ಶಿಕ್ಷಕ ವೃತ್ತಿಯಿಂದ ನಿವೃತ್ತರಾದ ಅನುಸೂಯಮ್ಮ ಅವರಿಗೆ ಸನ್ಮಾನ

ರಾಮನಗರ (hairamanagara.in) : ಶಿಕ್ಷಕ ವೃತ್ತಿ ಪವಿತ್ರವಾದ ವೃತ್ತಿಯಾಗಿದ್ದು ವಿದ್ಯಾರ್ಥಿಯ ಬದುಕನ್ನು ರೂಪಿಸಿ ಯೋಗ್ಯರನ್ನಾಗಿಸಿ ಸಮಾಜದ ಅಂಕು ಡೊಂಕುತಿದ್ದುವ ಶಿಕ್ಷಕ ಈ ದೇಶದ ಆಸ್ತಿ ಎಂದು ಹುಣಸನಹಳ್ಳಿ ಗ್ರಾಪಂ ಸದಸ್ಯ ಹೆಚ್.ಎಸ್. ರಾಮಣ್ಣತಿಳಿಸಿದರು.
ಹುಣಸನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಅನುಸೂಯಮ್ಮ ಅವರಿಗೆ ಗ್ರಾಮಸ್ಥರಿಂದ ನಡೆದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸನ್ಮಾನ ಬಿರುದುಗಳು ಅಂದಿನ ದಿನಕ್ಕಷ್ಟೇ ಸೀಮಿತವಾಗಿ ಕೇವಲ ಆತ್ಮತೃಪ್ತಿಗಾಗಿರುತ್ತವೆಆದರೆಯಾವುದೇ ವೃತ್ತಿಯಲ್ಲಿ ಸಿಗದ ಗೌರವ, ಮಾನ್ಯತೆ ಶಿಕ್ಷಕ ವೃತ್ತಿಯಲ್ಲಿ ಸಿಗುತ್ತದೆ ಸಮಾಜ ಶಿಕ್ಷಕರನ್ನು ಗೌರವ ಭಾವದಿಂದಲೇ ನೋಡಿಕೊಂಡು ಬರುತ್ತಿದೆ ಶಿಕ್ಷಕನಿಗೆ ಸಮಾಜಅತ್ಯದ್ಬುತಸ್ಥಾನ, ಗೌರವ ನೀಡುತ್ತಿದೆ.ವಿದ್ಯಾರ್ಥಿಗಳಿಗೆ ನೆಚ್ಚಿನಗುರುವಾಗಿ ಆ ವಿದ್ಯಾರ್ಥಿಯಜೀವನವನ್ನುಉತ್ತಮರೀತಿಯಲ್ಲಿರೂಪುಗೊಳಿಸಿದರೆ ಆ ವಿದ್ಯಾರ್ಥಿತಾನು ಬದುಕಿರುವವರೆಗೂದಿನನಿತ್ಯವೂಆ ಶಿಕ್ಷಕರನ್ನು ದೇವರಂತೆ ಪೂಜಿಸಿ ನಿತ್ಯವೂತನ್ನಕಾಯಕದಲ್ಲಿನೆನೆದು ಸ್ಮರಿಸಿಕೊಳ್ಳುವುದೇನಿಜವಾದ ಶಿಕ್ಷಕನಿಗೆ ಸಿಗುವ ಉನ್ನತ ಸ್ಥಾನಮಾನದಗೌರವವಾಗಿದೆಎಂದುತಿಳಿಸಿದರು.
ಹುಣಸನಹಳ್ಳಿ ಕ್ಲಸ್ಟರ್ ಸಿಆರ್ಪಿ ಗೌರೀಶ್ ಮಾತನಾಡಿಹುಣಸನಹಳ್ಳಿ ಗ್ರಾಮದ ಶಾಲೆಯಲ್ಲಿ ಕಳೆದ 24 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸಿದ ಅನುಸೂಯಮ್ಮಅವರುಗ್ರಾಮಸ್ಥರ, ವಿದ್ಯಾರ್ಥಿಗಳ ಪ್ರೀತಿ, ವಿಶ್ವಾಸಗಳಿಸಿತಮ್ಮಗಳ ಸೇವಾ ಅವಧಿಯಲ್ಲಿಶಾಲೆಗಳಿಗೆ, ತಮ್ಮ ಶಿಕ್ಷಕ ವೃತ್ತಿಗೆಯಾವುದೇಚ್ಯುತಿಬಾರದಂತೆ ನಡೆದುಕಪ್ಪು ಹಲಗೆ ವಿದ್ಯಾರ್ಥಿಗಳ ಜೀವನವನ್ನು ಉಜ್ವಲಗೊಳಿಸುತ್ತದೆ ಎಂಬ ಎಪಿಜೆಅಬ್ದುಲ್ ಕಲಾಂಅವರ ಹಿತನುಡಿಯಂತೆ ನೂರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಈ ಶಿಕ್ಷಕರು ರೂಪಿಸಿದ್ದಾರೆ.
