ಕ್ವೆಸ್ಟ್ ಗ್ಲೋಬಲ್‌ನಿಂದ ʼಇಂಜೀನಿಯಂʼ ಎಂಜಿನಿಯರಿಂಗ್ ನಾವೀನ್ಯತೆಯ ಸ್ಪರ್ಧೆಯ ಅಂತಿಮ ಸುತ್ತಿಗೆ ಹತ್ತು ತಂಡಗಳ ಆಯ್ಕೆ
10 ವರ್ಷಗಳಿಂದ ಇಂಜೀನಿಯಂ ಮೂಲಕ ಯುವ ಎಂಜಿನಿಯರಿಂಗ್ ಪ್ರತಿಭೆಗಳನ್ನು ಪೋಷಿಸುತ್ತಿರುವ ಕ್ವೆಸ್ಟ್ ಗ್ಲೋಬಲ್
ವಿಶ್ವ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಹೊಸತನದಿಂದ ಯೋಚಿಸಲು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲು ವೇದಿಕೆಯಾದ ಇಂಜೀನಿಯಂ.
ತಮ್ಮ ಆಲೋಚನೆಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ಇಳಿಸಿ, ನಾವು ಬದುಕುವ, ಕೆಲಸ ಮಾಡುವ, ಪ್ರಯಾಣಿಸುವ ಮತ್ತು ತೊಡಗಿಸಿಕೊಳ್ಳುವ ರೀತಿಯನ್ನು ಹೊಸ ಎತ್ತರಕ್ಕೇರಿಸಲು ಅಂತಿಮ ಸುತ್ತಿನ ತಂಡಗಳಿಗೆ ನೆರವಾಗಲಿರುವ ಕ್ವೆಸ್ಟ್ ಗ್ಲೋಬಲ್‌ನ ಉದ್ಯಮ ತಜ್ಞರು
ಮಂಡ್ಯ (hairamanagara.in) : ಜಾಗತಿಕ ಎಂಜಿನಿಯರಿಂಗ್ ಸೇವಾ ಕಂಪೆನಿ ಕ್ವೆಸ್ಟ್ ಗ್ಲೋಬಲ್, ಎಂಜಿನಿಯರಿಂಗ್ ಸಂಶೋಧನೆಗಾಗಿ ನಡೆಯುವ ʼಇಂಜೀನಿಯಂʼ ಸ್ಪರ್ಧೆಯ ಅಂತಿಮ ಸುತ್ತಿಗೆ ಹತ್ತು ಮಂದಿಯನ್ನು ಆಯ್ಕೆ ಮಾಡಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಉದ್ಯಮ ಆಸಕ್ತಿಯನ್ನು ಬೆಳೆಸುವ ಉದ್ದೇಶವನ್ನು ಈ ಸ್ಪರ್ಧೆ ಹೊಂದಿದೆ. ಇಂಜೀನಿಯಂ ಮೂಲಕ ಕ್ವೆಸ್ಟ್ ವಿಶ್ವದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಎಂಜಿನಿಯರಿಂಗ್ ಕೌಶಲ್ಯ ಬಳಸಿಕೊಳ್ಳಲು ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿದೆ.
