್ರೀಲಕ್ಷ್ಮಿನರಸಿಂಹ ದೇವಾಲಯದಲ್ಲಿ ಮಂಗಳವಾರ ಅಮಾವಾಸ್ಯೆ ಪ್ರಯುಕ್ತ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆದರು.
ಜಿಲ್ಲೆಯ ಎ ಗ್ರೇಡ್ ದೇವಾಲಯದಲ್ಲಿ ಒಂದಾದ ಸಾವನದುರ್ಗ ಶ್ರೀಲಕ್ಷ್ಮಿನರಸಿಂಹಸ್ವಾಮೀ ದೇವಾಲಯದಲ್ಲಿ ಅಮಾಸ್ಯೆ ಪ್ರಯುಕ್ತ ದೇವರಿಗೆ ವಿಶೇಷ ಹೂವಿನ ಅಲಂಕಾರ, ಅಭಿಷೇಕ, ಪೂಜಾಕೈಂಕರ್ಯಗಳು ನಡೆದವು.
ಕೊವಿಡ್ ಹಿನ್ನಲೆಯಲ್ಲಿ ಕಳೆದ ಒಂದು ತಿಂಗಳಿಂದ ಶ್ರೀಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ಅವಕಾಶ ಇಲ್ಲದ ಕಾರಣ ಭಕ್ತರು ಬೇಸರ ವ್ಯಕ್ತಪಡಿಸಿದರು. ಮಂಗಳವಾರದಿಂದ ಭಕ್ತರಿಗೆ ಅನುಕೂಲ ಕಲ್ಪಿಸಿರುವುದರಿಂದ ಕೋವಿಡ್ ಮಾರ್ಗದರ್ಶನದಂತೆ ಮಾಸ್ಕ್, ಸಾಮಾಜಿಕ ಆಂತರ ಕಾಯ್ದುಕೊಂಡು ಭಕ್ತರು ದರ್ಶನ ಪಡೆದರು. ಮಾಸ್ಕ್ ಕಡ್ಡಾಯವಾಗಿ ಹಾಕಿಕೊಂಡು ಬಂದಂತಹವರಿಗೆ ಮಾತ್ರ ದೇವಾಲಯದ ಸಿಬ್ಬಂದಿಗಳು ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದರು.
ಬೆಂಗಳೂರು, ತುಮಕೂರು, ನೆಲಮಂಗಲ ಸೇರಿದಂತೆ ಭಕ್ತರು ಸಾವನದುರ್ಗ ಶ್ರೀಲಕ್ಷ್ಮಿನರಸಿಂಹಸ್ವಾಮಿ ದೇವಾಲಯಕ್ಕೆ ತರೆಳಲು ಮಾಗಡಿಯವರೆಗೂ ಬಸ್ ಸೌಲಭ್ಯವಿದ್ದು ಇಲ್ಲಿಂದ ಸಾವನರ್ದುಕ್ಕೆ ತೆರಳಲು ಬಸ್ ಸೌಲಭ್ಯ ಇಲ್ಲದೆ ಭಕ್ತರಿಗೆ ಅನಾನುಕೂಲವಾಗಿದೆ ಈ ಬಗ್ಗೆ ಶಾಸಕ ಎ.ಮಂಜುನಾಥ್ ಅವರು ಗಮನಹರಿಸಿ ಬಸ್ ಸೌಲಭ್ಯ ಒದಗಿಸುವಂತೆ ಭಕ್ತೆ ಗೀತಾ ಮನವಿ ಮಾಡಿದರು.
ದೇವಾಲಯದ ಅಭಿವೃದ್ದಿ ಸಮಿತಿ ಅಧ್ಯಕ್ಷ ನಾಗರಾಜು, ದೇವಾಲಯದ ಇಒ ಎಚ್.ಕೆ. ರಘು, ಪಾರುಪತ್ತೆದಾರು ಕೆಂಪಯ್ಯ, ಕೃಷ್ಣ, ಇಟ್ಟಿಗೆ ಕೃಷ್ಣ, ಟಿ.ಕೆ.ರಾಮು, ಎಲ್ಐಸಿ ಶ್ರೀನಿವಾಸ್ ಇತರರು ಇದ್ದರು.

Leave a Reply

Your email address will not be published. Required fields are marked *