ಇವರ ಶಿಕ್ಷಣ ಸೇವೆ ಕಿರಿಯ ಶಿಕ್ಷಕರಿಗೆ ಆದರ್ಶ ಮತ್ತು ಮಾರ್ಗದರ್ಶಕವಾಗಿದೆಅವರ ಮುಂದಿನ ನಿವೃತ್ತಿಜೀವನ ಸುಖಕರವಾಗಿರಲಿಎಂದು ಶುಭ ಹಾರೈಸಿಅವರ ಮಾರ್ಗದರ್ಶನಇಂದಿನ ಶಿಕ್ಷಕರಿಗೆ ವಿದ್ಯಾರ್ಥಿಗಳಿಗೆದಾರಿ ದೀಪವಾಗಿಲಿಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದಅನುಸೂಯಮ್ಮಗ್ರಾಮದಶಾಲೆಯಲ್ಲಿ ಕಳೆದ 24 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸಿದ್ದೇನೆ ನನ್ನ ಸೇವಾ ಅವಧಿಯಲ್ಲಿಶಾಲೆಗೆ ಯಾವುದೇಚ್ಯುತಿಬಾರದಂತೆ ನಡೆದುಕೊಂಡು ಅನೇಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿರುವ ತೃಪ್ತಿ ನನಗಿದೆಗ್ರಾಮಸ್ಥರ ಪ್ರೀತಿ ವಿಶ್ವಾಸದಿಂದಲೇಇಷ್ಟೊಂದು ಸುದೀರ್ಘ ಸೇವೆ ಸಲ್ಲಿಸಲು ಸಾಧ್ಯವಾಗಿದೆಗ್ರಾಮಸ್ಥರ ಪ್ರೀತಿವಿಶ್ವಾಸಕ್ಕೆ ನಾನು ಎಂದೆಂದಿಗೂಚಿರಋಣಿಅವರ ವಿಶ್ವಾಸವೇನನಗೆ ಸನ್ಮಾನಬಿರುದುಗಳು ಎಂದರು.
ಮುಖ್ಯಶಿಕ್ಷಕಿ ಜೆ.ಎಸ್. ಗಂಗಾಂಭಿಕೆ, ಗ್ರಾಪಂ ಸದಸ್ಯರಾದ ಸುನೀತಾಬಾಯಿ, ಮುತ್ತರಾಜು, ಎಸ್ಡಿಎಂಸಿ ಅಧ್ಯಕ್ಷಜನಾರ್ಧನರಾವ್, ಸದಸ್ಯರಾದ ವೆಂಕಟೇಗೌಡ, ದಾಸೇಗೌಡ, ಸೋಮಣ್ಣ, ಮುಖಂಡರುಗಳಾದ ಸಿದ್ದೋಜಿರಾವ್, ರಾಮಲಿಂಗಯ್ಯ, ಸಿದ್ದೇಗೌಡ, ರಾಮಯ್ಯ, ನಾಗಣ್ಣಶಿಕ್ಷಕರಾದ ವಿ. ಶಿವಪ್ರಕಾಶ್, ಮಂಜುನಾಯಕ್, ಸರಿತಾಕುಮಾರಿ,ಶಿವಣ್ಣ, ನಾಗರತ್ನಮ್ಮ, ಶೀನಪ್ಪ, ಗಂಗಾಧರ್, ಮಂಚೇಗೌಡ, ಶಿವರಾಜು, ಚಿಕ್ಕಗುಂಡಯ್ಯ, ಉಷಾದೇವಿ, ಚಂದ್ರಶೇಖರ್, ಮಂಗಳಮ್ಮ, ಇದ್ದರು.

Leave a Reply

Your email address will not be published. Required fields are marked *