ಪ್ರತಿ ರೈತರಿಗೆ ಬೆಳೆ ಸಾಲ ನೀಡಲಾಗುವುದು : ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಬ್ಯಾನರ್ ನಲ್ಲಿ ನನ್ನ ಪೋಟೊ ಹಾಕಿಲ್ಲ ಎಂದು ಸಣ್ಣತನ ಪ್ರದರ್ಶಿಸುವುದಿಲ್ಲ : ಎ. ಮಂಜುನಾಥ್
ಮಾಗಡಿ (hairamanagara.in) : ರಾಜ್ಯದ ಪ್ರತಿ ರೈತರಿಗೆ ಬೆಳೆಸಾಲ ನೀಡಲಾಗುವುದು ಇದರಿಂದ ಯಾರು ವಂಚಿತರಾಗಬಾರದು ಎಂಬುದು ಸರಕಾರದ ಉದ್ದೇಶವಾಗಿದೆ ಎಂದು ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ತಾಲೂಕಿನ ಆಗಲಕೋಟೆ ಹ್ಯಾಂಡ್ ಪೋಸ್ಟ್ ಬಳಿ ಬುಧವಾರ ಬಿಡಿಸಿಸಿ ಬ್ಯಾಂಕ್ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ 26 ಲಕ್ಷ ರೈತರಿಗೆ 20, 810 ಕೋಟಿರೂ ಹಣ ನೀಡಲು ಟಾರ್ಗೆಟ್ ಮಾಡಲಾಗಿದೆ, 20,810 ಕೋಟಿಯಲ್ಲಿ ಈಗಾಗಲೇ 14 ಸಾವಿರ ಕೋಟಿಹಣವನ್ನು 20 ಲಕ್ಷ ರೈತರಿಗೆ ಸಾಲನೀಡಲು ಚಾಲನೆ ನೀಡಲಾಗಿದೆ ಉಳಿದ ರೈತರಿಗೆ ಮಾಚ್. 25 ರ ಒಳಗೆ ಸಾಲ ನೀಡಲು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ, ಎಚಿಡಿ ಅವರಿಗೆ ಸೂಚಿಸಲಾಗಿದೆ ಯಾವ ರೈತರು ಬೆಳೆ ಸಾಲ ನೀಡುತ್ತಿಲ್ಲ ಎಂಬ ಆರೋಪಬಾರದಂತೆ ಹಾಗೂ ಸಾಲನೀಡುವಲ್ಲಿ ತಾರತಮ್ಯ ಮಾಡಬಾರದು ಎಂದು ನಿರ್ದೆಶನ ನೀಡಲಾಗಿದೆ ಈ ಬಗ್ಗೆ 2 ಜಿಲ್ಲೆಗಳಲ್ಲಿ ತಾರತಮ್ಯ ಮಾಡಿದವರ ವಿರುದ್ದ ನೋಟೀಸ್ ನೀಡಿ ಎಚ್ಚರಿಕೆ ನೀಡಲಾಗಿದೆ ಎಂದರು.
ನೂತನವಾಗಿ ರೈತರು ಪ್ರ್ರೂಡ್ಸ್ ಆ್ಯಂಪ್ನಲ್ಲಿ ನೊಂದಾವಣೆ ಮಾಡಲಾಗುತ್ತಿದ್ದು ಇದನ್ನು ರದ್ದು ಮಾಡಲಾಗಿದ್ದು ಮಾ.31ರ ಒಳಗೆ ಹಳೆಯ ಸಿಸ್ಟಂ ನಂತೆ ನೊಂದಾವಣಿ ಮಾಡಿಕೊಳ್ಳಬಹುದಾಗಿದ್ದು, ಏ. 1 ರಿಂದ ಪ್ರ್ರೂಡ್ಸ್ ಆ್ಯಂಪ್ನಲ್ಲಿ ನೊಂದಾವಣೆ ಕಾರ್ಯಪ್ರಾರಂಭಿಸಲಾಗುವುದು. ರಾಜ್ಯದ 21 ಬಿಡಿಸಿಸಿ ಬ್ಯಾಂಕ್ ಗಳು ಸಾಲ ನೀಡಲು ಮುಚ್ಚೂಣಿಯಲ್ಲಿದೆ,
ತಾಲೂಕಿಗೆ 34 ಕೋಟಿ ನೀಡಲು ಟಾರ್ಗೆಟ್ ರೂಪಿಸಲಾಗಿದೆ, ರಾಜ್ಯದ ರೈತರು ಪಡೆದ ಸಾಲ ಇತರೆ ಸಂಪೂರ್ಣ ಮಾಹಿತಿ ಉಳ್ಳವರ ಅನುಕೂಲಕ್ಕಾಗಿ ಒಂದೇ ಸಾಫ್ಟ್ ವೇರು ಅಳವಡಿಸಲು ಹಣಕಾಸು ವ್ಯವಸ್ಥೆ ಕಲ್ಪಿಸಲಾಗಿದೆ ಇದರಿಂದ 30, 84 ಲಕ್ಷ ಮಂದಿ ರೈತರ ಮಾಹಿತಿ ಒಂದೇ ಸಮಯದಲ್ಲಿ ಸಿಗಲಿದೆ. 120 ಮಂದಿ ಕಾರ್ಯದರ್ಶಿಗಳು ರೈತರಿಗೆ ಮೋಸಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ ಇದಾಗದಂತೆ ಸಾಪ್ಟ್ ವೇರು ಅಳವಡಿಸಲು ಚಾಲನೆ ನೀಡಲಾಗಿದೆ ಎಂದರು.
