ಉಚಿತ ಇಂಗ್ಲೀಷ್ ಸಂವಹನ ತರಬೇತಿ

ರಾಮನಗರ (hairamanagara..in): ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕರ್ನಾಟಕ ಸರ್ಕಾರ ಇವರ ಸಹಯೋಗದೊಂದಿಗೆ 18-25 ವಯೋಮಿತಿಯ ಶಾಲೆ/ಕಾಲೇಜು ಬಿಟ್ಟವರು, ಅರ್ಧದಲ್ಲಿ ವ್ಯಾಸಂಗ ನಿಲ್ಲಿಸಿದವರು ಪ.ಜಾತಿ ಪ.ಪಂಗಡ ಹಿಂದುಳಿದ ವರ್ಗಗಳಿಗೆ ಹಾಗೂ ಅಲ್ಪಸಂಖ್ಯಾತರ ಯುವ ಜನತೆಗೆ ಉನ್ನತ ಮಟ್ಟದ ಇಂಗ್ಲೀಷ್ ಸಂವಹನ ತರಬೇತಿಯನ್ನು ನೀಡಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಹೆಸರು, ವಿಳಾಸ, ಜಾತಿ ಆದಾಯ ಪ್ರಮಾಣಪತ್ರ ಆಧಾರ್ ಕಾರ್ಡ್ ಪ್ರತಿ, ಇ-ಮೇಲ್ ಐಡಿ, 2ಭಾವಚಿತ್ರ ಮೊಬೈಲ್ ನಂಬರ್‌ನೊಂದಿಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಛೇರಿ ಪ್ರಕಾಶ್‌ಚಂದ್ರ ಕಾಂಪ್ಲೆಕ್ಸ್, ಕೆ.ಎಸ್.ಆರ್.ಟಿ.ಸಿ ಬಸ್‌ಡಿಪೋ ಎದುರು, ಅರ್ಚಕರಹಳ್ಳಿ, ಬಿ.ಎಂ ರಸ್ತೆ, ರಾಮನಗರ ಇವರನ್ನು ಸಂಪರ್ಕಿಸುವುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಹೆಚ್ಚಿನ ಮಾಹತಿಗಾಗಿ ದಕ್ಷಿಣಾ ಮೂರ್ತಿ-9916157938, ಉಪೇಂದ್ರ-7411845322 ರವರನ್ನು ಸಂಪರ್ಕಿಸುವುದು.

Leave a Reply

Your email address will not be published. Required fields are marked *