ರಾಮನಗರದ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ 1 ಕೆ.ಜಿ. ರೇಷ್ಮೆಗೂಡು 1043 ರೂ.ಗೆ ಮಾರಾಟ
ರಾಮನಗರ (hairamanagara.in) : ರಾಮನಗರ ರೇಷ್ಮೆ ಮಾರುಕಟ್ಟೆಯಲ್ಲಿ ಬುಧವಾರ ದಾಖಲೆ ಮಟ್ಟದಲ್ಲಿ ರೇಷ್ಮೆಗೂಡು ಹರಾಜಾಗಿದ್ದು , ಒಂದು ಕೆಜಿ ರೇಷ್ಮೆಗೂಡು ಬರೋಬ್ಬರಿ 1043 ರೂಪಾಯಿಗೆ ಮಾರಾಟವಾಗಿದೆ.

ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ರೇ ಷ್ಮೆಗೂ ಡಿನ ದರ ನಾ ಲ್ಕು ಡಿಜಿಟ್ ಗೆ ತಲುಪಿರುವುದು ಉತ್ತಮ ಬೆಳವಣಿಗೆ. ದಿನದಿಂದ ದಿನಕ್ಕೆ ರೇ ಷ್ಮೆ ಗೂಡಿನ ದರ ಏರಿಕೆಯಾಗುತ್ತಿದೆ ಎಂದು ಸಚಿವ ಡಾ. ನಾರಾಯಣಗೌಡ ಸಂತೋಷ ವ್ಯಕ್ತಪಡಿಸಿದ್ದಾರೆ.
ರೇಷ್ಮೆ ಮಾರುಕಟ್ಟೆ ಗಳಲ್ಲಿ ಆಗುತ್ತಿದ್ದ ಭ್ರಷ್ಟಾಚಾರ, ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿರುವ ಪರಿಣಾಮದಿಂದ ರೇಷ್ಮೆಗೂಡಿನ ಗುಣಮಟ್ಟಕ್ಕೆ ತಕ್ಕಂತೆ ನೈಜ ಬೆಲೆ ಸಿಗುತ್ತಿದೆ. ರೇಷ್ಮೆ ಇಲಾಖೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ಕೈ ಗೊಂಡ ಪರಿಣಾಮ ದಾಖಲೆ ದರಕ್ಕೆ ರೇಷ್ಮೆ ಗೂಡು ಮಾರಾಟ ಆಗುತ್ತಿದೆ ಎಂದು ಅವರು ಹೇಳಿದ್ದಾರೆ.

ರೇಷ್ಮೆ ದರ ಸರಾಸರಿ ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. 2020-21ನೇ ಸಾ ಲಿನಲ್ಲಿ ಪ್ರತಿ ಕೆಜಿ ರೇಷ್ಮೆ ಗೂಡಿಗೆ ಸರಾ ಸರಿ 300 ರೂಪಾಯಿ ಇತ್ತು. 2021ರ ನವೆಂಬರ್- ಡಿಸೆಂಬರ್ ನಲ್ಲಿ 700-800 ರೂಪಾಯಿ ಇತ್ತು. ಈಗ ಒಂದು ಕೆಜಿ ರೇ ಷ್ಮೆ ಗೂಡು 1043 ರೂಪಾಯಿಗೆ ಮಾರಾಟವಾಗುವ ಮೂಲಕ ದಾಖಲೆ ಸೃಷ್ಟಿಸಿದೆ.

ರೇಷ್ಮೆಗೂಡಿನ ದರ ಇನ್ನೂ ಹೆಚ್ಚಾಗು ವ ಸಾಧ್ಯತೆ ಇದೆ. ರೇಷ್ಮೆ ಬೆಳೆಗಾ ರರ ಜತೆ ನಮ್ಮ ಸರ್ಕಾರ ಇದೆ. ರೇಷ್ಮೆ ಬೆಳೆಗಾ ರರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಹಾಗೂ ಗುಣಮಟಕ್ಕೆ ತಕ್ಕಂತೆ ಉತ್ತಮ ಬೆಲೆ ಸಿಗುವಂತೆ ನೋಡಿಕೊಳ್ಳುತ್ತೇನೆ. ರೇಷ್ಮೆ ಗೂಡು ದರ ನಾಲ್ಕು ಡಿಜಿಟ್ ಗೆ ತಲುಪಿರುವುದು ಮತ್ತಷ್ಟು ರೈತರು ರೇಷ್ಮೆ ಬೆಳೆಯುವು ದಕ್ಕೆ ಪ್ರೇ ರಣೆಯಾ ಗಲಿದೆ ಎಂದು ತಿಳಿಸಿದ್ದಾರೆ.