ಎ. ಮಂಜುನಾಥ್ ಆಕ್ಟಿವೇಟ್ ಇರುವ ಶಾಸಕ
ಶಾಸಕರಿಗೆ ಪ್ರಥಮ ಮರ್ಯಾದೆ ನೀಡಬೇಕು, ಇದರಲ್ಲಿ ಯಾವುದೇ ರಾಜಕೀಯ ಇರಬಾರದು ನಾನು ಎಸ್.ಟಿ.ಸೋಮಶೇಖರ್ ಹಾಗಿ, ಸಚಿವರಾಗಿ ಬಂದಿಲ್ಲ ಸರಕಾರವಾಗಿ ಬಂದಿದ್ದೇನೆ, ಸರಕಾರ ಬಂದಂತಹ ವೇಳೆ ಆ ಭಾಗದ ಚುನಾಯಿತ ಪ್ರತಿನಿಧಿ ಪ್ರತಿನಿಧಿಗಳನ್ನು ಪ್ರೋಟೋಕಾಲ್ ರೀತಿ ಪೋಟೋಗಳನ್ನು ಹಾಕಬೇಕು, ಒಬ್ಬ ಶಾಸಕರಿಗೆ ಅಪಪ್ರಚಾರವಾಗಬಾರದು ಇದನ್ನು ಸರಕಾರ ಸಹಿಸುವುದಿಲ್ಲ. ಎ.ಮಂಜುನಾಥ್ ಆಕ್ಟಿವೇಟ್ ಇರುವ ಶಾಸಕ ಎಂದರು.
ಮಾಗಡಿಯಿಂದ ಸೋಮವಾರ ಪೇಟೆಯವರೆಗೆ ವ್ಯವಸ್ಥಿತವಾಗಿ ರಸ್ತೆ ಕಾಮಗಾರಿ ನಡೆಯುತ್ತಿದೆ, ಸುಮ್ಮನಹಳ್ಳಿಯಿಂದ ನೈಸ್ ರಸ್ತೆಯವರೆಗೆ ಮೇಲು ಸೇತುವೆ ಮಾಡಲು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಇದರಿಂದ ಮಾಗಡಿ ಜನರಿಗೆ ಅನುಕೂಲವಾಗಲಿದೆ, ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಸೇರುತ್ತಿರುವ ಕಲುಷಿತ ನೀರು ತಡೆಯಲಾಗುವುದು. ಈ ಜಲಾಶಯಕ್ಕೆ ಎತ್ತಿನಹೊಳೆಯಿಂದ ನೀರು ತುಂಬಿಸಲಾಗುವುದು. ಸೆ. ಒಳಗೆ ಚಾಲನೆ ನೀಡಲಾಗುವುದು, ಬೆಂಗಳೂರಿನ ಭಾಗದಲ್ಲಿ ರಾಜಕೀಯವಾಗಿ ಹಾಳಿ ಬೆಳೆದವರು ಎಚ್.ಎಂ,ರೇವಣ್ಣ, ಸಿ.ಎಂ.ಲಿಂಗಪ್ಪ. ಎಪಿಎಂಸಿ ಮಾರುಕಟ್ಟೆ ನಿರ್ಮಿಸಲು ಜಾಗ ಹುಡುಕಿದರೆ ಅನುದಾನ ಬಿಡುಗಡೆ ಮಾಡಲಾಗುವುದು. ಪಿಎಲ್ಡಿ ಬ್ಯಾಂಕ್ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲಾಗುವುದು ಎಂದರು.
