ಅಕ್ಷಯ ಪೌಂಡೇಷನ್ ವತಿಯಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ

ರಾಮನಗರ (hairamanagara.in) : ಅಕ್ಷಯ ಪೌಂಡೇಷನ್ ಬೆಂಗಳೂರು ಇವರ ವತಿಯಿಂದ ರಾಮನಗರ ತಾಲೂಕಿನ ಕಡು ಬಡವರಿಗೆ ಆಹಾರ ಧಾನ್ಯಗಳ ಕಿಟ್‍ಗಳನ್ನು ಉಚಿತವಾಗಿ ಮಂಗಳವಾರ ಕೈಲಾಂಚ ನಾಡ ಕಛೇರಿ ಆವರಣದಲ್ಲಿ ಸಾಂಕೇತಿಕವಾಗಿ ರಾಮನಗರ ತಾಲ್ಲೂಕು ತಹಸೀಲ್ದಾರ್ ಎಂ. ವಿಜಯಕುಮಾರ್ ವಿತರಿಸಿದರು.
ತಹಸೀಲ್ದಾರ್ ಎಂ. ವಿಜಯಕುಮಾರ್ ಮಾತನಾಡಿ ಬೆಂಗಳೂರಿನ ದಿ ಅಕ್ಷಯ ಪೌಂಡೇಷನ್ ಅವರು ರಾಮನಗರ ತಾಲೂಕಿನ ಕಡು ಬಡವರಿಗೆ, ನಿರ್ಗತಿಕರಿಗೆ ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಹಲವು ದಿನಸಿ ಆಹಾರ ಪದಾರ್ಥಗಳನ್ನೊಳಗೊಂಡ ಕಿಟ್‍ಗಳನ್ನು ಉಚಿತವಾಗಿ ವಿತರಿಸಲು ನೀಡಿದ್ದಾರೆ.
ಆಹಾರ ಪದಾರ್ಥಗಳನ್ನು ಬಡವರಿಗೆ, ನಿರ್ಗತಿಕರಿಗೆ ನೀಡುವ ಉದ್ದೇಶದಿಂದ ಪ್ರತೀ ಗ್ರಾಮದಲ್ಲಿ ಕಂದಾಯ ಇಲಾಖೆ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗಗಳ ಕಡು ಬಡವರು, ನಿರ್ಗತಿಕರನ್ನು ಗುರ್ತಿಸಿ ಅರ್ಹರಿಗೆ ಅಕ್ಷಯ ಪೌಂಢೇಷನ್ ನೀಡಿರುವ ಕಿಟ್‍ಗಳನ್ನು ವಿತರಿಸುವ ಹೊಣೆ ಹೊತ್ತಿದೆ.
ರಾಮನಗರ ತಾಲೂಕಿಗೆ 1500 ಕಿಟ್‍ಗಳನ್ನು ಸಂಸ್ಥೆ ನೀಡಿದೆ. ಈಗಾಗಲೇ ಇಲಾಖೆ ವತಿಯಿಂದ ಪಟ್ಟಿ ಮಾಡಲಾಗಿದ್ದು ನೇರವಾಗಿ ಅರ್ಹರಿಗೆ ಆಹಾರ ಪದಾರ್ಥಗಳ ಕಿಟ್‍ಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಕೈಲಾಂಚ 1 ರಾಜಸ್ವ ನಿರೀಕ್ಷಕ ಪುಟ್ಟರಾಜು, ಕೈಲಾಂಚ 2 ರಾಜಸ್ವ ನಿರೀಕ್ಷಕ ರಾಜಶೇಖರ್, ಗ್ರಾಮ ಲೆಕ್ಕಿಗರಾದ ರಫತ್ ವಹಿದಾ, ಕುಮುದಾ ಗ್ರಾಪಂ ಬಿಲ್ ಕಲೆಕ್ಟರ್ ಶೇಖರ್ ಮುಂತಾದವರಿದ್ದರು.

Leave a Reply

Your email address will not be published. Required fields are marked *