ಕಳೆದ ಹತ್ತು ವರ್ಷಗಳಿಂದ ಇಂಜೀನಿಯಂ ಭಾರತದಲ್ಲಿ ಪ್ರತಿಭಾವಂತ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೇರಣೆ ನೀಡಲು ಯಶಸ್ವಿಯಾಗಿದ್ದು, ಸಮಾನಮನಸ್ಕ ಟೆಕ್ ಆಸಕ್ತರ ವೇದಿಕೆಯ ಮುಂದೆ ತಮ್ಮ ಕನಸಿನಂತೆ ಬದಕಲು ನೆರವಾಗುತ್ತಿದೆ. ದೇಶಾದ್ಯಂತ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆ ಮುಕ್ತವಾಗಿದ್ದು, ಶೈಕ್ಷಣಿಕ ಸಂಸ್ಥೆಗಳ ಮೂಲಕ ಉದ್ಯಮದ ಅಗತ್ಯತೆಗಳಿಗೆ ಸ್ಪಂದಿಸಿ, ಉದ್ಯಮ ಮತ್ತು ಅಕಾಡೆಮಿಯ ನಡುವೆ ಸಂಪರ್ಕ ಕಲ್ಪಿಸಿ, ʼಸಿದ್ಧʼ ವೃತ್ತಿಪರರನ್ನು ಬೆಳೆಸಲು ಸಹಾಯ ಮಾಡುತ್ತಿದೆ. ಅಂತಿಮಗೊಳಿಸಲಾದ ಪ್ರಾಜೆಕ್ಟ್‌ಗಳಲ್ಲಿ ಪ್ರತಿಪಾದಿಸುವ ಪರಿಹಾರಗಳು ನಾವು ಬದುಕುವ, ಕೆಲಸ ಮಾಡುವ, ಪ್ರಯಾಣಿಸುವ ಮತ್ತು ತೊಡಗಿಸಿಕೊಳ್ಳುವ ರೀತಿಯನ್ನು ಹೊಸಸ್ತರಕ್ಕೆ ಕೊಂಡೊಯ್ಯುತ್ತಿವೆ.
ಅಂತಿಮ ಸುತ್ತಿಗೆ ಆಯ್ಕೆಯಾದ ಹತ್ತು ಮಂದಿ ತಮ್ಮ ಆಲೋಚನೆಗಳನ್ನು ಸುಧಾರಿಸಿ ಫೈನಲ್ ಸುತ್ತಿಗೆ ತಲುಪಲು ಸಹಾಯ ಮಾಡಲು ಉದ್ಯಮ ಕ್ಷೇತ್ರದ ತಜ್ಞರ ತಂಡವನ್ನು ಕ್ವೆಸ್ಟ್ ಹೊಂದಿದೆ. ಈ ಬಾರಿ ಅಂತಿಮ ಸುತ್ತಿಗೆ ತಲುಪಿದ ಕರ್ನಾಟಕದ ತಂಡಗಳು ಹೀಗಿವೆ; ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಪೆಸಿಟ್), ಎಂವಿಜೆ ಕಾಲೇಜ್ ಆಫ್ ಎಂಜಿನಿಯರಿಂಗ್ (ಎಂವಿಜೆಸಿಇ), ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಪಿಇಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್ (ಪಿಇಎಸ್‌ಸಿಇ), ಪಿಇಎಸ್ ಯೂನಿವರ್ಸಿಟಿ.
ಇವುಗಳಲ್ಲದೇ ಕೇರಳದ ಆದಿ ಶಂಕರಾಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಗ್ ಆಂಡ್ ಟೆಕ್ನಾಲಜಿ, ಅಮ್ಮಳ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್, ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ತಮಿಳುನಾಡಿನಿಂದ ಕ್ರಮವಾಗಿ ಜಯವಂತರಾವ್ ಸಾವಂತ್ ಕಾಲೇಜ್ ಆಫ್ ಎಂಜಿನಿಯರಿಂಗ್, ಬೆನ್ನೆಟ್ ಯೂನಿವರ್ಸಿಟಿ, ಮತ್ತು ವೇಲ್ ಟೆಕ್ ಯೂನಿವರ್ಸಿಟಿ ತಂಡಗಳಿವೆ. ಇಂಜೀನಿಯಂನ ಅಂತಿಮ ವಿಜೇತರನ್ನು 2022ರ ಫೆಬ್ರುವರಿ 11ರಂದು ಸಂಜೆ 5.15 ಗಂಟೆಗೆ ನಡೆಯುವ ವರ್ಚುವಲ್ ಕಾರ್ಯಕ್ರಮದಲ್ಲಿ ಪ್ರಕಟಿಸಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಕ್ವೆಸ್ಟ್ ಗ್ಲೋಬಲ್‌ನ ಡೆಲಿವರಿ ವಿಭಾಗದ ಗ್ಲೋಬಲ್ ಹೆಡ್ ಶ್ರೀಕಾಂತ್ ನಾಯಕ್ ಅವರು “ಸುರಕ್ಷಿತ ಮತ್ತು ಸ್ಮಾರ್ಟ್ ವಿಶ್ವವನ್ನು ನಿರ್ಮಿಸಲು ಡಿಜಿಟಲ್, ಎಲೆಕ್ಟ್ರಾನಿಕ್ ಮತ್ತು ಮೆಕಾನಿಕಲ್ ಎಂಜಿನಿಯರಿಂಗ್ ಸೇವೆಗಳನ್ನು ಭವಿಷ್ಯ ಸನ್ನದ್ಧವಾಗಿಡುವ ಕೆಲಸವನ್ನು ಕ್ವೆಸ್ಟ್ ಮಾಡುತ್ತಿದೆ. ನಾಳಿನ ಭವಿಷ್ಯ ಇಂದಿನ ಸಮರ್ಥ ಪ್ರತಿಭಾವಂತ ಯುವ ಎಂಜಿನಿಯರ್‌ಗಳ ಮೇಲಿದೆ ಎಂಬುದು ನಮಗೆ ಗೊತ್ತಿದೆ. ಕ್ವೆಸ್ಟ್ ಇಂಜೀನಿಯಂ ಸ್ಪರ್ಧೆ ಉದ್ಯಮ ಮತ್ತು ಅಕಾಡೆಮಿಗಳ ನಡುವಿನ ಸಹಕಾರಕ್ಕೆ ಉತ್ತಮ ಉದಾಹರಣೆಯಾಗಿದೆ. ಇದು ಹೊಸತನ ಮತ್ತು ಉದ್ಯಮಿ ಮನೋಭಾವವನ್ನು ಬೆಳೆಸುತ್ತದೆ. ಜನರ ಪ್ರತಿಭೆಯಲ್ಲಿ ಹೂಡಿಕೆ ಮಾಡುವುದು ಕ್ವೆಸ್ಟ್‌ನ ಸಂಸ್ಕೃತಿಯ ಭಾಗವಾಗಿದ್ದು, ಇಂಜೀನಿಯಂ ಮೂಲಕ ಈ ಮನೋಭಾವವನ್ನು ಬೆಳೆಸುವುದಕ್ಕೆ ಕ್ವೆಸ್ಟ್ ಸಂತೋಷಪಡುತ್ತದೆ. ತಂಡಗಳು ಸ್ಪರ್ಧೆಯಲ್ಲಿ ಮುಂದುವರೆದಿರುವಂತೆಯೇ ಅವುಗಳ ಕೆಲಸಗಳ ಬೆಳವಣಿಗೆಗಳನ್ನು ನಾನು ಎದುರು ನೋಡುತ್ತಿದ್ದೇನೆ” ಎಂದು ಹೇಳಿದರು.
ಎಂಜಿನಿಯರ್‌ಗಳಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಬೆಳೆಸುವ ಸಂಸ್ಕೃತಿಯಲ್ಲಿ ಕ್ವೆಸ್ಟ್ ಇಟ್ಟಿರುವ ನಂಬಿಕೆಗೆ ಇಂಜೀನಿಯಂ ಸಾಕ್ಷಿಯಾಗಿದೆ. ಉದ್ಯಮ ಮತ್ತು ಅಕಾಡೆಮಿಯ ನಡುವೆ ಇರುವ ಅಂತರವನ್ನು ಬೆಸೆದು, ಕುಶಲಕರ್ಮಿಗಳ ಸಮೂಹವನ್ನು ಕಟ್ಟುವುದಕ್ಕೆ ಈ ವೇದಿಕೆ ಕ್ವೆಸ್ಟ್‌ನ ಎಂಜಿನಿಯರಿಂಗ್ ಕ್ಷಮತೆಯನ್ನು ಉತ್ತಮವಾಗಿ ಉಪಯೋಗಿಸಿಕೊಂಡಿದೆ.