ರಾಜ್ಯದ ಎಂಟು ಜಿಲ್ಲೆಗಳ ವ್ಯಾಪ್ತಿಯ ಬಿಪಿಎಲ್ ಕಾರ್ಡ್ ದಾರರ ಬೇಡಿಕೆ ಅನುಗುಣವಾಗಿ ಬೇಕಿರುವಷ್ಟು ರಾಗಿಯನ್ನು ಸಣ್ಣ ಇಡುವಳಿದಾರರಿಂದ ಖರೀದಿಸಲಾಗಿದೆ, ದೊಡ್ಡ ಇಡುವಳಿದಾರರಿಂದ ರಾಗಿ ಖರೀದಿಸಲು ಮುಖ್ಯಮಂತ್ರಿಗಳು ಇನ್ನೆರಡು ದಿನಗಳಲ್ಲಿ ಘೋಷಣೆ ಮಾಡಲಿದ್ದಾರೆ, ರಾಗಿ, ಭತ್ತ, ಜೋಳ ಬೆಳೆಗಳಿಗೆ ಬೆಂಬಲ ಬೆಲೆನೀಡಲಾಗುವುದು ಎಂದರು.

ಬ್ಯಾನರ್ ನಲ್ಲಿ ನನ್ನ ಪೋಟೊ ಹಾಕಿಲ್ಲ ಎಂದು ಸಣ್ಣತನ ಪ್ರದರ್ಶಿಸುವುದಿಲ್ಲ : ಎ. ಮಂಜುನಾಥ್
ಶಾಸಕ ಎ. ಮಂಜುನಾಥ್ ಮಾತನಾಡಿ, ಬಿಡಿಸಿಸಿ ಬ್ಯಾಂಕ್ ಪ್ರಾರಂಭದಿಂದ ಈ ಭಾಗದ ಹೈನುಗಾರರಿಗೆ ಅನುಕೂಲವಾಗಿದೆ, ಕೂಟಗಲ್ಲು, ತಿಪ್ಪಸಂದ್ರಬಳಿ ಬ್ಯಾಂಕ್ ತೆರೆಯುವಂತೆ, ಬಿಡದಿ ಬಳಿ ಪಶು ಡಯಾಲಿಸ್ ಸೆಂಟರ್ ಆರಂಭಕ್ಕೆ ಅನುದಾನ, ಪಿಎಲ್ಡಿ ಬ್ಯಾಂಕ್ ಕಟ್ಟಡ ನಿರ್ಮಿಸಲು ಜಾಗ ಗುರುತಿಸಲಾಗಿದೆ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಲು ಸಚಿವರು ಮುಂದಾಗಬೇಕು ಎಂದರು.
ಕಾರ್ಯಕ್ರಮದ ಬ್ಯಾನರ್ ನಲ್ಲಿ ನನ್ನ ಪೋಟೋ ಹಾಕಿಲ್ಲ ಎಂದು ಸಣ್ಣತನ ಪ್ರದರ್ಶಿಸುವುದಿಲ್ಲ ದೊಡ್ಡತನ ಪ್ರದರ್ಶಿಸುತ್ತೇನೆ, ತಿದ್ದುಕೊಳ್ಳಲು ಅವಕಾಶವಿದೆ ತಿದ್ದುಕೊಳ್ಳಲಿ ಎಂದು ಶಾಸಕ ಎ.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೆಶಕ ಎಚ್.ಎನ್.ಆಶೋಕ್ ಮಾತನಾಡಿ, ವಿಎಸ್ಎಸ್ಎನ್ ಗಳ ಕಟ್ಟಡ ನಿರ್ಮಾಣಕ್ಕೆ 10 ಲಕ್ಷ ಅನುದಾನ, ರಾಗಿ ಖರೀದಿ ಗೋದಾಮು ಕಟ್ಟಡ ನಿರ್ಮಾಣ ಮಾಡಲು ಗೋಮಾಳ ಜಮೀನು ಮಂಜೂರು, ಬಿಡಿಸಿಸಿ ಬ್ಯಾಂಕ್ನಲ್ಲಿ ಹಾಲು ಉತ್ಪಾದಕರ ಖಾತೆ ಪ್ರಾರಂಭಿಸಲು, ಠೇವಣಿ ಹಿಡಲು, ಉಳಿದ ಆರು ಬ್ಯಾಂಕ್ ಗಳ ನಿರ್ಮಾಣಕ್ಕೆ ಸಚಿವರು ಸಹಕಾರ ನೀಡುವಂತೆ ಮನವಿ ಮಾಡಿದರು.
ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಹನುಮಂತಯ್ಯ, ಬೆಂಗಳೂರು ಡೇರಿ ಅಧ್ಯಕ್ಷ ನರಸಿಂಹಮೂರ್ತಿ, ಎಪಿಎಂಸಿ ಜಿಲ್ಲಾಧ್ಯಕ್ಷ ಸಿಎಂ. ಮಾರೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರು, ದಿಶಾ ಸಮಿತಿ ಸದಸ್ಯ ಜೆಪಿ.ಚಂದ್ರೇಗೌಡ, ತಾ.ಪಂ. ಮಾಜಿ ಸದಸ್ಯೆ ಸುಮಾ ರಮೇಶ್, ಕಾಂತರಾಜು, ರತ್ನಮ್ಮ ಶ್ರೀನಿವಾಸ್, ಜಿ.ಪಂ.ಮಾಜಿ ಸದಸ್ಯೆ ಕಲ್ಪನಾ ಶಿವಣ್ಣ ಇತರರು ಇದ್ದರು.
ಡಿವೈಎಸ್ ಪಿ ಓಂ. ಪ್ರಕಾಶ್ ಕ್ಷಮೆಯಾಚಿಸಲು ಪತ್ರಕರ್ತರ ಒತ್ತಾಯ :
ಬ್ಯಾಂಕ್ ಉದ್ಘಾಟನೆ ಕಾರ್ಯಕ್ರಮವನ್ನು ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದು ಕಲ್ಯಾಣ ಮಂಟಪ್ಪ ಸಂಪೂರ್ಣ ತುಂಬಿತುಳುಕುತಿದ್ದು ಈ ವೇಳೆ ಸುದ್ದಿಮಾಡಲು ತೆರಳಿದ ಪತ್ರಕರ್ತರಿಗೆ ಆಸನದ ವ್ಯವಸ್ಥೆ ಇಲ್ಲದೆ ನಿಂತು ಕೊಂಡೆ ಸುದ್ದಿ ಮಾಡುತ್ತಿದ್ದ ಪತ್ರಕರ್ತರನ್ನು ಡಿವೈಎಸ್ಪಿ ಓಂ.ಪ್ರಕಾಶ್ ಏಕಾಏಕಿ ತಳ್ಳಾಟ, ನುಕ್ಕಾಟ ನಡೆಸಿ ಪತ್ರಕರ್ತರಿಗೆ ಆಗೌರವವಾಗಿ ನಡೆಸಿಕೊಂಡ ವೇಳೆ ಪತ್ರಕರ್ತರೆಲ್ಲರೂ ಸಭೆಯಿಂದ ಹೊರನಡೆಯುತ್ತಿದ್ದ ವೇಳೆ ಮಾಜಿ ಸಚಿವ ಎಚ್.ಎಂ.ರೇವಣ್ಣ ಪತ್ರಕರ್ತರನ್ನು ಕರೆಯುವಂತೆ ಜಿ.ಪಂ. ಮಾಜಿ ಅಧ್ಯಕ್ಷ ಎಂ.ಕೆ.ಧನಂಜಯ ಅವರಿಗೆ ತಿಳಿಸಿ ಎಂ.ಕೆ.ಧನಂಜಯ ಸಭೆಗೆ ಭಾಗವಹಿಸುವಂತೆ ಪತ್ರಕರ್ತರ ಮನಹೊಲಿಸಿದರು. ಪತ್ರಕರ್ತರಿಗೆ ಆಗೌರವ ಉಂಟುಮಾಡಿದ ಡಿವೈಎಸ್ಪಿ ಓಂ.ಪ್ರಕಾಶ್ ನಡೆಗೆ ಪತ್ರಕರ್ತರು ತೀವ್ರವಾಗಿ ಖಂಡಿಸಿ ಕ್ಷಮೆಯಾಚಿಸುವಂತೆ ಪತ್ರಕರ್ತ ಟಿ.ಕೆ.ರಾಮು ಒತ್ತಾಯಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು ಈ ವೇಳೆ ಬಹುತೇಕ ಮಂದಿ ಮಾಸ್ಕ್, ಸಾಮಾಜಿಕ ಆಂತರ ಕಾಯ್ದುಕೊಂಡಿರಲಿಲ್ಲ, ಈ ವೇಳೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕಂಡರು ಕಾಣದಂತೆ ವರ್ತಿಸಿದರು. ಜವಬ್ದಾರಿ ಯುತ ಸ್ಥಾನದಲ್ಲಿರುವ ಸಚಿವ ಎಸ್.ಟಿ.ಸೋಮಶೇಖರ್ ಕೋವಿಡ್ ಮಾರ್ಗ ಸೂಚಿ ಅನುಸರಿಸದೆ ಉಲ್ಲಂಘಿಸಿದರು. ಸಚಿವರು, ಶಾಸಕರು ಸೇರಿದಂತೆ ವೇದಿಕೆಯಲ್ಲಿದ್ದ ಯಾವ ಚುನಾಯಿತ ಪ್ರತಿನಿಧಿಗಳು ಮಾಸ್ಕ್ ಹಾಕಿಕೊಂಡಿರಲಿಲ್ಲ.